ಟೋಯಿಂಗ್ ವಾಹನದ ಬಗ್ಗೆ ಜನರ ದೂರು : ಪೊಲೀಸರಿಂದ ಪರೇಡ್

ಬೆಂಗಳೂರು, ಜುಲೈ 01 : ಬೆಂಗಳೂರಿನ ಟೋಯಿಂಗ್ ವಾಹನದ ಬಗ್ಗೆ ಜನರಿಂದ ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಇಂದು ವಾಹನದ ಪರೇಡ್ ಮಾಡಿದರು. ಹಲವಾರು ಸೂಚನೆಗಳನ್ನು ಅವರಿಗೆ ನೀಡಿದರು.

ಸೋಮವಾರ ಸಂಚಾರ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಪಿ.ಹರಿಶೇಖರನ್ ಅವರು ಟೋಯಿಂಗ್ ವಾಹನಗಳ ಪರೇಡ್ ಮಾಡಿದರು. ಅದರಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ಸೂಚನೆಗಳನ್ನು ಕೊಟ್ಟರು.

ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಿವಿಧ ರೀತಿಯ ವಾಹನಗಳನ್ನು ಸಾಗಿಸಲು ಇಲಾಖೆಯಲ್ಲಿ ಸಾಕಷ್ಟು ಟೋಯಿಂಗ್ ವಾಹನಗಳು ಇಲ್ಲ. ಆದ್ದರಿಂದ, ಖಾಸಗಿ ರೆಕ್ಕರ್ಸ್‌ಗಳನ್ನು ಉಪಯೋಗಿಸಲಾಗುತ್ತಿದೆ.

P Harishekaran parade for all towing vehicle operators

ಈ ಟೋಯಿಂಗ್ ವಾಹನಗಳ ಕಾರ್ಯಾಚರಣೆಯಲ್ಲಿ ಎಸಗುವ ತಪ್ಪುಗಳ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದವು. ಆದ್ದರಿಂದ, ಪಿ.ಹರಿಶೇಖರನ್ ಅವರ ಸೂಚನೆಯಂತೆ ಎಲ್ಲಾ ಸಂಚಾರಿ ಠಾಣೆಯಲ್ಲಿ ಇಂದು ಪರೇಡ್ ನಡೆಸಲಾಯಿತು.

ಕಾನೂನು ಬದ್ಧವಾಗಿ ಕಾರ್ಯ ನಿರ್ವಹಣೆ ಮಾಡದೆ ಒಂದು ವೇಳೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದ್ದಾಗಲಿ. ಸಂಗ್ರಹಿಸಿದ ಹಣಕ್ಕೆ ಸರಿಯಾದ ರೀತಿಯಲ್ಲಿ ರಶೀದಿ ನೀಡದೆ ಇರುವುದು, ಕಾನೂನು ಬಾಹಿರವಾಗಿ ವಸೂಲಿ ಮಾಡಿದ್ದೆಂದು ಪರಿಗಣಿಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಸೂಚನೆಗಳು

* ಟೋಯಿಂಗ್ ವಾಹನದ ಉಸ್ತುವಾರಿ ಅಧಿಕಾರಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

* ಟೋಯಿಂಗ್ ವಾಹನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ (ಚಾಲಕ ಮತ್ತು ವಾಹನ ಎತ್ತುವ ಸಹಾಯಕರು) ಪಾತ್ರ ಮತ್ತು ಜವಾಬ್ದಾರಿಗಳು

* ಟೋಯಿಂಗ್ ಕಾರ್ಯಾಚರಣೆ ವೇಳೆ (ಉಸ್ತುವಾರಿ ಅಧಿಕಾರಿ ಮತ್ತು ಟೋಯಿಂಗ್ ಸಿಬ್ಬಂದಿ) ಶಿಷ್ಠಚಾರದ ವರ್ತನೆಗಳ ಬಗ್ಗೆ ಸೂಕ್ತ ನಿರ್ದೇಶನ

* ವಿಶೇಷ ಕರ್ತವ್ಯಗಳ ಸಮಯದಲ್ಲಿ ಟೋಯಿಂಗ್ ವಾಹನ ಬಳಕೆ

* ಟೋಯಿಂಗ್ ವಾಹನದಲ್ಲಿ ಇಡಬೇಕಾದ ಸಂಚಾರ ಉಪಕರಣಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+