ದೇವೇಗೌಡರ ಕುಟುಂಬದ ಅಕ್ರಮ ಆಸ್ತಿ ಟೀಕೆಗೆ ಕುಮಾರಸ್ವಾಮಿ ಕೆಂಡಾಮಂಡಲ
Recommended Video

ತಮ್ಮ ಕುಟುಂಬದ ಬಗೆಗಿನ ಟೀಕೆಗೆ ಎಚ್ ಡಿ ಕುಮಾರಸ್ವಾಮಿ ಕೆಂಡಾಮಂಡಲ
ಬೆಂಗಳೂರು, ಜುಲೈ 04: ನಮ್ಮ ಕುಟುಂಬದ ಯಾರೊಬ್ಬರಾದರೂ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದರೆ ದಾಖಲೆ ತೋರಿಸಲಿ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಂಡಾಮಂಡಲವಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಬಿಜೆಪಿ ಶಾಸಕರು ದೇವೇಗೌಡರ ಕುಟುಂಬ ಅಕ್ರಮ ಆಸ್ತಿ ಮಾಡಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಹಾಗೇನಾದರೂ ಆಗಿದ್ದಲ್ಲಿ ದಾಖಲೆಗಳನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ನಮ್ಮ ಕುಟುಂಬದ ಮೇಲೆ ಈ ರೀತಿಯ ಸುಳ್ಳು ಆರೋಪಗಳು ಇದೇ ಮೊದಲೇನಲ್ಲ. ನಮ್ಮ ಕುಟುಂಬದ ಮೇಲೆ ಆಗಿರುವ ರಾಜಕೀಯ ಪ್ರೇರಿತ ತನಿಖೆಗಳೂ ಹೊಸದಲ್ಲ ಆದರೆ ಈ ವರೆಗೆ ಅಕ್ರಮ ಆಸ್ತಿ ಆರೋಪ ನಿಜವಾಗಿಲ್ಲ ಎಂದು ಅವರು ಹೇಳಿದರು.

ಸಾರ್ವಜನಿಕ ಜೀವನದಲ್ಲಿ ಟೀಕೆ ಬರುವುದು ಸಹಜ ಆದರೆ ಟೀಕೆ ಮಾಡುವಾಗ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಟೀಕೆ ಮಾಡಬೇಕೆ ವಿನಃ ಹಿಟ್ ರನ್ ತರಹ ಆಗಬಾರದು ಎಂದು ಅವರು ಹೇಳಿದರು.












Click it and Unblock the Notifications