Namma Metro: ಇಂದಿನಿಂದ 'ಹಳದಿ ಮಾರ್ಗ'ದಲ್ಲಿ ಮತ್ತಷ್ಟು ಪರೀಕ್ಷೆಗಳು, ತಾಂತ್ರಿಕ ಅನುಮೋದನೆ ಯಾವಾಗ?

ಬೆಂಗಳೂರು, ಸೆಪ್ಟಂಬರ್ 09: ಬೆಂಗಳೂರು ನಮ್ಮ ಮೆಟ್ರೋ ರೈಲು ಮಾರ್ಗದ ಪೈಕಿ ಪ್ರಮುಕ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ 'ಹಳದಿ ಮಾರ್ಗ'ದಲ್ಲಿ ಈಗಾಗಲೇ ಪ್ರಾಯೋಗಿಕ ಮೆಟ್ರೋ ಪರೀಕ್ಷೆಗಳು ಮುಕ್ತಾಯಗೊಂಡಿವೆ. ಇದೀಗ ಆರ್.ಡಿ.ಎಸ್.ಒ ಅಧಿಕಾರಿಗಳು ಇಂದಿನಿಂದ ಮತ್ತಷ್ಟು ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.

BMRCL ಅಧಿಕಾರಿಗಳು ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇಂದಿನಿಂದ ಮುಂದಿನ 14 ದಿನಗಳವರೆಗೆ ರೀಚ್ 5 ಮಾರ್ಗದಲ್ಲಿ ಬೊಮ್ಮನಹಳ್ಳಿಯಿಂದ ಆರ್.ವಿ -ರಸ್ತೆ ನಡುವೆ, ಆಸಿಲೇಷನ್ ಮತ್ತು ಇಬಿಡಿ ಪ್ರಯೋಗಗಳನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Oscillation and EBD Trials 12-14 Days in RV Road-Bommanahalli Yellow Line of Namma Metro

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಡೆಯಲಿರುವ ಈ ಪರೀಕ್ಷೆಗಳು ಸುಮಾರು 12-14 ದಿನಗಳವರೆಗೆ ನಡೆಯಲಿದೆ. ನಂತರವೇ ಪರೀಕ್ಷಾ ವರದಿಯನ್ನು ಆರ್.ಡಿ.ಎಸ್.ಒ ಅಧಿಕಾರಿಗಳು ಸಲ್ಲಿಸಿದ ರೈಲ್ವೆ ಮಂಡಳಿಯಿಂದ ತಾಂತ್ರಿಕ ಅನುಮೋದನೆಗೆ ಮನವಿ ಮಾಡಲಿದ್ದಾರೆ.

ಈ ಮೂಲಕ ನಮ್ಮ ಮೆಟ್ರೋ ಬಹುನಿರೀಕ್ಷೆಯ ಆರ್. ವಿ.ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿನ ಒಂದೊಂದು ಪರೀಕ್ಷೆಗಳು ಮುಗಿದು, ಮಾರ್ಗ ವಾಣಿಜ್ಯ ಕಾರ್ಯಾಚರಣೆಗೆ ಮುಕ್ತಗೊಳ್ಳುವ ಕಾಲ ಸನ್ನಿಹಿತವಾಗಿದೆ. ಸದ್ಯ ವಿಷಯ ಮೆಟ್ರೋ ಪ್ರಯಾಣಿಕರಲ್ಲಿ ಹರ್ಷ ಹೆಚ್ಚಿಸಿದೆ.

ಹೆಚ್ಚಿನ ಪರೀಕ್ಷೆಗಳು ಯಾಕೆ ಅಗತ್ಯ?

ಬೆಂಗಳೂರು ನಮ್ಮ ಮೆಟ್ರೋ ಜಾಲದ ಪೈಕಿ ಚಾಲಕ ರಹಿತವಾಗಿ ಮೆಟ್ರೋ ಓಡಲಿರುವ ಮಾರ್ಗವೆಂದರೆ ಅದು ಹಳದಿ ಮಾರ್ಗ. ಇಲ್ಲಿ ಚೀನಾ ನಿರ್ಮಿತ ಮೆಟ್ರೋ ರೈಲುಗಳ ಎರಡು ಸೆಟ್ ಆಗಮಿಸಿದ್ದು. ಇನ್ನಷ್ಟು ಬೋಗಿಗಳು ಬರಬೇಕಿದೆ. ಅವುಗಳ ಬಂದಿಲ್ಲ. ಈ ಮೆಟ್ರೋ ಕೊರತೆಯಿಂದಾಗಿ ಹಳದಿ ಮಾರ್ಗದಲ್ಲಿನ ವಾಣಿಜ್ಯ ಸಂಚಾರ ತಡವಾಗುತ್ತಿದೆ ಎಂದು ತಿಳಿದು ಬಂದಿದೆ.

ಆರ್‌ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ಸುಮಾರು 19 ಕಿಮಿ ಉದ್ದದ ಈ ಹಳಿದ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ, ಸಿಗ್ನಲ್ ಟೆಸ್ಟ್ ಮುಗಿದಿದ್ದು, ಇಂದನಿಂದ ಹೊಸ ಪರೀಕ್ಷೆಗಳು ಆರಂಭವಾಗಿವೆ. ಇಲ್ಲಿ ಡ್ರೈವರ್‌ಲೆಸ್ ಮಟ್ರೋಗಳು ಓಡಾಡುವುದರಿಂದ ಸಾಮಾನ್ಯ ರೈಲಿಗಿಂತಲೂ ಅತ್ಯಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ವಾಣಿಜ್ಯ ಸಂಚಾರ ಯಾವಾಗ?

ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ 2024ರ ಫೆಬ್ರವರಿಗೆ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಮೆಟ್ರೋ ಕೋಚ್ ಪೂರೈಕೆ ವಿಳಂಬ ಕಾರಣದಿಂದ ಅದು ಇದೇ ವರ್ಷಾಂತ್ಯಕ್ಕೆ ಡಿಸೆಂಬರ್‌ಗೆ ಮುಂದೂಡಿತು. ಆದರೆ ನಿರೀಕ್ಷೆ ಮಟ್ರೋ ಕೋಚ್ ಬರುವುದು ಮತ್ತಷ್ಟು ವಿಳಂಬ ಸಾಧ್ಯತೆ ಹಿನ್ನೆಲೆಯಲ್ಲಿ ಮುಂದಿನ ವರ್ಷ 2025ರ ಜನವರಿಗೆ ಮುಂದೂಡಿಕೆ ಆಗುವ ಸಾಧ್ಯತೆ ಬಹಳಷ್ಟಿದೆ. ಮೆಟ್ರೋ ಪ್ರಯಾಣಿಕರಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+