Bengaluru Metro: ನಮ್ಮ ಮೆಟ್ರೋ ಕಿತ್ತಳೆ ಮಾರ್ಗ; ಬೆಂಗಳೂರಿನ ಈ ಭಾಗದಲ್ಲಿ ಆಸ್ತಿ ಬೆಲೆ ಭಾರಿ ಏರಿಕೆ

ನಮ್ಮ ಮೆಟ್ರೋ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಮೆಟ್ರೋ ಹಂತ-3ರ ಎರಡು ಕಾರಿಡಾರ್‌ಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ 15,611 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಕಾರಿಡಾರ್ ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದಿಂದ 21 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಎರಡನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಒಂಬತ್ತು ನಿಲ್ದಾಣಗಳು ನಿರ್ಮಾಣವಾಗಲಿದೆ.

ನಮ್ಮ ಮೆಟ್ರೋ ಮೂರನೇ ಹಂತದ ಕಿತ್ತಳೆ ಮಾರ್ಗ (Orange Line) ಕಾಮಗಾರಿಗೆ ಅನುಮೋದನೆ ಸಿಗುತ್ತಿದ್ದಂತೆ ಬೆಂಗಳೂರು ದಕ್ಷಿಣ ಭಾಗದಲ್ಲಿ ರಿಯಲ್ ಎಸ್ಟೇಟ್‌ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಸೈಟು, ಭೂಮಿ ಬೆಲೆ ಕನಿಷ್ಠ 10-20 ಪ್ರತಿಶತದಷ್ಟು ಹೆಚ್ಚಿಸಲಿದೆ ರಿಯಲ್ ಎಸ್ಟೇಟ್ ದಲ್ಲಾಳಿಗಳು ನಿರೀಕ್ಷೆ ಮಾಡಿದ್ದಾರೆ.

Orange Line Metro Phase-3 to Transform South Bengaluru Real Estate

ಈ ಹೊಸ ಮೆಟ್ರೋ ಕಾರಿಡಾರ್‌ಗಳು ದಕ್ಷಿಣ ಬೆಂಗಳೂರಿನ ವಸತಿ ಪ್ರದೇಶಗಳನ್ನು ಮೈಸೂರು ರಸ್ತೆ ಮತ್ತು ಹೆಬ್ಬಾಳದ ಉದ್ದಕ್ಕೂ ಇರುವ ವ್ಯಾಪಾರ ಕೇಂದ್ರಗಳು ಮತ್ತು ಟೆಕ್ ಪಾರ್ಕ್‌ಗಳಿಗೆ ಸಂಪರ್ಕವನ್ನು ಸುಲಭವಾಗಿಸುತ್ತದೆ.

ಭೂಮಿ ಬೆಲೆ ಗಗನಕ್ಕೆ

ಮೂರನೇ ಹಂತದ ಮೆಟ್ರೋದಲ್ಲಿ 44.65 ಕಿ.ಮೀ ವಿಸ್ತರಿಸಲಿದ್ದು, 31 ನಿಲ್ದಾಣಗಳು ನಿರ್ಮಾಣವಾಗಲಿದೆ. 2029 ರ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನ ಬೇರೆ ಭಾಗಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಭಾಗದಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಸ್ವಲ್ಪ ಕಡಿಮೆಯಿದೆ. 2023 ರ ಡಿಸೆಂಬರ್‌ನಿಂದ ಈವರೆಗೆ ಕನಕಪುರ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ, ಜೆಪಿ ನಗರ ಮತ್ತು ಬಿಟಿಎಂ ಲೇಔಟ್ ಭಾಗದಲ್ಲಿ ಭೂಮಿ, ಸೈಟು ಬೆಲೆಗಳು ಶೇಕಡಾ 10-15 ರಷ್ಟು ಏರಿಕೆಯಾಗಿದೆ.

ದಕ್ಷಿಣ ಬೆಂಗಳೂರಿನಲ್ಲಿ ಆಸ್ತಿ ಮೌಲ್ಯಗಳು ವರ್ಷಕ್ಕೆ 10 ಪ್ರತಿಶತದಷ್ಟು ಏರಿಕೆಯಾಗಿದ್ದರೂ, ಇನ್ನೊಂದು ವರ್ಷದಲ್ಲಿ 30-40 ಪ್ರತಿಶತದಷ್ಟು ಏರಿಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಜೆ.ಪಿ.ನಗರದಲ್ಲಿ ಕಳೆದ ವರ್ಷದಿಂದ ಪ್ರತಿ ಚದರ ಅಡಿಗೆ 7,000 ರೂಪಾಯಿ ಇದ್ದರೆ, ಈಗ 13,000 ರೂಪಾಯಿಗೆ ಏರಿಕೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಕನಕಪುರ ರಸ್ತೆಯಲ್ಲೂ ಆಸ್ತಿ ಬೆಲೆ ಹೆಚ್ಚಾಗಿವೆ.

ಮೆಟ್ರೋ ಕಾಮಗಾರಿ ಶುರುವಾಗುತ್ತಿದ್ದಂತೆ ಇನ್ನು ವರ್ಷದಿಂದ ವರ್ಷಕ್ಕೆ ಆಸ್ತಿ ಬೆಲೆ ಹೆಚ್ಚಾಗುತ್ತಲೇ ಹೋಗುತ್ತದೆ. ತಡೆರಹಿತ ಸಾರಿಗೆ ಮೂಲಸೌಕರ್ಯ ಮತ್ತು ವಾಣಿಜ್ಯ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವವರೆಗೆ ಈ ಭಾಗದಲ್ಲಿ ಬಾಡಿಗೆ ಹೆಚ್ಚಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+