Opposition Parties Meeting: ಆಹ್ವಾನಿಸದ ಶಾಸಕರಿಗೆ ನಾಯಕರ ಭೇಟಿಗೆ ಕಾಂಗ್ರೆಸ್ ನಿರ್ಬಂಧ
ಬೆಂಗಳೂರು, ಜುಲೈ 17: ಮುಂಬರಲಿರುವ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಕಟ್ಟಿಹಾಕಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ವಿರೋಧ ಪಕ್ಷಗಳು ಇಂದಿನಿಂದ ಎರಡು ದಿನ ಬೆಂಗಳೂರಿನಲ್ಲಿ ಮಹತ್ವದ ಸಭೆ ಹಮ್ಮಿಕೊಂಡಿವೆ. ಇತ್ತ ಡಿಸಿಎಂ ಡಿಕೆಶಿ ಶಿವಕುಮಾರ್ ಅವರು ಆಹ್ವಾನಿತರನ್ನು ಬಿಟ್ಟು ಬೇರೆಯವರು ನಾಯಕರನ್ನು ಭೇಟಿ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ವಿಪಕ್ಷಗಳ ಸಭೆ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ವಿರೋಧ ಪಕ್ಷಗಳ ಸಭೆಗೆ ಕೆಲವು ಮಂತ್ರಿಗಳಿಗೆ ನಾವೇ ಆಹ್ವಾನ ನೀಡಿದ್ದೇವೆ. ಅವರ ಹೊರತು ಇತರ ಮಂತ್ರಿಗಳು, ಶಾಸಕರಿಗೆ ನಾಯಕರ ಬೇಟಿಗೆ ಅವಕಾಶ ಇರುವುದಿಲ್ಲ.

ನಾಳೆ ಬೆಳಗ್ಗೆ 11ಕ್ಕೆ ಸಭೆ ನಡೆಯಲಿದೆ. ಇಂದಿನಿಂದ ಎರಡು ದಿನ ಸಭೆ ನಡೆಯಲಿದ್ದು, ನಾಯಕರು ಉಳಿಯುವ ಹೋಟೆಲ್‌ಗೆ ಬರುವುದು, ಅವರನ್ನು ಬೇಟಿ ಮಾಡಲು ಪ್ರಯತ್ನಿಸಿದರೆ ಅಂತದ್ದಕ್ಕೆ ಅವಕಾಶ ಇಲ್ಲ. ಪಕ್ಷದ ಈ ನಿರ್ಧಾರಕ್ಕೆ ಎಲ್ಲರೂ ಸಹಕರಿಸಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಅವರ ಈ ಕೆಲವು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ.
ಬೆಂಗಳೂರಿನ ವಿಪಕ್ಷಗಳ ಸಭೆಗೆ ಬಿಜೆಪಿ ಟೀಕೆ
ಕೇಂದ್ರ ಬಿಜೆಪಿ ವಿರುದ್ಧ ಇಂದು ವಿರೋಧ ಪಕ್ಷದ ನಾಯಕರು ಒಂದಾಗಿದ್ದರ ಕುರಿತು ಪ್ರತಿಕ್ರಿಯಿಸಿದಿ ಮಾಜಿ ಕಂದಾಯ ಸಚಿವ ಆರ್. ಅಶೋಕ್ ಅವರು, ಸಭೆ ಇದು ಫೋಟೊ ಶೋ ಬಿಟ್ಟರೆ ಬೇರೆನೂ ಇಲ್ಲ. ವಿಪಕ್ಷ ನಾಯಕರು ಎಲ್ಲರು ಸೇರಿ ಕೈ ಮೇಲೆತ್ತಿ ಫೋಟೊಗೆ ಪೋಸ್ ಕೊಡುತ್ತಾರೆ. ಅವರಲ್ಲಿ ಯಾರಿಗೂ ಸಿದ್ಧಾಂತಗಳೇ ಇಲ್ಲ. ಎರಡು ದಿನ ನಂತರ ಏನು ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿಯವರಿಂದ ದೇಶದಲ್ಲಿ ಅಭಿವೃದ್ಧಿ ಆಗಿದೆ. ಇಂದು ನಡೆಸುತ್ತಿರುವವರೆ ಆಯಾ ರಾಜ್ಯಗಳಲ್ಲಿ ಜಗಳವಾಡುತ್ತಾರೆ. ಇದರಿಂದ ಏನು ಆಗುವುದಿಲ್ಲ ಎಂದು ಹೇಳಿದರು.
ಸೊನ್ನೆಗೆ ಸೊನ್ನೆ ಕೂಡಿದರೆ ಶೂನ್ಯವೇ: ಬೊಮ್ಮಾಯಿ
ವಿಪಕ್ಷಗಳ ಸಭೆಯಿಂದ ಪ್ರಯೋಜನವಿಲ್ಲ ಎಂಬುದನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸೊನ್ನೆಗೆ ಸೊನ್ನೆ ಕೂಡಿದರೆ ಶೂನ್ಯವೇ ಬರಲಿದೆ ಎಂದು ನೇರವಾಗಿ ಉತ್ತರಿಸಿದ್ದಾರೆ. ಪ್ರಧಾನಿ ಮೋದಿ ಸೋಲಿಸುವ ಅವರ ಉದ್ದೇಶ ಈಡೇರುವುದಿಲ್ಲ. ಅವರೆಲ್ಲರು ಕೊಳಕು ರಾಜಕಾರಣ ಮಾಡಲು ಹೊರಟಿದ್ದಾರೆ. ಅದ್ಯಾವುದು ಫಲ ಕೊಡುವುದಿಲ್ಲ. ಘಟಬಂಧನ್‌ನಲ್ಲಿ ಬಂಧವೂ ಇಲ್ಲ, ಮಹಾ ಸಹ ಇಲ್ಲ ಎಂದು ವಿಧಾನಸೌಧದಲ್ಲಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ವಿಪಕ್ಷಗಳ ಸಭೆಗೆ ಎಎಪಿ ನೂತನ ರಾಜ್ಯಾಧ್ಯಕ್ಷರ ಸ್ವಾಗತ
ಇದೇ 17 ಮತ್ತು 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಯುಪಿಎ ವಿಪಕ್ಷಗಳ ಸಭೆಗೆ ಆಗಮಿಸುತ್ತಿರುವ ಆಮ್ಮಿ ಪಕ್ಷದ ನಾಯಕರುಗಳನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ವಾಗತಿಸಿದ್ದಾರೆ.
ಕೇಂದ್ರ ಸರ್ಕಾರ ಜನಪ್ರಿಯ ಅರವಿಂದ್ ಕೇಜ್ರಿವಾಲ್ ರವರ ದೆಹಲಿ ಸರ್ಕಾರದ ವಿರುದ್ಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಸಭೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಬೆಂಬಲಿಸಿರುವ ನಡೆ ಉತ್ತಮವಾದದ್ದು. ಬಿಜೆಪಿಯ ನಿರಂಕುಶ ಪ್ರಭುತ್ವವನ್ನು ರಾಷ್ಟ್ರದಿಂದ ಹೊಡೆದೋಡಿಸುವ ನಿಟ್ಟಿನಲ್ಲಿ ರಾಷ್ಟ್ರದ ವಿಪಕ್ಷಗಳೆಲ್ಲ ಒಂದುಗೂಡಿ ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಸದಾ ಕೈ ಜೋಡಿಸುತ್ತದೆ ಎಂದು ಹೇಳಿದರು.












Click it and Unblock the Notifications