ಫೆ.21ರಂದು ಎಂಜಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ

ಬೆಂಗಳೂರು, ಫೆಬ್ರವರಿ 17 : ಬೆಂಗಳೂರು ನಗರದ ಪ್ರಮುಖ ರಸ್ತೆಯಾದ ಮಹಾತ್ಮ ಗಾಂಧಿ (ಎಂಜಿ ರಸ್ತೆ) ರಸ್ತೆಯಲ್ಲಿ ಫೆಬ್ರವರಿ 21ರಂದು ಓಪನ್ ಸ್ಟ್ರೀಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯ ತನಕ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಬಿಎಂಟಿಸಿ, ಬಿಎಂಆರ್‌ಸಿಎಲ್, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ನಗರ ಪೊಲೀಸರ ಜಂಟಿ ಸಹಭಾಗ್ವಿತ್ವದಲ್ಲಿ ಓಪನ್ ಸ್ಟ್ರೀಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.21ರ ಭಾನುವಾರ ಅನಿಲ್ ಕುಂಬ್ಳೆವೃತ್ತದಿಂದ ಬ್ರಿಗೇಡ್ ರಸ್ತೆ (ಕಾವೇರಿ ಎಂಪೋರಿಯಂ) ವರೆಗೆ ವಾಹನ ಸಂಚಾರವಿರುವುದಿಲ್ಲ. [ಕಮರ್ಷಿಯಲ್ ಸ್ಟ್ರೀಟ್ 'ಹ್ಯಾಪಿ ಸ್ಟ್ರೀಟ್' ಆಗಿ ಬದಲಾದ ಚಿತ್ರಗಳು]

mg road

'ಪರಿಸರ ಮಾಲಿನ್ಯ ನಿಯಂತ್ರಣ, ಸೈಕ್ಲಿಂಗ್, ನಡಿಗೆ ಮತ್ತು ಸಾರ್ವಜನಿಕ ಸಾರಿಗೆ ಬಳಸಲು ಉತ್ತೇಜನ ನೀಡುವ ಸಲುವಾಗಿ ಓಪನ್ ಸ್ಟ್ರೀಟ್ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದು ನಗರ ರಸ್ತೆ ಸಾರಿಗೆ ನಿರ್ದೇಶನಾಲಯದ ಆಯುಕ್ತರಾದ ವಿ.ಮಂಜುಳಾ ಅವರು ಹೇಳಿದ್ದಾರೆ. [ಎಂಜಿ ರಸ್ತೆಯಿಂದ ಹೋಪ್ ಫಾರ್ಮ್ ಗೆ ಪ್ರತ್ಯೇಕ ಬಸ್ ಮಾರ್ಗ]

ಓಪನ್ ಸ್ಟ್ರೀಟ್ ಕಾರ್ಯಕ್ರಮಕ್ಕೆ ಜನರನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಚಟುವಟಿಕೆ, ಸೈಕ್ಲಿಂಗ್, ಮನೋರಂಜನಾ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜನೆ ಮಾಡಲಾಗಿದೆ. ಕರಕುಶಲ ವಸ್ತುಗಳ ಮಾರಾಟಕ್ಕೆ ರಸ್ತೆ ಬದಿಯಲ್ಲಿ ತಾತ್ಕಾಲಿಕ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ.

ಎಲ್ಲಿ ಪಾರ್ಕಿಂಗ್ : ನಗರದ ವಿವಿಧ ಭಾಗಗಳಿಂದ ಎಂ.ಜಿ.ರಸ್ತೆಗೆ ಬರುವ ಜನರಿಗೆ ಹಲಸೂರು ಕೆರೆ ಸಮೀಪದ ಆರ್‌ಬಿಎನ್‌ಎಂಎಸ್ ಮೈದಾನದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಆದರೂ, ವಾಹನ ಬಳಕೆ ಕಡಿಮೆ ಆಗಲಿ ಎಂಬ ಕಾರಣಕ್ಕಾಗಿ ಕಾರು ಮತ್ತು ದ್ವಿ ಚಕ್ರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸಲಾಗಿದೆ. ಸೈಕಲ್‌ಗಳಿಗೆ ಮಾತ್ರ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಹೆಚ್ಚುವರಿ ಬಸ್ ಸೇವೆ : ಓಪನ್‌ ಸ್ಟ್ರೀಟ್ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಅನುಕೂಲವಾಗಲು ಬಿಎಂಟಿಸಿ ಶಾಂತಿನಗರ ಮತ್ತು ಶಿವಾಜಿನಗರ ಬಸ್ ನಿಲ್ದಾಣದಿಂದ ಎಂಜಿ ಎಸ್ತೆಗೆ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ. ಸಾರ್ವಜನಿಕ ಸಾರಿಗೆ ಬಳಸಲು ಉತ್ತೇಜನ ನೀಡಲು ಲಕ್ಕಿ ಡಿಪ್ ಏರ್ಪಡಿಸಲಾಗಿದೆ.

ಬಿಎಂಟಿಸಿ ಬಸ್ಸುಗಳಲ್ಲಿ ಅಂದು ಪ್ರಯಾಣಿಸುವವರು ಪ್ರಯಾಣದ ನಂತರ ಟಿಕೆಟ್‌ಗಳ ಹಿಂದೆ ಹೆಸರು, ಮೊಬೈಲ್ ನಂಬರ್ ಬರೆದು ಲಕ್ಕಿ ಡಿಪ್‌ಗೆ ಹಾಕಬೇಕು. 100 ಅದೃಷ್ಟಶಾಲಿಗಳಿಗೆ ಕೂಪನ್ ಮತ್ತು ಮೊಟ್ರೋ ರೈಲಿನಲ್ಲಿ ಸಂಚಾರ ನಡೆಸಲು 500 ರೂ. ಮೊತ್ತದ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.

ಏನಿದು ಓಪನ್ ಸ್ಟ್ರೀಟ್? : ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಸೈಕ್ಲಿಂಗ್, ಕ್ರೀಡಾ ಚಟುವಟಿಕೆಗೆ ಅವಕಾಶ ಮಾಡಿಕೊಡಲು ಓಪನ್ ಸ್ಟ್ರೀಟ್ ಕಾರ್ಯಕ್ರಮವನ್ನು ನಗರ ರಸ್ತೆ ಸಾರಿಗೆ ನಿರ್ದೇಶನಾಲಯ ಆಯೋಜಿಸುತ್ತಿದೆ. ಸೆಪ್ಟೆಂಬರ್‌ನಲ್ಲಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಓಪನ್ ಸ್ಟ್ರೀಟ್ ಕಾರ್ಯಕ್ರಮ ನಡೆದಿತ್ತು. ಫೆ.21ರಂದು ಎರಡನೇ ಹಂತದ ಕಾರ್ಯಕ್ರಮ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+