• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ವಿಜಯವಾಡಕ್ಕೆ ಇನ್ನು ಐದೇ ಗಂಟೆ ಪ್ರಯಾಣ, ಹೇಗೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 30: ಬೆಂಗಳೂರು ಮತ್ತು ಆಂಧ್ರಪ್ರದೇಶದ ವಿಜಯವಾಡ ನಡುವೆ ಕಡಪ ಮೂಲಕ ಹಾದುಹೋಗುವ ಹೊಸ ಗ್ರೀನ್‌ಫೀಲ್ಡ್ ಹೆದ್ದಾರಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ 342 ಕಿಲೋಮೀಟರ್ ಉದ್ದದ ಹೆದ್ದಾರಿಯು ದಕ್ಷಿಣ ಭಾರತದ ಎರಡು ನೆರೆಯ ರಾಜ್ಯಗಳ ನಡುವಿನ ಪ್ರಯಾಣವನ್ನು ತಗ್ಗಿಸಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹೀಗೆ ಬರೆದಿದ್ದಾರೆ. "342 ಕಿಮೀ ಉದ್ದದ ಬೆಂಗಳೂರು-ಕಡಪ-ವಿಜಯವಾಡ ಗ್ರೀನ್‌ಫೀಲ್ಡ್ ಪ್ರವೇಶ ನಿಯಂತ್ರಿತ ಕಾರಿಡಾರ್‌ನ ಯೋಜನೆಯನ್ನು ಒಟ್ಟು 13,600 ಕೋಟಿ ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಬರೆದಿದ್ದಾರೆ.

ಆಂಧ್ರದಲ್ಲಿ ರಸ್ತೆ ಸಂಪರ್ಕಕ್ಕಾಗಿ 5 ಲಕ್ಷ ಕೋಟಿ ವೆಚ್ಚ: ಗಡ್ಕರಿಆಂಧ್ರದಲ್ಲಿ ರಸ್ತೆ ಸಂಪರ್ಕಕ್ಕಾಗಿ 5 ಲಕ್ಷ ಕೋಟಿ ವೆಚ್ಚ: ಗಡ್ಕರಿ

ಪ್ರಸ್ತುತ, ಬೆಂಗಳೂರಿನಿಂದ ವಿಜಯವಾಡಕ್ಕೆ ಪ್ರಯಾಣಿಸಲು ಸರಿಸುಮಾರು 11 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಈ ಹೊಸ ಹೆದ್ದಾರಿಯು ಪ್ರಯಾಣದ ಸಮಯವನ್ನು 5 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಇದು ಈ ಎರಡು ನಗರಗಳ ನಡುವೆ 6 ಗಂಟೆಗಳಲ್ಲಿ ಪ್ರಯಾಣವನ್ನು ಮಾಡುಬಹುದು.

ದಕ್ಷಿಣ ರಾಜ್ಯಗಳಾದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂಲಕ ಇದು 2 ನಗರಗಳ ನಡುವಿನ ಪ್ರಯಾಣದ ದೂರವನ್ನು 75 ಕಿಮೀ ಮತ್ತು ಪ್ರಯಾಣದ ಸಮಯವನ್ನು 5 ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ.

ಈ ಬಹುನಿರೀಕ್ಷಿತ ಯೋಜನೆಯು 2025- 2026 ರ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಕಾರಿಡಾರ್ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಆರ್ಥಿಕ ಮತ್ತು ಕೈಗಾರಿಕಾ ನೋಡ್‌ಗಳಾದ ಗುಂಟೂರು, ಕಡಪ, ಕೋಪರ್ತಿಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಯೋಜನೆಯು 2025-26 ಆರ್ಥಿಕ ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

6 ಏರ್‌ಬ್ಯಾಗ್‌ ನಿಯಮ, ರಸ್ತೆ ಅಪಘಾತಗಳಿಗೆ ದಿನಕ್ಕೆ 426 ಜನ ಸಾವು: ಗಡ್ಕರಿ ಉತ್ತರವೇನು?6 ಏರ್‌ಬ್ಯಾಗ್‌ ನಿಯಮ, ರಸ್ತೆ ಅಪಘಾತಗಳಿಗೆ ದಿನಕ್ಕೆ 426 ಜನ ಸಾವು: ಗಡ್ಕರಿ ಉತ್ತರವೇನು?

ಈ ಹಿಂದೆ, ನಿತಿನ್ ಗಡ್ಕರಿ ಅವರು ಬೆಂಗಳೂರು ಮತ್ತು ಚೆನ್ನೈ ನಡುವಿನ ಹೆದ್ದಾರಿಯನ್ನು ಈ ರಾಜಧಾನಿ ನಗರಗಳ ನಡುವೆ 2 ಗಂಟೆಗಳ ಕಾಲಾವಧಿಯಲ್ಲಿ ಪ್ರಯಾಣಿಸಲು ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ ಎಂದು ಘೋಷಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಭಾರತವು 26 ಹೊಸ ಹಸಿರು ಎಕ್ಸ್‌ಪ್ರೆಸ್‌ವೇಗಳನ್ನು ಹೊಂದಲಿದೆ ಮತ್ತು ಇದು ರಸ್ತೆಮಾರ್ಗಗಳನ್ನು ಆಯ್ಕೆ ಮಾಡುವ ಜನರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಅವುಗಳಲ್ಲಿ ಒಂದಾಗಿದೆ ಮತ್ತು ಇದು ಪ್ರಯಾಣಿಕರಿಗೆ ತಮ್ಮ ನಗರಗಳನ್ನು (ಚೆನ್ನೈ ಅಥವಾ ಬೆಂಗಳೂರು) ಕೇವಲ ಎರಡು ಗಂಟೆಗಳಲ್ಲಿ ತಲುಪಲು ಸಹಾಯ ಮಾಡಲಿದೆ. ಭವಿಷ್ಯದಲ್ಲಿ ಮುಂಬರುವ ನಮ್ಮ ರಸ್ತೆಗಳು ಅಮೆರಿಕದ ರಸ್ತೆಗಳಿಗಿಂತ ಕಡಿಮೆಯಿಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

English summary
The central government has announced a new greenfield highway between Bengaluru and Vijayawada in Andhra Pradesh passing through Kadapa. This 342 km long highway will reduce travel between the two neighboring states of South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X