ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರ ಟ್ವಿಟ್ಟರ್ ಅಭಿಯಾನ
ಬೆಂಗಳೂರು, ಆಗಸ್ಟ್ 14: ಕೇಂದ್ರ ಸರ್ಕಾರದ ಭಾಷಾ ತಾರತಮ್ಯ ಹಾಗೂ ಅನಗತ್ಯ ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಆಗಸ್ಟ್ 15ರಂದು ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸ್ವಾಭಿಮಾನಿ ಕನ್ನಡಿಗರು ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಚುರುಕು ಮುಟ್ಟಿಸಬೇಕೆಂದು ಕೋರಲಾಗಿದೆ.
ಸಂವಿಧಾನ 8 ಪರಿಚ್ಛೇದದ ಅನ್ವಯ ಎಲ್ಲಾ ಭಾಷೆಗಳಿಗೂ ಸಮಾನ ಮಾನ್ಯತೆ ಹಾಗೂ ದೇಶದ ಅಧಿಕೃತ ಭಾಷೆ ಎಂದು ಕರೆಸಿಕೊಳ್ಳುವ ಹಕ್ಕಿದೆ. ಅದರೆ, ಹಿಂದಿ ಭಾಷೆಯನ್ನು ಮಾತ್ರ ಹೇರಿಕೆ ಮಾಡುವುದು ಸರಿಯಲ್ಲ. ಇದನ್ನು ಖಂಡಿಸಿ ಶನಿವಾರ ಬೆಳಗ್ಗೆ 9 ಗಂಟೆಗೆ #StopHindiImposition ಬಳಸಿ ಎಲ್ಲರೂ ಟ್ವೀಟ್ ಮಾಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ @PLEBengaluru ಟ್ವಿಟ್ಟರ್ ಖಾತೆಯನ್ನು ಅನುಸರಿಸಿ. [ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ - 1]
ವ್ಯವಸ್ಥೆ ಬದಲಾಗಬೇಕಾಗಿದೆ: ಹಿಂದಿ ಭಾಷೆಯನ್ನು, ಹಿಂದಿ ಭಾಷಿಕರನ್ನು ಮೇಲ್ದರ್ಜೆಯಲ್ಲಿ ಕೂರಿಸಿ ಕನ್ನಡವೂ ಸೇರಿದಂತೆ ಹಿಂದಿಯೇತರ ನುಡಿಗಳನ್ನು ಕಡೆಗಣಿಸುತ್ತಿರುವ ವ್ಯವಸ್ಥೆ ಬದಲಾಗಬೇಕಾಗಿದೆ. ನಾಗರೀಕ ಸೇವೆಗಳು, ಗ್ರಾಹಕ ಸೇವೆಗಳು ಸರಿಯಾಗಿ ಜನರಿಗೆ ಮುಟ್ಟದೇ ಹೋದರೂ ಪರವಾಗಿಲ್ಲ, ಹಿಂದಿಯನ್ನು ಜನರ ಮೇಲೆ ಹೇರಬೇಕು ಎನ್ನುವಂಥ ನೀತಿಗಳು ಬದಲಾಗಬೇಕು. ಕರ್ನಾಟಕದಲ್ಲಿ ಎಲ್ಲಾ ನಾಗರೀಕ ಹಾಗೂ ಗ್ರಾಹಕ ಸೇವೆಗಳು ಕನ್ನಡದಲ್ಲಿ ಸಿಗುವಂತಾಗಬೇಕು.ಕನ್ನಡ ಬಾರದವರಿಗೆ ಇಂಗ್ಲೀಷ್ ನಲ್ಲಿ ಸೇವೆಗಳು ಇದ್ದೇ ಇದೆ.[ಮೋದಿ ಸರ್ಕಾರದ 'ಹಿಂದಿ ಹೇರಿಕೆ'ವಿರುದ್ಧ ಕೂಗು]

ಹಿಂದಿಯವರೂ ಸಹ ಇಲ್ಲಿ ಬಂದಾಗ ಕನ್ನಡ ಕಲಿತು ಇಲ್ಲಿಯ ಮುಖ್ಯವಾಹಿನಿಯೊಂದಿಗೆ ಬೆರೆಯಬೇಕು. ಹಿಂದಿ ಭಾಷಿಕರಿಗೆ ಒಂದು ನ್ಯಾಯ, ಮಿಕ್ಕವರಿಗೆ ಇನ್ನೊಂದು ನ್ಯಾಯ ಅನ್ನುವ ಧೋರಣೆ ಸಲ್ಲದು.
ಹಿಂದಿ ಹೇರಿಕೆ ವಿರುದ್ಧ ಹೋರಾಟ: 1965ರಿಂದ ಹಿಂದಿಯನ್ನು ಮಾತ್ರ ಅಧಿಕೃತ ಭಾಷೆಯಾಗಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹಿಂದಿಯೇತರ ನುಡಿಸಮುದಾಯಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಮುಂದಾದಾಗ, 1965ರಲ್ಲಿ ದೊಡ್ಡಮಟ್ಟದ ಹೋರಾಟ ನಡೆಯಿತು.
ನಂತರ ಹಿಂದಿ ಮತ್ತು ಇಂಗ್ಲಿಷ್ ಎರಡನ್ನೂ ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳಾಗಿ ಮುಂದುವರೆಸಲು ತೀರ್ಮಾನಿಸಲಾಯಿತು. ಅದರೆ, ಹಿಂದಿ ಹೇರಿಕೆಯಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ತತ್ತರಿಸುತ್ತಿವೆ. ಹೀಗಾಗಿ ಇದರ ವಿರುದ್ಧ ವಿಶಿಷ್ಟವಾಗಿ ದನಿ ಎತ್ತಲು ನಿಮ್ಮ ಟ್ವೀಟ್ ಗಳನ್ನು ಬಳಸಿ. ಹೆಚ್ಚಿನ ಮಾಹಿತಿಗಾಗಿ ಈ ಅಭಿಯಾನದ ಫೇಸ್ ಬುಕ್ ಪುಟವನ್ನು ವೀಕ್ಷಿಸಿ












Click it and Unblock the Notifications