ಹೊಸ ವರ್ಷಕ್ಕೆ ಈರುಳ್ಳಿ ಗ್ರಾಹಕರು ನಿರಾಳ: ಕೆಜಿಗೆಷ್ಟು ಗೊತ್ತೇ?

ಬೆಂಗಳೂರು, ಜನವರಿ 01: 2019 ರಲ್ಲಿ ದಾಖಲೆಯ ಏರಿಕೆ ಕಂಡಿದ್ದ ಈರುಳ್ಳಿ ಬೆಲೆ 2020 ರ ಆರಂಭದಲ್ಲಿಯೇ ಇಳಿಮುಖವಾಗಿದೆ. ಇದರಿಂದ ಗ್ರಾಹಕರು ನಿರಾಳವಾಗಿದ್ದಾರೆ.

ಬೆಂಗಳೂರಿನ ಯಶವಂತಪುರ ಕೃ‍ಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಈರುಳ್ಳಿ ಧಾರಣೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಕಳೆದ ವಾರ ಕೆಜಿಗೆ 100-120 ರೂ, ಇದ್ದ ಈರುಳ್ಳಿ ದರ ಕೆಜಿಗೆ 60-65 ರೂ, ಗೆ ತಲುಪಿದೆ.

ನಿನ್ನೆ ಒಂದೇ ದಿನ ಮಾರುಕಟ್ಟೆಗೆ 30 ಸಾವಿರಕ್ಕೂ ಹೆಚ್ಚು ಈರುಳ್ಳಿ ಚೀಲ ಬಂದಿರುವುದು ದರ ಕುಸಿತಕ್ಕೆ ಕಾರಣವಾಗಿದೆ.

Onion Customers Easing Into The New Year

ಜನವರಿಯಲ್ಲಿ ಮಹಾರಾಷ್ಟ್ರದಿಂದ ಹೊಸ ಬೆಳೆ ಅಧಿಕ ಪ್ರಮಾಣದಲ್ಲಿ ಬರುವುದರಿಂದ, ದರದಲ್ಲಿ ಇನ್ನಷ್ಟು ಕುಸಿತ ಕಾಣುವ ನಿರೀಕ್ಷೆ ಇದೆ.

ಚಿಲ್ಲರೆ ವ್ಯಾಪಾರಸ್ಥರು ಸಾಧಾರಣ ಗುಣಮಟ್ಟದ ಈರುಳ್ಳಿಗೆ 80-90 ರೂ, ವರೆಗೆ ಮಾರಾಟ ಮಾಡುತ್ತಿದ್ದಾರೆ. ಹಾಪ್ ಕಾಮ್ಸ್ ನಲ್ಲಿ ಗುಣಮಟ್ಟದ ಈರುಳ್ಳಿಗೆ 100 ರಿಂದ 110 ರೂ,ವರೆಗೆ ಮಾರಾಟ ಮಾಡುತ್ತಿದ್ದಾರೆ.

ಎಪಿಎಂಸಿ ಮಾರುಕಟ್ಟೆಗಳಲ್ಲಿ ವಿದೇಶದ ಈರುಳ್ಳಿಗೆ ಬೇಡಿಕೆ ಇಲ್ಲದಂತಾಗಿದೆ. ಟರ್ಕಿ ಈರುಳ್ಳಿ ಕೆ.ಜಿ ಗೆ 20 ರಿಂದ 40 ರೂ, ಇದ್ದರೆ, ಈಜಿಪ್ಟ್ ಈರುಳ್ಳಿ ಕೆ.ಜೆ ಗೆ 40 ರಿಂದ 50 ರೂ, ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+