ಒನ್ಇಂಡಿಯಾ ರಿಯಲ್ ಎಸ್ಟೇಟ್ ವಿಶ್ವಕ್ಕೆ ಸ್ವಾಗತ

ಬೆಂಗಳೂರು, ಡಿ. 4 : ಕೆಲಸ ಹುಡುಕುವ ತಾಣವನ್ನು ಆರಂಭಿಸಿದ ನಂತರ ಭಾರತದ ನಂ.1 ಪ್ರಾದೇಶಿಕ ಭಾಷಾ ಪೋರ್ಟಲ್ ಒನ್ಇಂಡಿಯಾ, ತನ್ನ ಇಂಟರ್ನೆಟ್ ಬಳಕೆದಾರರಿಗೆ ಇನ್ನೊಂದು ಅತ್ಯಮೂಲ್ಯವಾದ ಸೇವೆಯನ್ನು ನೀಡಿದೆ. ಅದು, ಆಸ್ತಿ ಹುಡುಕುವ ತಾಣ - ಪ್ರಾಪರ್ಟಿ ಸರ್ಚ್ ಪೋರ್ಟಲ್.

ಕಟ್ಟಡ ಅಥವಾ ನಿವೇಶನ ಕೊಳ್ಳುವ, ಮಾರುವ ಅಥವಾ ಬಾಡಿಗೆ ನೀಡಲಾಗಲಿ ಬೇರೆಬೇರೆ ವೆಬ್ ತಾಣಗಳನ್ನು ಎಡತಾಕುವ ಅಗತ್ಯವೇ ಇಲ್ಲ. ರಿಯಲ್ ಎಸ್ಟೇಟ್ ಕುರಿತು ಎಲ್ಲ ಮಾಹಿತಿಗಳು ಒಂದೇ ಸೂರಿನಡಿ ಲಭ್ಯವಾಗುತ್ತಿದೆ. ಯುಕೆಯ 5ನೇ ಅತಿದೊಡ್ಡ ವೆಬ್‌ಸೈಟ್ ಆಗಿರುವ nestoria.in ಈ ಅವಕಾಶವನ್ನು ಒನ್ಇಂಡಿಯಾ ಓದುಗರಿಗೆ ಒದಗಿಸಿದೆ.

ಇಂಟರ್ನೆಟ್ ಬಳಕೆದಾರರಿಗೆ ಎಲ್ಲ ಪ್ರಮುಖ ಪ್ರಾಪರ್ಟಿ ಪೋರ್ಟಲ್ ಗಳ ಮಾಹಿತಿಯನ್ನು ಆಯಾ ಪ್ರದೇಶಗಳ ಆಧಾರದ ಮೇಲೆ ಲಭ್ಯವಾಗಲಿದೆ. ಫಲಿತಾಂಶವನ್ನು ಬೆಲೆ, ಹೊಸದು, ದೂರ ಮತ್ತು ಪ್ರಸಕ್ತತೆಯ ಆಧಾರದ ಮೇಲೆ ವಿಂಗಡಿಸಬಹುದು. ಸಾವಿರಾರು ವೆಬ್ ಸೈಟ್ ಗಳಲ್ಲಿನ ಆಸ್ತಿ ವಿವರಗಳನ್ನು Oneindia.nestoria.in ಕ್ರೋಢೀಕರಿಸುತ್ತದೆ. ಪ್ರದೇಶದ ಪಟ್ಟಿ ಅಥವಾ ದೇಶವನ್ನು ಬಳಸಿ ಕೂಡ ಆಸ್ತಿಯನ್ನು ಹುಡುಕಬಹುದು.

Oneindia launches real-estate property aggregator

ಆಸ್ತಿಗಾಗಿ ಹುಡುಕಾಟ ನಡೆಸುವುದು ಎಷ್ಟು ಕಷ್ಟ ಎಂಬುದು ಚಪ್ಪಲಿ ಸವೆಸಿ ಹುಡುಕಾಟ ನಡೆಸಿದವರಿಗೇ ಗೊತ್ತು. ಆದರೆ, ಇಲ್ಲಿ ಆ ಕಷ್ಟ ಅನುಭವಿಸುವ ಅಗತ್ಯವಿಲ್ಲ. ಜನರ ಜೀವನವನ್ನು ಸರಳ ಮತ್ತು ಸುರಕ್ಷಿತಗೊಳಿಸಬೇಕೆಂಬ ಉದ್ದೇಶದಿಂದ ಒನ್ಇಂಡಿಯಾ ತನ್ನ ಓದುಗರಿಗೆ ಈ ಸೇವೆಯನ್ನು ಒದಗಿಸಿದೆ. ಒನ್ಇಂಡಿಯಾ ರಿಯಲ್ ಎಸ್ಟೇಟ್ ತಾಣಕ್ಕೆ ಸ್ವಾಗತ.

Oneindia.nestoria.inದಲ್ಲಿ ಏನೇನಿದೆ?

1. ನಿಮ್ಮ ಅಗತ್ಯದ ಆಸ್ತಿ ವಿವರ ನೀಡಿ ಸುಲಭವಾಗಿ ಹುಡುಕಬಹುದು.

2. ಅಡ್ವಾನ್ಸ್ಡ್ ಸರ್ಚ್ ಇನ್ನೂ ಹೆಚ್ಚಿನ ಮತ್ತು ಸರಳವಾಗಿ ವಿಂಗಡಿಸಿದ ವಿವರಗಳನ್ನು ಅತ್ಯಂತ ನಿಖರವಾಗಿ ನೀಡುತ್ತದೆ.

3. ಪ್ರದೇಶಗಳ ಪ್ರಕಾರ ಹುಡುಕಾಟ ನಡೆಸಿದಾಗ ಭಾರತದಲ್ಲಿ ಕೊಳ್ಳಬಹುದಾದ, ಮಾರಾಟ ಮಾಡಬಹುದಾದ ಅಥವಾ ಬಾಡಿಗೆ ನೀಡಬಹುದಾದ ವಿವರಗಳು ದೊರೆಯುತ್ತವೆ.

4. ಇತರ ದೇಶಗಳಾದ ಯೂರೋಪ್, ಬ್ರಜಿಲ್ ಮತ್ತು ಆಸ್ಟ್ರೇಲಿಯಾದ ಆಸ್ತಿ ವಿವರಗಳನ್ನು ಕೂಡ ಇಲ್ಲಿ ಪಡೆಯಬಹುದು.

5. ಪಟ್ಟಿಯನ್ನು ಈ ರೀತಿ ವಿಂಗಡಿಸಬಹುದು.

ದರ (ಕನಿಷ್ಠದಿಂದ ಗರಿಷ್ಠ)
ದರ (ಗರಿಷ್ಠದಿಂದ ಕನಿಷ್ಠ)
ಬಿಎಚ್‌ಕೆ (ಕಡಿಮೆ ಮೊದಲು)
ಬಿಎಚ್‌ಕೆ (ಹೆಚ್ಚು ಮೊದಲು)
ದಿನಾಂಕ (ಹಳೆಯದು ಮೊದಲು)
ದಿನಾಂಕ (ಹೊಸದು ಮೊದಲು)

6. ಇನ್ನೂ ಹೆಚ್ಚಿನ ಮುಂದುವರಿದ ಹುಡುಕಾಟ ನಡೆಸಿದಾಗ ಸವಲತ್ತುಗಳು, ಆಸ್ತಿಯ ಪ್ರಕಾರ, ಏಜೆಂಟ್ ವಿವರ ದೊರೆಯುತ್ತದೆ. ಪ್ರಾಪರ್ಟಿಯನ್ನು ಮ್ಯಾಪ್ ಮುಖಾಂತರ ಕೂಡ ಪತ್ತೆ ಹಚ್ಚಬಹುದಾಗಿದೆ.

Oneindia.nestoria.in ಹೇಗೆ ಕೆಲಸ ಮಾಡುತ್ತದೆ?

ಕೀವರ್ಡ್ ಅಥವಾ ಪ್ರದೇಶವನ್ನು ನಮೂದಿಸಿದಾಗ ಪಟ್ಟಿಯಾದ ಎಲ್ಲ ಆಸ್ತಿ ವಿವರಗಳು ಲಭಿಸುತ್ತವೆ. ಪ್ರಾಪರ್ಟಿ ಮೇಲೆ ಕ್ಲಿಕ್ಕಿಸಿದರೆ ನೇರವಾಗಿ ವಿವರಗಳನ್ನು ನೀಡುತ್ತಿರುವ ವೆಬ್ ಸೈಟಿಗೆ ಪ್ರವೇಶಿಸುತ್ತೀರಿ. ಅಲ್ಲಿ ನೀವು ನೇರವಾಗಿ ಆಸ್ತಿಯ ಮಾಲಿಕ ಅಥವಾ ದಲ್ಲಾಳಿಯನ್ನು ಸಂಪರ್ಕಿಸಬಹುದು.

ಮತ್ತೇನಾದರೂ ಸಹಾಯ ಬೇಕಿದ್ದರೆ ಸಂಕೋಚವಿಲ್ಲದೆ ಕೇಳಿರಿ. ಒನ್ಇಂಡಿಯಾದಿಂದ ರಿಯಲ್ ಎಸ್ಟೇಟ್ ವಿಶ್ವಕ್ಕೆ ಸ್ವಾಗತ, ಸುಸ್ವಾಗತ. [ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+