ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ
ಬೆಂಗಳೂರು, ನ. 19 : ನಿರುದ್ಯೋಗ! ನಮ್ಮ ನಾಡಿನ ಪದವೀಧರರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಸರ್ಟಿಫಿಕೇಟು ಮತ್ತು ಬಯೋಡೇಟಾ ಹಿಡಿದುಕೊಂಡು ಚಪ್ಪಲಿ ಸವೆಸುತ್ತಿರುವವರಿಗಂತೂ ಇಲ್ಲಿ ಲೆಕ್ಕವೇ ಇಲ್ಲ. ಇಂಟರ್ನೆಲ್ಲಿನಲ್ಲಂತೂ ಸನ್ನಿ ಲಿಯೋನ್ ಬಿಟ್ಟರೆ ಅತಿ ಹೆಚ್ಚು ಸರ್ಚ್ ಆಗುವ ಪದವೆಂದರೆ ಅವರು Job, ಅಂದರೆ ಉದ್ಯೋಗ.
ಇಂಟರ್ನೆಟ್ ಬಳಕೆದಾರರಿಗೆ ಹೊಸತನ್ನು ಕೊಡುವುದರಲ್ಲಿ ಅಗ್ರಸ್ಥಾನದಲ್ಲಿರುವ, ಭಾರತದ ನಂ.1 ಭಾಷಾ ಪೋರ್ಟಲ್ ಒನ್ಇಂಡಿಯಾ, ಉದ್ಯೋಗ ಹುಡುಕುವವರಿಗಾಗಿ ಹೊಸ ಸೇವೆಯನ್ನು ಆರಂಭಿಸಿದೆ. ಅದೇ, ಉದ್ಯೋಗ ಹುಡುಕುವ ಪೋರ್ಟಲ್ jobs.oneindia.com. ಕೆಲಸಕ್ಕಾಗಿ ಬೀದಿಬೀದಿ ಅಲೆಯುವ ಬದಲು ಕುಳಿತಲ್ಲಿಯೇ ಇಂಟರ್ನೆಟ್ಟಿನಲ್ಲಿ ಸಾವಿರಾರು ಉದ್ಯೋಗಗಳನ್ನು ಜಾಲಾಡಬಹುದು.
ಆನ್ ಲೈನ್ ಜಾಬ್ ಸರ್ಚ್ ನಲ್ಲಿ ಮಾರುಕಟ್ಟೆ ಲೀಡರ್ ಆಗಿರುವ indeed.co.in ಸಹಯೋಗದೊಂದಿಗೆ ಅತ್ಯಂತ ಸುಲಭವಾಗಿ ಮತ್ತು ವೇಗವಾಗಿ ಉದ್ಯೋಗವನ್ನು ಹುಡುಕುವ ವೇದಿಕೆಯನ್ನು ಒನ್ಇಂಡಿಯಾ ಕಲ್ಪಿಸಿದೆ.

ಸಾವಿರಾರು ವೆಬ್ ಸೈಟ್, ವೃತ್ತಪತ್ರಿಕೆಗಳು ಮತ್ತು ಇತರ ಕಂಪನಿಗಳ ತರಹೇವಾರಿ ವೃತ್ತಿಗಳ ಪಟ್ಟಿ ಇಲ್ಲಿ ದೊರೆಯುತ್ತದೆ. ವಿಭಾಗ, ಪ್ರದೇಶ, ಹುದ್ದೆ ಮತ್ತಿತರ ಕೆಟಗರಿಯನ್ನು ಅನುಸರಿಸಿ ಉದ್ಯೋಗವನ್ನು ಸುಲಭವಾಗಿ ಹುಡುಕಲು ಇಲ್ಲಿ ಸಾಧ್ಯ. ನಿರುದ್ಯೋಗಿಗಳಿಗೆ ಸುಲಭವಾಗಿ ಉದ್ಯೋಗ ಸಿಗಬೇಕು, ಅವರ ಜೀವನ ಉಜ್ವಲವಾಗಬೇಕು ಎಂಬ ಉದ್ದೇಶದಿಂದ ಈ ಸೇವೆಯನ್ನು ಒನ್ಇಂಡಿಯಾ ಆರಂಭಿಸಿದೆ.
jobs.oneindia.comನಲ್ಲಿ ಮತ್ತೇನೇನಿದೆ?
1) ಕೆಲಸದ ಪ್ರೊಫೈಲ್ ಮತ್ತು ಪ್ರದೇಶವನ್ನು ನಮೂದಿಸಿ ಉದ್ಯೋಗ ಹುಡುಕಬಹುದು.
2) ಇನ್ನೂ ಅತ್ಯುತ್ತಮ ಫಲಿತಾಂಶ ಸಿಗಲು, ಅಡ್ವಾನ್ಸ್ ಸರ್ಚ್ ಬಳಸಿ ನಿಖರವಾದ ಉದ್ಯೋಗಳನ್ನು ಹುಡುಕಬಹುದು.
3) ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ ಮುಂತಾದ ನಗರಗಳನ್ನು ಅನುಸರಿಸಿ ಮಹಾನಗರಗಳಲ್ಲಿನ ಉದ್ಯೋಗವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಹುಡುಕಬಹುದು.
4) ತಂತ್ರಜ್ಞಾನ, ಬಿಪಿಓ, ಮಾಧ್ಯಮ, ವಿಮೆ, ಮಾರಾಟ ಮತ್ತಿತರ ವಿಭಾಗಗಳನ್ನು ಬಳಸಿ ಸೂಕ್ತವಾದ ಉದ್ಯೋಗ ಹುಡುಕಲು ಇಲ್ಲಿ ಸಾಧ್ಯ.
5) ಸಾಫ್ಟ್ ವೇರ್ ಇಂಜಿನಿಯರ್, ಡೇಟಾ ಅನಾಲಿಸ್ಟ್, ಡೆಸ್ಕ್ ಟಾಪ್ ಇಂಜಿನಿಯರ್, ಜಾವಾ ಡೆವಲಪರ್ ಮುಂತಾದ ಹುದ್ದೆಯನ್ನು ಬಳಸಿ ಕೂಡ ಉದ್ಯೋಗ ಹುಡುಕಾಟ ಸಾಧ್ಯ.
6) ದಿನಾಂಕ ಮತ್ತು ಅತಿ ಪ್ರಸ್ತುತ ಮಾನದಂಡ ಬಳಸಿ ಉದ್ಯೋಗಗಳನ್ನು ಬೇರೆಬೇರೆಯಾಗಿ ವಿಭಾಗಿಸಿ ಹುಡುಕಾಟ ನಡೆಸಬಹುದು.
jobs.oneindia.com ಹೇಗೆ ಕೆಲಸ ನಿರ್ವಹಿಸುತ್ತದೆ?
ಸರ್ಚ್ ಫೀಲ್ಡ್ ನಲ್ಲಿ ಸೂಕ್ತ ಪದ (ಕೀವರ್ಡ್) ಮತ್ತು ಪ್ರದೇಶ ನಮೂದಿಸಿ ಹುಡುಕಿದಾಗ ಎಲ್ಲ ಸಂಬಂಧಿತ ಕೆಲಸಗಳು ಪಟ್ಟಿಯಾಗುತ್ತವೆ. ನಂತರ, ಉದ್ಯೋಗದ ಮೇಲೆ ಕ್ಲಿಕ್ ಮಾಡಿದರೆ ಆಯಾ ಉದ್ಯೋಗದಾತ ವೆಬ್ ಸೈಟಿಗೆ ನೇರವಾಗಿ ಪ್ರವೇಶ ಪಡೆದುಕೊಳ್ಳುತ್ತೀರಿ. ಅಲ್ಲಿಂದ ನೇರವಾಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.
ಉದ್ಯೋಗದಾತರಿಗಾಗಿ
ಉದ್ಯೋಗದಾತರು ಕೂಡ ಸೂಕ್ತ ಉದ್ಯೋಗಿಗಳ ಹುಡುಕಾಟವನ್ನು ಇಲ್ಲಿ ಮಾಡಲು ಸಾಧ್ಯವಿದೆ. ಅಗತ್ಯವಿರುವ ಉದ್ಯೋಗಿ ಅಥವಾ ಹುದ್ದೆಯ ವಿವರಗಳನ್ನು ನಮೂದಿಸಬಹುದು.
ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವ ನಿರುದ್ಯೋಗಿಗಳ ಹುಡುಕಾಟ ಇಲ್ಲಿ ಕೊನೆಗೊಳ್ಳಲಿ ಮತ್ತು ಜೀವನದಲ್ಲಿ ಅವರಿಗೆ ಒಂದು ನೆಲೆ ಸಿಗಲಿ.












Click it and Unblock the Notifications