BMTC Tour Package: ಈಶಾ ಟೂರ್ ಪ್ಯಾಕೇಜ್‌ಗೆ 1 ವರ್ಷ ಪೂರ್ಣ: ಕೋಟಿ ಕೋಟಿ ರೂ. ಆದಾಯ

ಬೆಂಗಳೂರು, ಮಾರ್ಚ್ 10: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವತಿಯಿಂದ ಈಶಾ ಫೌಂಡೇಶನ್ ಟೂರ್ ಪ್ಯಾಕೇಜ್ ಪ್ರಾರಂಭಿಸಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದ ಸಂಭ್ರಮಾಚರಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇದೆ. ಸಾವಿರಾರು ಪ್ರಯಾಣಿಕರಿಂದ ಕೋಟಿ ಕೋಟಿ ಆದಾಯ ಗಳಿಸಿದೆ. ಈ ಟೂರ್ ಪ್ಯಾಕೇಜ್ ಹೀಗೆ ಮುಂದುವರಿಯಲಿದೆ. ಈ ಯಶಸ್ಸಿಗೆ ಕಾರಣರಾದ ಪ್ರಯಾಣಿಕರಿಗೆ ನಿಗಮದ ಅಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ.

ಈಶಾ ಟೂರ್ ಪ್ಯಾಕೇಜ್ ಹೆಸರಿನಲ್ಲಿ ಬಿಎಂಟಿಸಿಯು ಕಳೆದ ಒಂದು ವರ್ಷದ ಹಿಂದೆ 2024ರ ಮಾರ್ಚ್ 08 ರಂದು ಪ್ಯಾಕೇಜ್ ಆರಂಭಿಸಿದೆ. ಅಲ್ಲಿಂದ ಈವರೆಗಿನ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 50000 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇದರಿಂದ ನಿಗಮಕ್ಕೆ ಒಟ್ಟು 2.55 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ಬಿಎಂಟಿಸಿ ನಿಗಮವು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದೆ.

One Year Successfully Completed for BMTC Isha Tour Package Collected revenue Rs 2 55 Cr

ಒಂದು ದಿನ ಈ ಟೂರ್ ಪ್ಯಾಕೇಜ್ ನಡಿ ಬಿಎಂಟಿಸಿ ಬಸ್ ಬೆಂಗಳೂರಿನ ಮಜೆಸ್ಟಿಕ್‌ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಚಿಕ್ಕಬಳ್ಳಾಪುರದ ಈಶಾ ಶಿವನಮೂರ್ತಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮರಳಿ ರಾತ್ರಿ 9.30ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುತ್ತದೆ.

ಆದಿಯೋಗಿ ಶಿವನ ಮೂರ್ತಿ ನೋಡಲು ಇತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಈಶಾ ಆದಿಯೋಗಿ ಮೂರ್ತಿಗೆ ಒಟ್ಟು 70 ಕಿಲೋ ಮೀಟರ್ ದೂರವಿದೆ. ಇಲ್ಲಿಂದ ಕರೆದೊಯ್ದು ವಿವಿಧ ಸ್ಥಳ ತೋರಿಸಕೊಂಡು ಬರಲು ಪ್ರತಿ ಪ್ರಯಾಣಿಕರಿಗೆ ತಲಾ 500 ರೂಪಾಯಿ ದರ ನಿಗದಿ ಮಾಡಿತ್ತು. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 50 ಸಾವಿರ ಮಂದಿ ಓಡಾಡಿದ್ದರಿಂದ ನಿಗಮಕ್ಕೆ ಆದಾಯ ಹೆಚ್ಚಾಗಿದೆ. ಈ ಟೂರ್ ಪ್ಯಾಕೇಜ್‌ಗೆ ಉಪಕ್ರಮವು ಜನರಿಗೆ ಇಷ್ಟವಾಗಿದೆ.

Take a Poll

ಪ್ಯಾಕೇಜ್‌ನಲ್ಲಿ ಯಾವೆಲ್ಲ ಸ್ಥಳಗಳು ಇವೆ

ಕೇವಲ ಚಿಕ್ಕ ಬಳ್ಳಾಪುರದ ಈಶಾ ಫೌಂಡೇಶನ್ ಸ್ಥಳ ಮಾತ್ರವಲ್ಲದೇ 'ಭೋಗ ನಂದೀಶ್ವರ ದೇವಸ್ಥಾನ' (ಕಣಿವೆ ಬಸವಣ್ಣ ದೇವಸ್ಥಾನ), 'ಸರ್ ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ' ಮತ್ತು 'ರಂಗಸ್ಥಳ ರಂಗನಾಥ್ ಸ್ವಾಮಿ ದೇವಸ್ಥಾನ' ಸೇರಿ ಒಟ್ಟು ನಾಲ್ಕು ಸ್ಥಳಗಳಿಗೆ ಬಸ್‌ ಸಂಚರಿಸುತ್ತದೆ.

ಕೆಲಸದ ಒತ್ತಡದಲ್ಲಿ, ಈ ಟ್ರಾಫಿಕ್ ಜಂಜಾಟದಲ್ಲಿ ಹೋಗಿ ಬರಲು ಇಷ್ಟವಿದ್ದರೂ ಆಗದ ಅದೇಷ್ಟೋ ಜನರಿದ್ದಾರೆ. ಅವರೆಲ್ಲರೂ ಇಷ್ಟು ಕಡಿಮೆ ದರದಲ್ಲಿ ನಗರದಿಂದ ಸುರಕ್ಷಿತವಾಗಿ ಬಸ್‌ನಲ್ಲಿ ತೆರಳಿ ನೋಡಿಕೊಂಡು ಬರಬಹುದು. ಮಹಿಳೆಯರಿಗೆ, ಮಕ್ಕಳು, ಹಿರಿಯ ನಾಗರಿಕರಿಗೆ ಈ ಬಿಎಂಟಿಸಿ ಟೂರ್ ಪ್ಯಾಕೇಜ್ ಇಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+