ಮೈಸೂರು ರಸ್ತೆ ಫ್ಲೈಓವರ್ ಮೇಲೆ ಬೈಕ್ ಸವಾರನ ಮೇಲೆ ಹರಿದ ಬಸ್
ಬೆಂಗಳೂರು, ಏ.10: ಬಸ್ ಒಂದು ಬೈಕ್ ಸವಾರನ ಮೇಲೆ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರುರಸ್ತೆ ಫ್ಲೈಓವರ್ ಮೇಲೆ ಬುಧವಾರ ಬೆಳಗಿನ ಜಾವ ನಡೆದಿದೆ.
ತಮಿಳುನಾಡು ಮೂಲದ ಬಸ್ ಒಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬಸ್ ಸವಾರನ ತಲೆಯ ಮೇಲೆ ಹರಿದಿದೆ.
ಒಂದೇ ಬೈಕಿನಲ್ಲಿ ಮೂವರು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬಸ್, ಬೈಕಿಗೆ ಡಿಕ್ಕಿಯಾಗಿ ಸವಾರರು ಬಿದ್ದಿದ್ದಾರೆ.ಈ ವೇಳೆ ಬಸ್ ಓರ್ವನ ತಲೆಯ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನನ್ನು ಸಂಶಿ ಎಂದು ಗುರುತಿಸಲಾಗಿದೆ. ಸಂಶಿ ಬೈಕ್ ಹಿಂಬದಿಯಲ್ಲಿ ಕುಳಿತಿದ್ದರು.

ಇನ್ನಿಬ್ಬರು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications