100 ರೈಲುಗಳ ನಿರ್ವಹಿಸುವ ಬೆಂಗಳೂರಿನ ನಿಲ್ದಾಣದಲ್ಲಿ ನೂರಾರು ಸಮಸ್ಯೆ

ಬೆಂಗಳೂರು, ಜೂನ್ 7: 100 ರೈಲುಗಳನ್ನು ನಿರ್ವಹಿಸುತ್ತಿರುವ ಈ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್, ವಿದ್ಯುತ್ ಚಾಲಿತ ಕಾರುಗಳುಸೇರಿದಂತೆ ಯಾವುದೇ ಮೂಲಭೂತಸೌರ್ಯಗಳಿಲ್ಲದೆ ನಿತ್ಯ ಪ್ರಯಾಣಿಕರು ಪರದಾಡುವಂತಾಗಿದೆ. ಬೆಂಗಳೂರಿನ ರೈಲ್ವೆ ನಿಲ್ದಾಣಗಳ ಪೈಕಿ ಇದು ಅತ್ಯಂತ ಹಳೆಯದಾಗಿದೆ.

ಹಿರಿಯ ನಾಗರಿಕರು, ವಿಕಲಚೇತನರು 1,2,3ನೇ ಪ್ಲಾಟ್‌ಫಾರಂಗೆ ಹೋಗುವುದೇ ಕಷ್ಟವಾಗಿದೆ. ಎರಡು ತಿಂಗಳ ಹಿಂದೆ ಟ್ರ್ಯಾಕ್ ಮೂಲಕ ಬೇರೆಡೆ ತೆರಳಲು ಹಾರಿ ತನ್ನ ಕಾಲನ್ನೇ ಕಳೆದುಕೊಂಡಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ.

Old cantonment railway station does not have platform connectivity

ಫೂಟ್‌ ಬ್ರಿಡ್ಜ್, ಸಬ್‌ವೇ ಯಾವುದೂ ಇಲ್ಲದ ಕಾರಣ ಒಂದು ಪ್ಲಾಟ್‌ಫಾರಂನಿಂದ ಮತ್ತೊಂದಕ್ಕೆ ಹೋಗುವುದು ಕಷ್ಟವಾಗಿದೆ. ಮೊದಲನೇ ಪ್ಲಾಟ್‌ಫಾರಂ ಕೊನೆಯಲ್ಲಿ ವಿಕಲಚೇತನರಿಗೆ ಅವರು ವ್ಹೀಲ್‌ಚೇರ್‌ನ್ನು ತಳ್ಳಿಕೊಂಡು ಹೋಗಲು ಅವಕಾಶ ಕಲ್ಪಿಸಿದ್ದಾರೆ. ರೈಲು 24 ಕೋಚುಗಳನ್ನು ಹೊಂದಿದ್ದು ಈ ಟ್ರಾಲಿ ಟ್ರ್ಯಾಕ್‌ಗಳನ್ನು ಬೋಗಿಗಳು ಮುಚ್ಚಿಯೇ ಬಿಡುತ್ತವೆ.

ರೈಲು ಬರುವುದು ಸ್ವಲ್ಪ ತಡವಾದರೂ ಪ್ಲಾಟ್‌ಫಾರಂ ತುಂಬಿ ಹೋಗುತ್ತದೆ, ವಿಶ್ರಾಂತಿ ಕೊಠಡಿಗಳ ವ್ಯವಸ್ಥೆಯಿಲ್ಲ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು ಸಬರ್ಬನ್ ರೈಲುಗಳಿಗೆ ಟರ್ಮಿನಲ್ ಸ್ಟೇಷನ್ ಆಗಿ ಬದಲಾಯಿಸಿ ಮೂಲಸೌಕರ್ಯಗಳನ್ನು ಕೂಡ ಒದಗಿಸಲಾಗುತ್ತದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+