ಬೆಂಗಳೂರಿನಲ್ಲಿ ದುಬಾರಿಯಾಗಲಿದೆ ಟ್ಯಾಕ್ಸಿ ಪ್ರಯಾಣ?

Recommended Video

      Ola Uber Taxi fare may hike very soon | Oneindia Kannada

      ಬೆಂಗಳೂರು, ಸೆಪ್ಟೆಂಬರ್ 21 : ಮೊಬೈಲ್ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿಗಳ ದರಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಕಂಪನಿಗಳಿಗೆ ಕನಿಷ್ಠ ಮತ್ತು ಗರಿಷ್ಠ ಪ್ರಯಾಣದರವನ್ನು ನಿಗದಿಪಡಿಸಿ ಸಾರಿಗೆ ಇಲಾಖೆ ಆಯುಕ್ತರು ಹೊಸ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ.

      ಬೆಂಗಳೂರು ನಗರದಲ್ಲಿ ಓಲಾ, ಊಬರ್, ಹೈ ಕಂಪನಿಗಳ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿವೆ. ಪ್ರತಿ ಕಿ.ಮೀ.ಗೆ 6 ರಿಂದ 8 ರೂ.ದರಲ್ಲಿ ಸೇವೆ ಲಭ್ಯವಿದೆ. ಸಾರಿಗೆ ಇಲಾಖೆಯ ಹೊಸ ಪ್ರಸ್ತಾಪದ ಅನ್ವಯ ಕನಿಷ್ಠ ದರ 12 ರೂ., ಗರಿಷ್ಠ ದರ 25 ರೂ. ನಿಗದಿ ಮಾಡಲಾಗಿದೆ.

      Ola, Uber taxi service fare may hike soon

      ಹಿಂದೆ ಗರಿಷ್ಠ ದರ ಮಾತ್ರ ನಿಗದಿ ಮಾಡಲಾಗಿತ್ತು. ಆದರೆ, ಈ ಬಾರಿ ಸಾರಿಗೆ ಇಲಾಖೆ ಕನಿಷ್ಠ ದರವನ್ನು ನಿಗದಿ ಮಾಡಿ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ, ಟ್ಯಾಕ್ಸಿದರಗಳು ಹೆಚ್ಚಾಗುವ ಸಾಧ್ಯತೆ ಇದೆ.

      ಮೊದಲ ಬಾರಿಗೆ ವಾಹನಗಳ ಮೌಲ್ಯದ ಆಧಾರದ ಮೇಲೆ ಈ ಪಸ್ತಾವನೆ ಸಿದ್ಧಪಡಿಸಲಾಗಿದೆ. 5 ಲಕ್ಷದ ಒಳಗಿನ, 5 ರಿಂದ 10 ಲಕ್ಷ, 10 ರಿಂದ 15 ಲಕ್ಷ, 15 ಲಕ್ಷಕ್ಕಿಂತ ಹೆಚ್ಚು ಹೀಗೆ ಐದು ಪ್ರಕಾರಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ದರವನ್ನು ನಿಗದಿ ಮಾಡಲಾಗಿದೆ.

      ಟ್ಯಾಕ್ಸಿ ಚಾಲಕರು, ಜನರು, ಕಂಪನಿಗಳ ಜೊತೆ ಮಾತುಕತೆ ನಡೆಸಿದ ಬಳಿಕ ಹೊಸ ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. ಮೊದಲ ಬಾರಿ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕಾರವಾಗಿತ್ತು. ಆದ್ದರಿಂದ, ಎರಡನೇ ಬಾರಿಗೆ ಕನಿಷ್ಠ ಮತ್ತು ಗರಿಷ್ಠ ಪ್ರಯಾಣದರ ನಿಗದಿ ಮಾಡಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

      ದರ ಏರಿಕೆ ವಿವರ
      * ಓಲಾ ಮೈಕ್ರೊ ಹಾಗೂ ಊಬರ್ ಗೋ ದರ ಕಿ.ಮೀ.ಗೆ 6 ರಿಂದ 12 ರೂ.ಗೆ ಏರಿಕೆ
      * ಓಲಾ ಮಿನಿ, ಊಬರ್ ಎಕ್ಸ್ ಕಿ.ಮೀ.ದರ 8 ರಿಂದ 13 ರೂ.ಗೆ ಏರಿಕೆ
      * ಓಲಾ ಪ್ರೈಮ್, ಊಬರ್ ಎಕ್ಸ್ಎಲ್ ಕಿ.ಮೀ.ದರ 10 ರಿಂದ 14 ರೂ.ಗೆ ಏರಿಕೆ
      * ಐಷಾರಾಮಿ ಟ್ಯಾಕ್ಸಿಗಳ ದರ ಕಿ.ಮೀ.ಗೆ 25 ರಿಂದ 30 ರೂ.ಗೆ ಏರಿಕೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+