ಓಲಾ ಕ್ಯಾಬ್ ಚಾಲಕನಿಗೆ ಎಣ್ಣೆ ನಶೆ- ಕಾರು ರಾಬರಿ ಮಾಡಿದ ಕಿಲಾಡಿ ಜೋಡಿ ಅಂದರ್

ಬೆಂಗಳೂರು, ಸೆಪ್ಟೆಂಬರ್ 26: ಓಲಾ ಕ್ಯಾಬ್ ಚಾಲಕನ ಬಳಿಯಲ್ಲಿ ಬಾಡಿಗೆ ಮಾತನಾಡಿ ಕಾರಲ್ಲಿ ರೌಂಡ್ಸ್‌ಗೆ ಕರೆದುಕೊಂಡು ಹೋದ ದಂಪತಿ ಚಾಲಕನ ಬಳಿಯಲ್ಲಿ ಸಲುಗೆಯನ್ನು ಬೆಳೆಸಿ ಚಾಲಕನಿಗೆ ಕಂಠಪೂರ್ತಿ ಕುಡಿಸಿದ್ದಾರೆ. ಆ ಬಳಿಕ ಚಾಲಕನ್ನು ಹೆದರಿಸಿ ಕೀ ಕಸಿದುಕೊಂಡು ಕಾರನ್ನು ರಾಬರಿ ಮಾಡಿಕೊಂಡು ಹೋಗಿದ್ದ ಕಿಲಾಡಿ ಜೋಡಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.

ಕ್ಯಾಬ್‌ ಚಾಲಕನ ಚನ್ನಾಗಿ ಕುಡಿದ ಬಳಿಕ ಕಿಲಾಡಿ ಜೋಡಿ ಬೆಂಗಳೂರು ನಗರದಲ್ಲಿ ರೌಡ್ಸ್ ಹಾಕಿದ್ದಾರೆ. ಚಾಲಕ ನಿದ್ರೆ ಬರುತ್ತಿದೆ ಮಲಗುತ್ತೇನೆ ಎಂದು ಹೇಳಿದ ಬಳಿಕ ಆರೋಪಿಯೇ ಕಾರಿನ ಕೀಯನ್ನು ಪಡೆದು ಕಾರನ್ನು ಚಲಾಯಿಸಿದ್ದಾನೆ. ಬೆಳಗಿನ ಜಾವ ಎಚ್ಚರಗೊಂಡ ಕ್ಯಾಬ್ ಚಾಲಕನಿಗೆ ತಾನೂ ರೌಡಿಶೀಟರ್ ಆಗಿದ್ದು ಕೀ ಕೇಳಲು ಬಂದರೆ ಸುಮ್ಮನಿರಲ್ಲ ಎಂದು ಬೆದರಿಸಿ ಈಟಿಯಸ್ ಕಾರನ್ನು ರಾಬರಿ ಮಾಡಿಕೊಂಡು ದಂಪತಿ ಎಸ್ಕೇಪ್‌ ಆಗಿದ್ದರು.

ಓಲಾ ಕ್ಯಾಬ್ ಚಾಲಕ ಕಾರನ್ನು ರಾಬರಿ ಮಾಡಿದ್ದರ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸರಿಗೆ ಬಂದು ದೂರನ್ನು ನೀಡಿದ್ದ. ಈ ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು ಮಂಜ ಅಲಿಯಾಸ್ ಮೇಕೆ ಮಂಜ ಮತ್ತು ಆತನ ಪತ್ನಿ ವೇದಾವತಿ ಅಲಿಯಾಸ್ ಜ್ಯೋತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಂಪತಿ ಜೊತೆಗಿನ ಸಲುಗೆ ಜೀವದ ತೇರಿಗೆ ಕುತ್ತು

ದಂಪತಿ ಜೊತೆಗಿನ ಸಲುಗೆ ಜೀವದ ತೇರಿಗೆ ಕುತ್ತು

ಓಲಾ ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದವನು ಬಾಡಿಗೆಗೆ ಬಂದರು ಎಂದು ಕಾರು ಹತ್ತಿದ್ದ. ಕಾರಿನಲ್ಲಿ ಪರಿಚಯವಾದ ದಂಪತಿಯ ಜೊತೆ ಸಲುಗೆಯನ್ನು ಬೆಳೆಸಿಕೊಂಡ. ಅಷ್ಟೇ ಬೇಕಾಗಿತ್ತು ಕಿಲಾಡಿ ಖತರ್ನಾಕ್ ಜೋಡಿಗಳಿಗೆ. ಕ್ಯಾಬ್ ಚಾಲಕ ಶಿವಶಂಕರ್‌ನನ್ನು ಕುಡಿಯೋಣ ಎಂದು ಒಪ್ಪಿಸಿದ್ದಾರೆ. ಹೆಣ್ಣಿನ ಜೊತೆಗೆ ಎಣ್ಣೆ ಎಂದು ಆಸೆಪಟ್ಟವನೇ ಮೇಕೆ ಮಂಜ ಮತ್ತು ಆತನ ಪತ್ನಿ ವೇದಾವತಿ ಹಾಗೂ ಕ್ಯಾಬ್ ಚಾಲಕ ಶಿವಶಂಕರ್ ಕುಡಿದ್ದಾರೆ. ಆದರೆ ಕ್ಯಾಬ್ ಚಾಲಕನಿಗೆ ಹೆಚ್ಚಾಗಿಯೇ ಕುಡಿಸಿದ್ದಾರೆ. ಕ್ಯಾಬ್ ಚಾಲಕ ಟೈಟ್ ಆಗಿದ್ದೆ ನಿದ್ದೆಗೆ ಜಾರಿದ್ದಾನೆ.

ಪತ್ನಿಯನ್ನು ಕರೆದುಕೊಂಡು ಸುತ್ತಾಟ

ಪತ್ನಿಯನ್ನು ಕರೆದುಕೊಂಡು ಸುತ್ತಾಟ

ಕ್ಯಾಬ್ ಚಾಲಕ ಶಿವಶಂಕರ್ ಕುಡಿದು ನಿದ್ದೆಗೆ ಜಾರಿಬಿಟ್ಟಿದ್ದ. ಈತನ ಬಳಿಯಲ್ಲಿ ಕೀ ಪಡೆದ ಮಂಜ ಅಲಿಯಾಸ್ ಮೇಕೆ ಮಂಜ ಪತ್ನಿಯನ್ನು ಮುಂದೆ ಕೂರಿಸಿಕೊಂಡಿದ್ದಾನೆ. ಹಿಂದಿನ ಸೀಟಿನಲ್ಲಿ ಕ್ಯಾಬ್ ಚಾಲಕ ನಿದ್ದೆಯನ್ನು ಮಾಡುತ್ತಿದ್ದರೇ ದಂಪತಿಗಳು ಜಾಲಿ ರೈಡ್ ಹೋಗಿ ಮಸ್ತ್ ಮಜಾವನ್ನು ಮಾಡುತ್ತಿದ್ದರು. ಬೆಳಗಿನ ಜಾವಕ್ಕೆ ಕ್ಯಾಬ್ ಚಾಲಕನಿಗೆ ಎಚ್ಚರವಾದಾಗ ನಿರ್ಜನ ಪ್ರದೇಶದಲ್ಲಿ ಕ್ಯಾಬ್ ನಿಲ್ಲಿಸಿ ಚಾಲಕ ಶಿವಶಂಕರ್ ತಾನು ರೌಡಿ ಎಂದು ಬೆದರಿಸಿ ಕಾರನ್ನು ರಾಬರಿ ಮಾಡಿಕೊಂಡು ಮೇಕೆ ಮಂಜ ಮತ್ತು ಆತನ ಪತ್ನಿ ವೇದಾವತಿ ಅಲಿಯಾಸ್ ಜ್ಯೋತಿ ಎಸ್ಕೇಪ್ ಆಗಿಬಿಟ್ಟಿದ್ದಾರೆ.

ರೌಡಿ ಆಸಾಮಿಯನ್ನು ಬಂಧಿಸಿದ ಪೊಲೀಸರು

ರೌಡಿ ಆಸಾಮಿಯನ್ನು ಬಂಧಿಸಿದ ಪೊಲೀಸರು

ಮಂಜ ಅಲಿಯಾಸ್ ಮೇಕೆ ಮಂಜ ಯಲಹಂಕ ಉಪನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಈತನ ವಿರುದ್ದ ಯಲಹಂಕ ಉಪನಗರ ಠಾಣೆಯಲ್ಲಿ 01 ಕೊಲೆ ಪ್ರಕರಣ, 4 ಕೊಲೆಯತ್ನ, ಅಪಹರಣ, ರಾಬರಿ, ಸುಲಿಗೆ ಸೇರಿದಂತೆ 16ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಇದೀಗ ಈತ ಮತ್ತೊಂದು ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಮೇಕೆ ಮಂಜನ ಜೊತೆ ಆತನ ಪತ್ನಿಯು ಅರೆಸ್ಟ್ ಆಗಿದ್ದಾಳೆ.

ಕ್ಯಾಬ್ ಚಾಲಕನಿಗೆ ಬೆದರಿಸಿ ರಾಬರಿ ಮಾಡಿದ್ದರು

ಕ್ಯಾಬ್ ಚಾಲಕನಿಗೆ ಬೆದರಿಸಿ ರಾಬರಿ ಮಾಡಿದ್ದರು

"ಕ್ಯಾಬ್ ಚಾಲಕನನ್ನು ಬಾಡಿಗೆಗೆ ಕರೆದುಕೊಂಡು ಹೋಗಿ ಕುಡಿಸಿದ್ದಾರೆ. ಆ ಬಳಿಕ ಕುಡಿಸಿದ್ದಾರೆ. ಕ್ಯಾಬ್ ಚಾಲನಿಗೆ ಬೆದರಿಸಿ ಕಾರು ಕಸಿದುಕೊಂಡು ಹೋಗಿದ್ದರು. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಬರಿ ಕೇಸ್‌ ನಲ್ಲಿ ಇಬ್ಬರನ್ನು ಬಂಧಿಸಿ ತನಿಖೆಯನ್ನು ಮುಂದುವರೆಸಿದ್ದೇವೆ" ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+