ಸೆ. 30ರಂದು ಬೆಂಗಳೂರಲ್ಲಿ ಓಲಾ, ಊಬರ್ ಮುಷ್ಕರ

ಬೆಂಗಳೂರು, ಸೆಪ್ಟೆಂಬರ್ 24 : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಓಲಾ, ಊಬರ್ ಚಾಲಕರು ಸೆಪ್ಟೆಂಬರ್ 30ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಗರದಲ್ಲಿ ಕ್ಯಾಬ್ ಸೇವೆಯಲ್ಲಿ ಅಂದು ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ನಮ್ಮ ಚಾಲಕರ ಟ್ರೇಡ್ ಯೂನಿಯನ್ ಸೆಪ್ಟೆಂಬರ್ 30ರ ಸೋಮವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಫ್ರೀಡಂಪಾರ್ಕ್‌ನಲ್ಲಿ ಮುಷ್ಕರ ನಡೆಸಲಿದೆ. ಈ ಯೂನಿಯನ್‌ನಲ್ಲಿ 3 ಸಾವಿರಕ್ಕೂ ಅಧಿಕ ಕ್ಯಾಬ್ ಚಾಲಕರಿದ್ದಾರೆ.

ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಇರುವಂತೆ ಕ್ಯಾಬ್ ಗಳಿಗೆ ಮೀಟರ್ ಅಳವಡಿಸಿಕೊಳ್ಳಲು ಅವಕಾಶ ನೀಡಬೇಕು. ಚಾಲಕರಿಗೆ ಗುಂಪು ವಿಮಾ ಯೋಜನೆ ಜಾರಿಗೊಳಿಸಬೇಕು ಎಂಬುದು ಬೇಡಿಕೆಗಳಲ್ಲಿ ಪ್ರಮುಖವಾದವು.

Ola And Uber Drivers Called For Strike On September 30

ಓಲಾ ಮತ್ತು ಊಬರ್ ಕಂಪನಿಗಳು ಚಾಲಕರಿಗೆ ಸರಿಯಾದ ಹಣ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಆಟೋಗಳ ಮಾದರಿಯಲ್ಲಿ ಮೀಟರ್ ಅಳವಡಿಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂಬುದು ಬೇಡಿಕೆಯಾಗಿದೆ.

ಕ್ಯಾಬ್ ಅಗ್ರಿಗ್ರೇಟ್ ಕಂಪನಿಗಳು ಇನ್‌ ಸೆಂಟೀವ್ ಕಡಿಮೆ ಮಾಡಿದ್ದು ಚಾಲಕರಿಗೆ ನಷ್ಟವಾಗುತ್ತಿದೆ. ಸರ್ಕಾರ ಮೀಟರ್‌ ಅಳವಡಿಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಮೀಟರ್ ದರವನ್ನು ಸರ್ಕಾರವೇ ನಿಗದಿ ಮಾಡಲಿ ಎಂಬುದು ಚಾಲಕರ ಒತ್ತಾಯ.

ಸಂಚಾರಿ ಪೊಲೀಸರು ಕ್ಯಾಬ್ ಚಾಲಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮುಷ್ಕರ ನಡೆಸಲಾಗುತ್ತಿದೆ. ಸೋಮವಾರ ರಾಜಾಜಿನಗರದ ಆರ್‌ಟಿಓ ಕಚೇರಿ ಮುಂದೆ ಚಾಲಕರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+