UPI Payment: ವಹೀವಾಟು ಮಿತಿ ಏರಿಕೆ, ಜ.1ರಿಂದಲೇ ನಿಯಮ ಬದಲಾವಣೆ: ಬಳಕೆದಾರರು ಗಮನಿಸಿ
ಬೆಂಗಳೂರು, ಜನವರಿ 16: ಭಾರತಾದ್ಯಂತ ಬಹುತೇಕ ಮಂದಿ ಕೈಯಲ್ಲಿ ಮೊಬೈಲ್ ಫೋನ್‌ಗಳು ಇವೆ. ಅದರಿಂದ UPI ಪೇಮೆಂಟ್ ವ್ಯವಸ್ಥೆ ಚಾಲ್ತಿಯಲ್ಲಿದೆ. ಕೊರೊನಾದಂತಹ ಸಂದರ್ಭದಲ್ಲಿ ಇದರ ಪ್ರಯೋಜನ ಸಾಕಷ್ಟಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಈ ಯೂನಿಪೈಡ್ ಪೇಮೆಂಟ್ ಇಂಟರ್‌ಫೇಸ್ (UPI) ಅನ್ನು ಅಭಿವೃದ್ಧಿ ಪಡಿಸಿದೆ.
ಸಣ್ಣ ಮೊತ್ತದಿಂದ ಹಿಡಿದು ದೊಡ್ಡ ಮೊತ್ತದವರೆಗೂ ಈ UPI ಮೂಲಕ ಹಣ ಪಾವತಿಸಲಾಗುತ್ತದೆ. ನಿತ್ಯ ನೀವು ಬಳಸುವ ಈ UPIನ ನಿಯಮಗಳ ಆಗಿದ್ದಾಗ್ಗೆ ಬದಲಾಗುತ್ತಿರುವ ಎಂಬುದು ನಿಮಗೆ ಗೊತ್ತಿದೆಯೆ?. ಸದ್ಯ UPI ಮೋಡ್ ನಲ್ಲಿ ಒಂದಷ್ಟು ಸುಧಾರಣೆ ತರಲಾಗಿದೆ. ಬದಲಾವಣೆಗಳು ಆಗಿವೆ.

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಸಿಸ್ಟಮ್ ನಲ್ಲಿ ಈ ಯುಪಿಐ ವ್ಯವಸ್ಥೆ ಸಹ ಚಾಲ್ತಿಯಲ್ಲಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಯುಪಿಐನಲ್ಲಿ ಹೊಸ ವರ್ಷ ಜನವರಿ 1ರಿಂದಲೇ ಬದಲಾವಣೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಇಲ್ಲಿ ತಿಳಿಯೋಣ.
* ಒಂದು ಲಕ್ಷ ಮಿತಿ ಹೇರಿಕೆ
ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಯುಪಿಐನ ವಹೀವಾಟಿನ ಮೀತಿಯನ್ನು 1ಲಕ್ಷಕ್ಕೆ ಏರಿಕೆ ಮಾಡಿದೆ. ಈ ಮೂಲಕ ನೀವು ದೈನಂದಿನಲ್ಲಿ 1 ಲಕ್ಷ ಹಣವನ್ನು ನೀವು ಯುಪಿಐ ಮೂಲಕ ವಹೀವಾಟು ಮಾಡಬಹುದಾಗಿದೆ. ಆರೋಗ್ಯ ಮತ್ತು ಶಿಕ್ಷಣ ವಲಯದ ಅನುಕೂಲಕ್ಕಾಗಿ ಮಿತಿ ಹೆಚ್ಚಳ ಮಾಡಲಾಗಿದೆ.
* UPI ವಿನಿಮಯ ಶುಲ್ಕ
ಆನ್‌ಲೈನ್ ವ್ಯಾಲೆಟ್‌ಗಳಂತಹ ಪ್ರಿಪೇಯ್ಡ್ ಪಾವತಿ ಸಾಧನಗಳ ಮೂಲಕ ಮಾಡಿದ ವಹಿವಾಟುಗಳ ಮತ್ತು ರೂಪಾಯಿ 2000 ಕ್ಕಿಂತ ಕೆಲವು ವ್ಯಾಪಾರಿ ಯುಪಿಐ ವಹಿವಾಟುಗಳಿಗೆ ಶೇಕಡಾ 1.1ರಷ್ಟು ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಮೂಲಕ ಹೊಸ ನಿಯಮವೊಂದು ವಿಧಿಸಿದಂತಾಗಿದೆ.

* ಬಳಸದ ಯುಪಿಐ ಐಡಿ ರದ್ದಾಗಲಿವೆ
ಎಟಿಎಂಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಡ್ರಾ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ದೇಶದ ಹಲವು ಎಟಿಎಂಗಳಲ್ಲಿ ಈ ಸೌಲಭ್ಯ ಜಾರಿ ಆಗಲಿದೆ. ಇದರೊಂದಿಗೆ ಎಟಿಎಂನಲ್ಲಿ ಹಣ ಪಡೆಯಲು ಕಾರ್ಡ್ ಬಳಸುವ ಅಗತ್ಯವಿಲ್ಲ ಎಂದು ಎನ್‌ಪಿಸಿಐ ತಿಳಿಸಿದೆ.
* ಯಾರು ಒಂದು ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ತಮ್ಮ UPI ಐಡಿಗಳು ಮತ್ತು ಸಂಖ್ಯೆಗಳನ್ನು ಆನ್‌ಲೈನ್ ಪಾವತಿಗೆ ಬಳಸದಿದ್ದರೆ, ಅಂದರೆ ಪೇಟಿಎಂ, ಗೂಗಲ್ ಪೇ ಇನ್ನಿತರ ಅಪ್ಲಿಕೇಷನ್‌ಗಳ ಮೂಲಕ ಬಳಕೆ ಆಗದಿದ್ದರೆ ಅವು ರದ್ದಾಗುವ ಸಾಧ್ಯತೆ ಇದೆ.
* ನಾಲ್ಕು ಗಂಟೆ ಸಮಯದ ಮಿತಿ
ಇಂದಿನ ಆನ್‌ಲೈನ್ ಪೇಮೆಂಟ್ ಯುಗದಲ್ಲಿ ತಪ್ಪು ಯುಪಿಐ ಐಡಿಗೆ ಹಣ ಕಳುಹಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಯುಪಿಐ ವಹಿವಾಟಿಗೆ ನಾಲ್ಕು ಗಂಟೆಗಳ ಕಾಳ ಮಿತಿ ವಿಧಿಸಿದೆ. ಇದು ಒಂದೇ ಯುಪಿಐ ಐಡಿ ರೂಪಾಯಿಗೆ 2000 ಗಿಂತ ಹೆಚ್ಚಿನ ಮೊತ್ತದ ಮೊದಲ ಹಣ ವರ್ಗಾವಣೆಗೆ ಇದು ಅನ್ವಯಿಸುತ್ತದೆ. ತಪ್ಪು ಐಡಿಗೆ ನೀವು ಹಣ ಕಳುಹಿಸಿದರೆ ಅದರ ಮರಳಿ ಪಡೆಯಲು ನಾಲ್ಕು ಗಂಟೆಗಳ ಕಾಯಬೇಕಾಗುತ್ತದೆ.












Click it and Unblock the Notifications