ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದ ಬಿಡಿಎ
ಬೆಂಗಳೂರು, ಮೇ 25 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತೆರಿಗೆ ಪಾವತಿ ಮಾಡಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದೆ. ಈ ವರ್ಷ ಬ್ಯಾಂಕ್ ಮತ್ತು ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ.
ಜನರು ತೆರಿಗೆ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವರ್ಷ ಬ್ಯಾಂಕ್, ಆನ್‌ಲೈನ್ ಮೂಲಕ ತೆರಿಗೆ ಕಟ್ಟಬಹುದು. ಮುಂದಿನ ವರ್ಷ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ.
ಇ-ಖಾತಾ, ನಿವೇಶನ ಮತ್ತು ವಸತಿ ಹಂಚಿಕೆ ವ್ಯವಸ್ಥೆಯನ್ನು ಸಹ ಆನ್‌ಲೈನ್ ಮಾಡುವ ಕೆಲಸ ಜಾರಿಯಲ್ಲಿದೆ. ಈ ಹಿಂದೆ ಆಸ್ತಿ ಮೌಲ್ಯವನ್ನು ಲೆಕ್ಕಹಾಕಿ ಚಲನ್ ಕಳಿಸುವ ವ್ಯವಸ್ಥೆ ಇತ್ತು. ಈಗ ಆನ್‌ಲೈನ್ ಮೂಲಕ ಸುಲಭವಾಗಿ ತೆರಿಗೆ ಪಾವತಿ ಮಾಡಬಹುದಾಗಿದೆ.

ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡುವುದರಿಂದ ಚಲನ್ ಮುದ್ರಿಸಿ ಕಳಿಸುವ ಹಣ ಉಳಿತಾಯವಾಗಲಿದೆ. ಆನ್‌ಲೈನ್ ವ್ಯವಸ್ಥೆಯಿಂದಾಗಿ ಮೊಬೈಲ್, ಕಂಪ್ಯೂಟರ್ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ.
ತೆರಿಗೆ ಪಾಪತಿ ಮಾಡಲು ವಿಳಾಸ












Click it and Unblock the Notifications