ಎಸ್ಎಂಎಸ್ ನಲ್ಲಿ ಸಿಗುತ್ತೆ ಪಾಸ್ ಪೋರ್ಟ್ ಮಾಹಿತಿ

ವಿದೇಶಾಂಗ ಸಚಿವಾಲಯ ಇಂಹತ ಯೋಜನೆಗೆ ಬುಧವಾರ ಚಾಲನೆ ನೀಡಿದೆ. ರೂ. 30 ಶುಲ್ಕ ಪಾವತಿ ಮಾಡಿದರೆ, ಸಾಕು ನಿಮಗೆ ಪಾಸ್ ಪೋರ್ಟ್ ಅರ್ಜಿಯ ಸ್ಥಿತಿ-ಗತಿಗಳ ಮಾಹಿತಿ ನಿಮ್ಮ ಮೊಬೈಲ್ ಗೆ ಬರುತ್ತದೆ.
ಸದ್ಯ ಈ ಸೇವೆ ಜಲಂಧರ್, ಚಂಡೀಗಢ್, ಚೆನ್ನೈ ಪಾಸ್ ಪೋರ್ಟ್ ಸೇವಾಕೇಂದ್ರಗಳಲ್ಲಿ ಲಭ್ಯವಿದೆ ಕೆಲವೇ ದಿನಗಳಲ್ಲಿ ಈ ಸೇವೆ ಬೆಂಗಳೂರಿಗೆ ಪಾಸ್ ಪೋರ್ಟ್ ಕೇಂದ್ರದಲ್ಲಿಯೂ ಆರಂಭವಾಗಲಿದೆ. ಇದರಿಂದ ನಿಮ್ಮ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗುತ್ತದೆ.
ನೀವು ಪಾಸ್ ಪೋರ್ಟ್ ಸೇವಾಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಹೋದಾಗ, ಎಸ್ಎಂಎಸ್ ಶುಲ್ಕ ಪಾವತಿ ಮಾಡಿ ಬಂದರೆ ಸಾಕು. ಪಾಸ್ ಪೋರ್ಟ್ ನಿಮ್ಮ ಕೈ ಸೇರುವ ತನಕವೂ ನಿಮ್ಮ ಮೊಬೈಲ್ ಫೋನ್ ಗೆ ಮಾಹಿತಿ ದೊರೆಯುತ್ತಿರುತ್ತದೆ.
ನಿಮ್ಮ ಪಾಸ್ ಪೋರ್ಟ್ ಅರ್ಜಿಯ ಪರಿಶೀಲನೆ , ದಾಖಲಾತಿಗಳನ್ನು ನೀಡಿಕೆ, ಪೊಲೀಸ್ ಪರಿಶೀಲನೆಯ ಮಾಹಿತಿ, ಪಾಸ್ ಪೋರ್ಟ್ ಮುದ್ರಣ, ನಿಮ್ಮ ಕೈ ಸೇರುವ ದಿನಾಂಕ ಮುಂತಾದ ಮಾಹಿತಿಗಳು ಎಸ್ಎಂಎಸ್ ರೂಪದಲ್ಲಿ ನಿಮಗೆ ತಲುಪುತ್ತದೆ.
ಪಾಸ್ ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಗತಿ ತಿಳಿಯಲು ಅರ್ಜಿದಾರರು ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಲು ಈ ನೂತನ ಯೋಜನೆ ಜಾರಿಗೊಳಿಸಲಾಗಿದೆ. ಶೀಘ್ರದಲ್ಲೇ ಈ ಯೋಜನೆ ಬೆಂಗಳೂರಿನಲ್ಲೂ ಪ್ರಾರಂಭವಾಗಲಿದೆ.












Click it and Unblock the Notifications