ಬೆಂಗಳೂರಿನಲ್ಲಿ ಉದ್ದಿಮೆ ಆರಂಭಿಸುವುದು ಮೊದಲಿಗಿಂತ ಬಲು ಸುಲಭ
ಬೆಂಗಳೂರು, ಫೆಬ್ರವರಿ.02: ಸಿಲಿಕಾನ್ ಸಿಟಿಯಲ್ಲಿ ವ್ಯಾಪಾರ ಶುರು ಮಾಡುವ ಕನಸು ಹೊತ್ತಿದ್ದೀರಾ. ಆ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಮಹತ್ವದ ಕ್ರಮ ತೆಗೆದುಕೊಂಡಿದೆ. ಉದ್ದಿಮೆ ಆರಂಭಿಸುವ ವ್ಯಾಪಾರಿಗಳಿಗೆ ಬಿಬಿಎಂಪಿ ಸಿಹಿ ಸುದ್ದಿ ನೀಡಿದೆ.
2020-21ನೇ ಸಾಲಿನಲ್ಲಿ ಹೊಸ ಉದ್ದಿಮೆ ಪರವಾನಗಿ ಪಡೆಯುವುದು ಮತ್ತು ನವೀಕರಣ ಪ್ರಕ್ರಿಯೆಯನ್ನು ಬಿಬಿಎಂಪಿ ಮತ್ತಷ್ಟು ಸರಳೀಕರಣಗೊಳಿಸಿದೆ. ಮೊದಲ ಬಾರಿಗೆ 1 ರಿಂದ 5 ವರ್ಷಗಳ ಅವಧಿವರೆಗೂ ಲೈಸೆನ್ಸ್ ಪಡೆದುಕೊಳ್ಳಲು ಪಾಲಿಕೆಯು ಅವಕಾಶ ಕಲ್ಪಿಸಿದೆ.
ಬಿಬಿಎಂಪಿ ಹೊಸ ನೀತಿ ಅನ್ವಯ ಬೆಂಗಳೂರಿನಲ್ಲಿರುವ ವಾಣಿಜ್ಯ ಮಳಿಗೆ ಮಾಲೀಕರು ಮತ್ತು ವ್ಯಾಪಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ವರ್ಷಗಳವರೆಗೂ ಪರವಾನಗಿ ಪಡೆದುಕೊಳ್ಳಲು ಅನುಮತಿ ಸಿಗಲಿದೆ. ಅದೇ ರೀತಿ ಪರವಾನಗಿಯನ್ನು ನವೀಕರಣಗೊಳಿಸಬಹುದು.

ಪರವಾನಗಿ ಪಡೆಯಲು ಆನ್ ಲೈನ್ ನಲ್ಲೇ ಅವಕಾಶ
ಬೆಂಗಳೂರಿನಲ್ಲಿ ಈಗಾಗಲೇ 48 ಸಾವಿರ ವ್ಯಾಪಾರಿಗಳು ತಮ್ಮ ಉದ್ದಿಮೆಗೆ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ನಗರದಲ್ಲಿ ಉದ್ದಿಮೆ ಆರಂಭಿಸುವ ಮತ್ತು ಈಗಾಗಲೇ ಉದ್ದಿಮೆ ಆರಂಭಿಸಿದ್ದು, ಪರವಾನಗಿ ನವೀಕರಣಗೊಳಿಸಲು ಬಯಸುವ ಉದ್ಯಮಿಗಳು ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಇನ್ನು, ಆನ್ ಲೈನ್ ನಲ್ಲೇ ಶುಲ್ಕ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಪರವಾನಗಿ ಶುಲ್ಕ ಏರಿಕೆ ಇಲ್ಲ ಎಂದ ಬಿಬಿಎಂಪಿ
ಕಳೆದ 2016 ಫೆಬ್ರವರಿಯಲ್ಲಿ ಬಿಬಿಎಂಪಿ ಪರವಾನಗಿ ಶುಲ್ಕದಲ್ಲಿ ಏರಿಕೆ ಮಾಡಿತ್ತು. ಅದಾಗಿ ಇಂದಿನವರೆಗೂ ಈ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಾರಿ ಪರವಾನಗಿ ಶುಲ್ಕದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಪರವಾನಗಿ ಪಡೆಯಲು ಯಾವ ಉದ್ಯಮಕ್ಕೆ ಎಷ್ಟು ಶುಲ್ಕ?
ಬೆಂಗಳೂರಿನಲ್ಲಿ ವಿವಿಧ ಉದ್ಯಮಗಳ ಆರಂಭಕ್ಕೆ ಪರವಾನಗಿ ಪಡೆಯಲು ಒಂದೊಂದು ಶುಲ್ಕವನ್ನು ವಿಧಿಸಲಾಗುತ್ತದೆ. ಹಾಗಿದ್ದಲ್ಲಿ ಯಾವ ಉದ್ಯಮದ ಪರವಾನಗಿಗೆ ಎಷ್ಟು ಶುಲ್ಕ ಎಂಬುದರ ಪಟ್ಟಿ ಇಲ್ಲಿದೆ ನೋಡಿ.
| ಉದ್ಯಮ | ಶುಲ್ಕ |
| ಪಾನಿಪುರಿ ಚಾಟ್ಸ್ | 1,000 |
| ಮೆಸ್ | 2,000 |
| ಕಾಫಿ / ಟೀ ಸ್ಟಾಲ್ | 2,000 |
| ಚಿತ್ರಮಂದಿರ | 2,000 |
| ಕ್ಯಾಂಟೀನ್ | 5,000 |
| ದರ್ಶಿನಿ ಹೋಟೆಲ್ | 5,000 |
| ಪಿಜಿ / ಹಾಸ್ಟೆಲ್ | 10,000 |
| ಬ್ರೆಡ್, ಬಿಸ್ಕೆಟ್, ಕಾಂಡಿಮೆಂಟ್ಸ್ | 10,000 |
| ಎಣ್ಣೆ ಉತ್ಪಾದನೆ ಮತ್ತು ಸಂಸ್ಕರಣೆ | 10,000 |
| ಪೆಟ್ರೋಲ್ ಬಂಕ್ | 10,000 |
| ನಾನ್ ಎಸಿ ಹೋಟೆಲ್ | 10,000 |
| ಎಸಿ ಹೋಟೆಲ್ | 20,000 |
| ಸೂಪರ್ ಮಾರ್ಕೆಟ್ | 20,000 |
| ನರ್ಸಿಂಗ್ ಹೋಮ್ / ಆಸ್ಪತ್ರೆ | 50,000 |
| ಮಾಲ್ | 50,000 |
| ಕಿರಾಣಿ ಅಂಗಡಿ | 1 ಲಕ್ಷ |
| 3 ಸ್ಟಾರ್ ಹೋಟೆಲ್ | 2 ಲಕ್ಷ |
| 5 ಸ್ಟಾರ್ ಹೋಟೆಲ್ | 3 ಲಕ್ಷ |
| 7 ಸ್ಟಾರ್ ಹೋಟೆಲ್ | 4 ಲಕ್ಷ |

ಪರವಾನಗಿ ಶುಲ್ಕ ಪಾವತಿಸದಿದ್ದಲ್ಲಿ ದಂಡ ಫಿಕ್ಸ್
ಬೆಂಗಳೂರಿನಲ್ಲಿ ಉದ್ದಿಮೆ ನಡೆಸುತ್ತಿರುವ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಫೆ.29ರೊಳಗೆ ಪರವಾನಗಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಈ ಕಾಲಮಿತಿಯಲ್ಲಿ ಶುಲ್ಕ ಪಾವತಿಸಿದರೆ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಬದಲಾಗಿ ಮಾರ್ಚ್.01 ರಿಂದ 31ರ ಅವಧಿಯಲ್ಲಿ ಶುಲ್ಕ ಪಾವತಿಸುವ ಉದ್ಯಮಿಗಳಿಗೆ ಶೇ.25ರಷ್ಟು ದಂಡ ವಿಧಿಸಲಾಗುತ್ತದೆ. ಈ ಮಿತಿಯನ್ನು ದಾಟಿದ ಉದ್ಯಮಿಗಳಿಗೆ ಶೇ.100ರಷ್ಟು ದಂಡ ವಿಧಿಸುವುದಾಗಿ ಬಿಬಿಎಂಪಿ ತಿಳಿಸಿದೆ.

ಲೈಸೆನ್ಸ್ ಬೇಕಾದಲ್ಲಿ ಈ ದಾಖಲೆಗಳ ಸಲ್ಲಿಕೆ ಕಡ್ಡಾಯ
ಇನ್ನು, ಉದ್ಯಮ ಪರವಾನಗಿ ಪಡೆಯಲು ಹೆಚ್ಚೇನು ದಾಖಲೆಗಳು ಬೇಕಾಗಿಲ್ಲ. ಕಟ್ಟಡ ಮಾಲೀಕರೊಂದಿಗೆ ಮಾಡಿಕೊಂಡ ಬಾಡಿಗೆಯ ಕರಾರು ಪತ್ರ ಅಥವಾ ಭೋಗ್ಯಕ್ಕೆ ಹಾಕಿಕೊಂಡ ಕರಾರು ಪತ್ರ ಜೊತೆಗೆ ವಿದ್ಯುತ್ ಬಿಲ್ ಪಾವತಿಸಿದರೆ ಸಾಕು. ಬಿಬಿಎಂಪಿ ನಿಮಗೆ ಹೊಸ ಉದ್ಯಮ ಆರಂಭಿಸಲು ಪರವಾನಗಿ ನೀಡುತ್ತದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications