ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ಜತೆ ಕಾಫಿ-ಟೀ ಕೊಡಲು ಚಿಂತನೆ

ಬೆಂಗಳೂರು, ಜು.11: ಬಡವರ ಹಸಿವನ್ನು ನೀಗಿಸುವ ಸಲುವಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲಾಗಿತ್ತು. ಅಲ್ಲಿ ಇಷ್ಟು ದಿನ ತಿಂಡಿ-ಊಟ ಮಾತ್ರ ಸಿಗುತ್ತಿತ್ತು ಆದರೆ ಇನ್ನುಮುಂದೆ ಕಾಫಿ-ಟೀ ಕೂಡ ಲಭ್ಯವಿರಲಿದೆ.

198 ವಾರ್ಡ್‌ಗಳಲ್ಲಿ ಸ್ಥಳಾವಕಾಶ ದೊರೆಯದ 22 ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲಾಗಿದೆ. ಒಂದೆರೆಡು ಕಡೆ ಮೊಬೈಲ್‌ ಕ್ಯಾಂಟೀನ್‌ ಕೂಡ ಪ್ರಾರಂಭಿಸಲಾಗಿದೆ.

5 ರೂ.ಗೆ ಬೆಳಗಿನ ಉಪಹಾರ, 10 ರೂಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಊಟ-ಉಪಹಾರಕ್ಕಾಗೊ 6 ಕೋಟಿ ಮಂದಿ ಕ್ಯಾಂಟೀನ್‌ಗೆ ಬಂದಿದ್ದಾರೆ. ಇದುವರೆಗೆ ಪಲಾವ್‌, ಪೊಂಗಲ್‌, ಇಡ್ಲಿ, ಮತ್ತಿತರೆ ತಿಂಡಿಗಳು ದೊರೆಯುತ್ತಿತ್ತು ಆದರೆ ಇನ್ನುಮುಂದೆ ಕಾಫಿ-ಟೀ ಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

Now, Coffee, tea, Ragi bowl in Indira Canteen

ಕೆಲವು ಗ್ರಾಹಕರು ರಾಗಿಮುದ್ದೆಯನ್ನು ನೀಡಬೇಕೆಂದು ಬೇಡಿಕೆ ಇಟ್ಟಿರುವುದರಿಂದ ಅದನ್ನು ನೀಡಲು ಚಿಂತನೆ ನಡೆಸಲಾಗಿದೆ. ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆ ಅವಧಿ ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಮತ್ತೆ ನವೀಕರಿಸುವ ಸಂದರ್ಭದಲ್ಲಿ ಕಾಫಿ-ಟೀ ನೀಡುವುದು ಮತ್ತು ಊಟದಲ್ಲಿ ಮುದ್ದೆಯನ್ನು ಕೊಡುವ ಬಗ್ಗೆ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+