ಬೆಂಗಳೂರಲ್ಲಿ ಕಂಟೈನ್ಮೆಂಟ್‌ ಝೋನ್ ಸಂಖ್ಯೆ 40ಕ್ಕೆ ಏರಿಕೆ

ಬೆಂಗಳೂರು, ಜೂನ್ 04 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 417ಕ್ಕೆ ಏರಿಕೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 40 ಪ್ರದೇಶಗಳನ್ನು ಕಂಟೈನ್ಮೆಂಟ್‌ ಝೋನ್ ಎಂದು ಘೋಷಣೆ ಮಾಡಿದೆ.

ಕಳೆದ 24 ಗಂಟೆಯಲ್ಲಿ ಎರಡು ಹೊಸ ಪ್ರದೇಶಗಳು ಕಂಟೈನ್ಮೆಂಟ್ ಝೋನ್‌ಗೆ ಸೇರಿವೆ. ಮಲ್ಲೇಶ್ವರಂನ ಒಂದು ರಸ್ತೆ ಮತ್ತು ವಿ. ವಿ.ಪುರಂನ ಅಪಾರ್ಟ್‌ಮೆಂಟ್‌ಗಳನ್ನು ಕಂಟೈನ್ಮೆಂಟ್ ಝೋನ್ ಪಟ್ಟಿಗೆ ಸೇರಿಸಲಾಗಿದೆ.

ಬೆಂಗಳೂರು ನಗರದಲ್ಲಿ ಬುಧವಾರ 21 ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಪ್ರಕರಣದ ಸಂಖ್ಯೆ 417ಕ್ಕೆ ಏರಿಕೆಯಾಗಿದೆ. 256 ಜನರು ಇದುವರೆಗೂ ಗುಣಮುಖರಾಗಿದ್ದಾರೆ. ನಗರದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 149.

Now 40 Containment Zones In Bengaluru City

ನಗರದಲ್ಲಿನ ಕೋವಿಡ್ - 19 ಸೋಂಕಿತರ ಪೈಕಿ ಶೇ 48ರಷ್ಟು ಪ್ರಕರಣ ರೋಗಿಯ ಪ್ರಾಥಮಿಕ ಸಂಪರ್ಕದಿಂದ ಬಂದಿರುವುದು. ಶೇ 15ರಷ್ಟು ಪ್ರಕರಣಗಳು ಟ್ರಾವೆಲ್ ಹಿಸ್ಟರಿಯನ್ನು ಹೊಂದಿವೆ.

ಮುಂಬೈ, ಚೆನ್ನೈ, ಅಹಮದಾಬಾದ್ ಸೇರಿದಂತೆ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಸೋಂಕಿತ ಸಂಖ್ಯೆ ತುಂಬಾ ಕಡಿಮೆ ಇದೆ. ಬಿಬಿಎಂಪಿ ಕೈಗೊಂಡ ಕ್ರಮಗಳು ನಗರದಲ್ಲಿ ಸೋಂಕು ಹರಡದಂತೆ ತಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+