ಮದುವೆ, ಮುಂಜಿಗಳಿಗೆ ಬಿಸಿ ಮುಟ್ಟಿಸಿದ ನೋಟು ನಿಷೇಧ
ಬೆಂಗಳೂರು, ನವೆಂಬರ್ 9: 'ನಾಳೆ ಮದುವೆ ಇದೆ. ನಾವು ಯಾರಿಗೂ ಹಣ ಕೊಡೋದಿಕ್ಕೆ ಆಗ್ತಿಲ್ಲ. ಪುರೋಹಿತರು, ಅಡುಗೆಯವರು, ಪೂಜೆ ಸಾಮಾನುಗಳಿಗೆ, ಅದಿರಲಿ ಮನೆಗೆ ಬಂದಿರೋ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡೋಕೆ ಆಗಿಲ್ಲ. ಇದೇ ಥರ ಬೇರೆಯವರಿಗೂ ಆಗಿರುತ್ತೆ. ಈ ವಾರ ಒಳ್ಳೆ ಮುಹೂರ್ತಗಳಿವೆ ಅಂತ ಮದುವೆ ಮತ್ತಿತರ ಕಾರ್ಯಕ್ರಮ ನಿಗದಿ ಮಾಡಿಕೊಂಡಿರೋ ಎಲ್ಲರಿಗೂ ಇದೇ ಅವಸ್ಥೆ'.
-ನಾಳೆ ಮದುವೆ ಆಗಬೇಕಿರುವ ಬೀನಾ ಅವರ ಮಾತುಗಳಿವು. ಅವರ ಮದುವೆ ನವೆಂಬರ್ 10ನೇ ತಾರೀಕು ನಿಗದಿ ಆಗಿಹೋಗಿದೆ. ಆಕೆ ಕುಟುಂಬ ಸಂಕಷ್ಟದಲ್ಲೇ ಸಿಲುಕಿದೆ. ಕೊನೆ ಕ್ಷಣದ ಖರ್ಚುಗಳಿಗಾಗಿ ಎತ್ತಿಟ್ಟಿದ್ದ ಹಣ ರಾತ್ರೋ ರಾತ್ರಿ ಬರೀ ಕಾಗದದ ಚೂರುಗಳಂತಾಗಿವೆ. 500, 1000 ರುಪಾಯಿ ನೋಟು ದಿಢೀರ್ ರದ್ದು ಮಾಡಿದ್ದರಿಂದ ಜನರು ತೊಮ್ದರೆಗೆ ಸಿಲುಕಿಕೊಂಡಿದ್ದಾರೆ. ತಕ್ಷಣದ ದೊಡ್ಡ ಖರ್ಚುಗಳಿಗೆ ಏನು ಮಾಡೋದು ಅನ್ನೋದೇ ಎಲ್ಲರ ಆತಂಕವಾಗಿದೆ.

ಮತ್ತೆ ಮದುವೆ ವಿಚಾರಕ್ಕೆ ಬರೋದಾದರೆ, ಮಾರಾಟಗಾರರು 500, 1000 ರುಪಾಯಿ ನೋಟು ತಗೊಳ್ತಿಲ್ಲ, ನವೆಂಬರ್ ಹತ್ತರವರೆಗೆ ಬ್ಯಾಂಕ್ ಗಳು ಬಾಗಿಲು ತೆರೆಯಲ್ಲ. ಇಂಥ ಸಂದಿಗ್ಧ ಹೀಗೆ ಒಂದೇ ರಾತ್ರಿಯಲ್ಲಿ ಎದುರಾಗುತ್ತೆ ಅಂತ ಯಾರೂ ಊಹಿಸಿರುವುದಕ್ಕೂ ಸಾಧ್ಯವಿಲ್ಲ. ಒಂದು ಕಡೆ ಮದುವೆಯ ಎಲ್ಲ ಸಂಪ್ರದಾಯ-ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಈ ಸ್ಥಿತಿ ಬೇಗ ಸರಿಹೋಗಬಹುದು ಎಂಬ ನಿರೀಕ್ಷೆಯಲ್ಲಿ ಆ ಕುಟುಂಬವಿದೆ.












Click it and Unblock the Notifications