ರಫೇಲ್ ಯೋಜನೆ ಬಗ್ಗೆ ಯಾವ ಆಸಕ್ತಿಯೂ ಇಲ್ಲ: ಎಚ್‌ಎಎಲ್
ಬೆಂಗಳೂರು, ಫೆಬ್ರವರಿ 21: ಸದ್ಯದ ಪರಿಸ್ಥಿತಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್‌ಎಎಲ್) ರಫೇಲ್ ಯುದ್ಧ ವಿಮಾನ ತಯಾರಿಕೆಯ ಯೋಜನೆಯ ಕುರಿತು ಯಾವುದೇ ಆಸಕ್ತಿ ಹೊಂದುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಪ್ರಸ್ತುತ 36 ಯುದ್ಧ ವಿಮಾನಗಳನ್ನು ನೇರವಾಗಿ ಖರೀದಿಸಲಾಗುತ್ತಿದೆಯೇ ಹೊರತು ಅದು ಉತ್ಪಾದಿಸುತ್ತಿರುವಂತೆ ಅಲ್ಲ. ಈ ಕಾರಣದಿಂದ ನಮಗೆ ಅದರ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ. ಅದು ತಯಾರಿಕೆಯಾದರೆ ನಾವು ಆಸಕ್ತಿ ಹೊಂದುತ್ತೇವೆ. ಅದರ ಆಫ್‌ಸೆಟ್ಸ್ ತಯಾರಿಕೆ ಅಥವಾ ನೇರ ಖರೀದಿ ವಿಚಾರದಲ್ಲಿ ನಮಗೆ ಆಸಕ್ತಿ ಇಲ್ಲ ಎಂದು ಎಚ್‌ಎಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಹೇಳಿದ್ದಾರೆ.
ಸುಖೋಯ್ ಹೊಸ ಮಾದರಿಯ (ಸುಖೋಯ್-30) ಯುದ್ಧ ವಿಮಾನಗಳ ತಯಾರಿಕೆಗೆ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದು ಭವಿಷ್ಯದಲ್ಲಿ ಅದು ದೊರಕುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಎಚ್ಎಎಲ್ ಕುರಿತಾದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಮಾಧವನ್, 'ಎಚ್‌ಎಎಲ್‌ನಲ್ಲಿ ಸಾಮರ್ಥ್ಯದ ಕೊರತೆ ಇಲ್ಲ. ಯಾರು ಬೇಕಾದರೂ ಹೀಗೆ ಹೇಳಿಕೆ ನೀಡಬಹುದು' ಎಂದಿದ್ದಾರೆ.












Click it and Unblock the Notifications