ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಬೆಂಗಳೂರು ಪ್ರಶಸ್ತಿ 2015ಗೆ ಅರ್ಜಿ ಹಾಕಿ

By Mahesh
|
Google Oneindia Kannada News

ಬೆಂಗಳೂರು, ನ.28- ನಮ್ಮ ಬೆಂಗಳೂರು ಫೌಂಡೇಷನ್ (ಎನ್‍ಬಿಎಫ್) ಅಸಾಮಾನ್ಯ ಕೊಡುಗೆ ನೀಡಿದ ಶ್ರೀಸಾಮಾನ್ಯರನ್ನು ಗುರುತಿಸಿ, ಗೌರವಿಸಲು ಮತ್ತೊಮ್ಮೆ ಮುಂದಾಗಿದೆ, ಆಸಕ್ತರು ನಾಮ ನಿರ್ದೇಶನ ಮಾಡುವಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ (ಎನ್ ಬಿಎಫ್) ಸಿಇಒ ಶ್ರೀಧರ್ ಪಬ್ಬಿಶೆಟ್ಟಿ ಅವರು ಹೇಳಿದ್ದಾರೆ.

'ನಮ್ಮ ಬೆಂಗಳೂರು 477 ವರ್ಷಗಳ ಅದ್ಭುತ ಇತಿಹಾಸ ಹೊಂದಿದೆ. ಇತ್ತೀಚೆಗೆ ನಗರವನ್ನು ಕಾಡುತ್ತಿರುವ ಸಮಸ್ಯೆಗಳಿಂದ ಅದನ್ನು ಪುನರ್ ಸ್ಥಾಪಿಸಲು ನಾಗರಿಕರ ಪಾಲುದಾರಿಕೆ ಅಗತ್ಯವಾಗಿರುತ್ತದೆ. ಎಲೆಮರೆಕಾಯಿಯಂತಿರುವ ನಾಯಕರನ್ನು ಗೌರವಿಸಲು ಮಾತ್ರ ಶ್ರಮಿಸುವುದಲ್ಲದೆ ತಾವು ನೋಡಲಿಚ್ಛಿಸುವ ಬದಲಾವಣೆಯನ್ನು ತರಲು ಬದ್ಧತೆ ಹೊಂದಿದ್ದು ಅದಕ್ಕಾಗಿ ದಣಿವಿಲ್ಲದೆ ದುಡಿಯುವ ಹೆಚ್ಚಿನ ಜನರನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ'

ಬೆಂಗಳೂರಿನ ಬೆಳವಣಿಗೆಯಲ್ಲಿ ಅವಿರತವಾಗಿ ದುಡಿಯುತ್ತಿರುವ ವ್ಯಕ್ತಿ, ಸಂಘಟನೆಯನ್ನು ನಾಗರಿಕರು ಆಯ್ಕೆ ಮಾಡಬಹುದು. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘಗಳು, ಚುನಾಯಿತ ಪ್ರತಿನಿಧಿ, ಅನಿವಾಸಿ ಬೆಂಗಳೂರಿಗ, ಬೆಂಗಳೂರಿನ ವಿದೇಶಿ ನಿವಾಸಿಗ,ಉದ್ಯಮ ಹಾಗೂ ವ್ಯಕ್ತಿಗಳ ವಿಭಾಗದಲ್ಲಿ ನಾಮ ನಿರ್ದೇಶನ ನಡೆಯಲಿದೆ.

Nominations open for Seventh edition Namma Bengaluru Award

ಬೆಂಗಳೂರನ್ನು ಹೆಚ್ಚು ಉತ್ತಮವಾದ ಸ್ಥಳವನ್ನಾಗಿಸುವ ಪ್ರಯತ್ನದಲ್ಲಿ ತಮ್ಮ ಅನುಕೂಲಗಳನ್ನು ದಾಟಿ ಶ್ರಮಿಸಿರುವ ಹಾಗೂ ಎಲೆಮರೆಯ ಕಾಯಿಯಂತಿರುವ ನಿಮಗೆ ಗೊತ್ತಿರುವ ಹೀರೋಗಳನ್ನು ದಯವಿಟ್ಟು ನಾಮನಿರ್ದೇಶನ ಮಾಡಿ'' ಎಂದು ಹೇಳಿದ್ದಾರೆ.

ಗಣ್ಯ ನಾಗರಿಕರಿಂದ ಕೂಡಿದ ತೀರ್ಪುಗಾರರ ಸಮಿತಿಯನ್ನು ರಚಿಸಲಾಗಿದ್ದು, ಇವರು ವಿಜೇತರನ್ನು ಮೌಲ್ಯೀಕರಿಸಿ ಅಂತಿಮಗೊಳಿಸಲಿದ್ದಾರೆ. ಜೀವನದ ಎಲ್ಲ ಕ್ಷೇತ್ರಗಳ ವ್ಯಕ್ತಿಗಳನ್ನು ಈ ಸಮಿತಿ ಒಳಗೊಂಡಿದ್ದು, ಇವರು ತಮ್ಮ ಸ್ವಂತ ವೈಯಕ್ತಿಕ ಸಾಮರ್ಥದಿಂದ ನಗರಕ್ಕೆ ಹೆಮ್ಮೆ ತಂದಿದ್ದಾರೆ.

ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರಿಂದ ನಿವಾಸಿಗಳ ಕಲ್ಯಾಣ ಸಂಘಗಳ ಸದಸ್ಯರನ್ನು ಒಳಗೊಂಡ ತೀರ್ಪುಗಾರರ ಸಮಿತಿಯಲ್ಲಿ 18 ಗಣ್ಯರು ಇರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅರ್ಜಿಗಳನ್ನು ಆನ್‌ಲೈನ್ ಅಥವಾ ಪತ್ರ ಮೂಲಕ ಕಳುಹಿಸಬಹುದು. www.nammabengaluruawards.org ತಾಣದಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ [email protected] ಗೆ ಇ ಮೇಲ್ ಮಾಡಿ.

ಬಿಬಿಎಂಪಿ ಮತ್ತು ಬೆಂಗಳೂರು ಒನ್ ಕೇಂದ್ರಗಳಿಂದ ನಾಮನಿರ್ದೇಶನ ಅರ್ಜಿಗಳನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗೆ 080-41102757/ 9591985287, ವೆಬ್ ಸೈಟ್ ನೋಡಿ : http://namma-bengaluru.org/index.php

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X