ಫೆ.21ರಂದು ಬನಶಂಕರಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
Recommended Video

ಫೆಬ್ರವರಿ 21ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ | Oneindia Kannada
ಬೆಂಗಳೂರು, ಫೆಬ್ರವರಿ 19 : ಬನಶಂಕರಿ ಎಂಯುಎಸ್ಎಸ್ ಹಾಗೂ ಎಫ್ 20 ಫೀಡರ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ.21 ರಂದು ಬನಶಂಕರಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬನಶಂಕರಿ ಎಂಯುಎಸ್ಎಸ್ ಹಾಗೂ ಎಫ್20 ಫೀಡರ್ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.21 ರಂದು ಬುಧವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬ್ಯಾಂಕ್ ಕಾಲೊನಿ, ಶ್ರೀನಿವಾಸನಗರದ ಕೆಲವು ಪ್ರದೇಶಗಳು, ಗಿರಿನಗರ, ವಿನಾಯಕನಗರ, ಸೀತಾ ಸರ್ಕಲ್, ಬನಶಂಕರಿಯ ಕೆಲವು ಭಾಗಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರ ಕಚೇರಿ ತಿಳಿಸಿದೆ.












Click it and Unblock the Notifications