ಬೆಂಗಳೂರಲ್ಲಿ 2 ದಿನ ಕರೆಂಟ್ ಇರಲ್ಲ: ಯಾವಾಗ? ಎಲ್ಲೆಲ್ಲಿ?

ಬೆಂಗಳೂರು, ಮೇ 24: ಮೆಟ್ರೋ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಮೇ 26ರ ಶನಿವಾರ ಮತ್ತು ಮೇ 27ರ ಭಾನುವಾರ ನಗರದ ಪೂರ್ವ ಮತ್ತು ಉತ್ತರ ಭಾಗದ ಹಲವು ಪ್ರದೇಶದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

66/11 ಕೆವಿ ಆಸ್ಟಿನ್‌ಟೌನ್, ಎಂಯುಎಸ್ಎಸ್ ಫೀಡರ್-11 ಮೂಲಕ ವಿದ್ಯುತ್ ಸರಬರಾಜಾಗುವ ಪ್ರದೇಶಗಳಾದ ಆಸ್ಟಿನ್ ಟೌನ್‌ನ ಫಿಲೋಮಿನ ಆಸ್ಪತ್ರೆ, ಆಂಜನೇಯ ದೇವಸ್ಥಾನ,ಕೆಥೆಡ್ರಲ್ ಸ್ಕೂಲ್, ಥಾಮಸ್ ಕೆಫೆ, ಬಿಡಿಎ, ನೀಲಸಂದ್ರ, ಗ್ರೇಪ್ ಗಾರ್ಡನ್, ಪರಪ್ಪ ಗಾರ್ಡನ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಫೀಡರ್ ಎಫ್‌-12 ವ್ಯಾಪ್ತಿಯ ಶಾಪರ್ ಸ್ಟಾಪ್, ಗರುಡ ಮಾಲ್, ಮಾರ್ಕ್ಸ್ ರೋಡ್, ಫೀಡರ್ ಎಫ್ 14 ವ್ಯಾಪ್ತಿಯ ಎಚ್‌. ಸಿದ್ದಯ್ಯ ರಸ್ತೆ, ಅಶೋಕ ನಗರ, ಲಾವಲ್ಲೆ ರಸ್ತೆ, ಹಾಗೂ ಫೀಡರ್ 5 ವ್ಯಾಪ್ತಿಯ ಅಶೋಕನಗರ, ಎಒಪಿಎಸ್, ಬ್ರಿಗೇಡ್ ರಸ್ತೆ, ವುಡ್ ಸ್ಟ್ರೀಟ್ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

No power in east and north Bengaluru for two days

66/11 ಕೆವಿ ಅಮರಜ್ಯೋತಿ ಎಂಯುಎಸ್ಎಸ್ ಫೀಡರ್ ಮೂಲಕ ವಿದ್ಯುತ್ ಸರಬರಾಜಾಗುವ ಪ್ರದೇಶಗಳಾದ ಶ್ರೀನಿವಾಗಿಲು, ಫ್ರೆಂಡ್ಸ್ ಕಾಲೊನಿ, ಕಾವೇರಿ ಲೇಔಟ್, ಜೇಮ್ಸ್ ರೆಸಿಡೆನ್ಸಿ, ನಿಕೋಲಸ್ ಪ್ರಾಪರ್ಟೀಸ್, ಚಂದ್ರ ರೆಡ್ಡಿ ಲೇಔಟ್, ಈಜಿಪುರ, ಸುಂದರಿ ಮೆಮೊರಿಯಲ್ ಏರಿಯಾ, ವಿವೇಕನಗರ, ಕೆ.ಆರ್. ಕಾಲೊನಿ, ಕೋರಮಂಗಲ ಒಳವರ್ತುಲ ರಸ್ತೆ, ಅಮರಜ್ಯೋತಿ ಲೇಔಟ್, ಎಸ್‌ಟಿ ಬೆಡ್‌ನ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.

ಇನ್ನು 220/66/11 ಕೆವಿ ಎಚ್‌ಎಎಲ್ ಎಂಯುಎಸ್‌ಎಸ್ ಫೀಡರ್ ಮೂಲಕ ವಿದ್ಯುತ್ ಹಾದುಹೋಗುವ ಮಾರ್ಗಗಳಾದ ಜಿಟಿಆರ್‌ಇ, ಇಸ್ರೋ, ದೊಡ್ಡನೆಕ್ಕುಂದಿ, ಸೆಸ್ನಾ ಶ್ರೀರಾಮನಗರಿ, ಕೋನೇನ ಅಗ್ರಹಾರ, ಚಲಘಟ್ಟ, ಜಗದೀಶನಗರ, ಎಲ್‌ಬಿ ಶಾಸ್ತ್ರಿ ನಗರ, ಕಗ್ಗದಾಸನಪುರ, ವಿಜ್ಞಾನನಗರ, ಅಶ್ವತ್ಥನಗರ, ಇಸ್ಲಾಂಪುರ, ಮಲ್ಲೇಶ್‌ಪಾಳ್ಯ, ಬಿಇಎಂಎಲ್ ವಾಣಿಜ್ಯ ಸಂಕೀರ್ಣ, ಸಂಜಯನಗರ, ಮಂಜುನಾಥನಗರ, ಚಿನ್ನಪ್ಪನಹಳ್ಳಿ, ಅಬ್ದುಲ್‌ ಕಲಾಂ ಲೇಔಟ್, ಹೇಮಂತನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

66/11 ಕೆವಿ ಕೆಸಿ ವ್ಯಾಲಿ ಎಂಯುಎಸ್‌ಎಸ್ ಫೀಡರ್ ಮೂಲಕ ವಿದ್ಯುತ್ ಸರಬರಾಜಾಗುವ ಮಾರ್ಗಗಳಾದ ಗಾಲ್ಫ್ ಲಿಂಕ್ ಸಾಫ್ಟ್‌ವೇರ್, ಎನ್‌ಆರ್ ಲೇಔಟ್, ಪರ್ಲ್ ಪ್ಯಾರಡೈಸ್, ಇಂಟೆಲ್ ಮಹೇಶ್ ಕೇತನ್, ಎಮ್‌ಎಎಲ್ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+