ರೌಡಿಗೆ ಸಿಕ್ಕ ರಾಜ ಮರ್ಯಾದೆ ಯಾವ ಹೀರೋಗೂ ಸಿಗಲ್ಲ !

ಬೆಂಗಳೂರು, ನವೆಂಬರ್ 19: ರೌಡಿಯೊಬ್ಬ ಜೈಲಿನಿಂಧ ಬಿಡುಗಡೆಯಾಗುವಾಗ ಸಿಕ್ಕ ಮರ್ಯಾದೆ ಯಾವ ನಾಯಕ ನಟನಿಗೂ ಸಿಗರಿಲಿಕ್ಕೆ ಸಾಧ್ಯವಿಲ್ಲ. ಪೊಲೀಸರಂತೂ ಜೀವಮಾನದಲ್ಲಿ ನೋಡಿರಲಿಕ್ಕೆ ಸಾಧ್ಯವಿಲ್ಲ. ರೌಡಿಯೊಬ್ಬ ಜೈಲಿನಿಂದ ಊರಿಗೆ ಎಂಟ್ರಿ ಕೊಡುವಾಗ ಆತನ ಮೇಲೆ ಹೂವು ಸುರಿದು ಅಭಿನಂಧಿಸಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ರೌಡಿ ಹೆಸರು ಆಟೋ ರಾಮ. ರೌಡಿ ಶೀಟರ್ ಲಕ್ಷ್ನಣ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ರಾಮ ಪೆರೋಲ್ ಮೇಲೆ ಬಿಡುಗಡೆಯಾಗಿ ನ.೬ ರಂದೇ ಪುನಃ ಜೈಲು ಸೇರಿದ್ದಾನೆ. ಆದರೆ ಆತ ಬಂದು ಹೋಗುವಾಗ ಆತನಿಗೆ ಕೊಟ್ಟಿರುವ ರಾಜ ಮರ್ಯಾದೆ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಯಾವ ಸಚಿವರಿಗೂ, ನಾಯಕ ನಟನಿಗೂ ಆ ರಾಜ ಮರ್ಯಾದೆ ಸಿಕ್ಕಿರಲಿಕ್ಕೆ ಸಾಧ್ಯವಿಲ್ಲ.

ಆಟೋ ರಾಮ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಾಗ ಬರೋಬ್ಬರಿ ಮೂವತ್ತುಕ್ಕೂ ಹೆಚ್ಚು ವಾಹನಗಳ ಎಸ್ಕಾರ್ಟ್. ಊರಿಗೆ ಎಂಟ್ರಿ ಕೊಡುತ್ತಿದ್ದಂತೆ ಹೂವಿನ ಅರ್ಪಣೆ.. ಹಿಂದೆ ನೂರಾರು ಬೆಂಬಲಿಗರು. ಜತೆಗೆ ನೀ ಪ್ರೀತಿಸುವ ಜನರಿರುವರು ನಿನ್ನ ಬೆನ್ನ ಹಿಂದೆ ಸಾಂಗ್. ಅದೂ ಹೈವೇ ರೋಡ್ ನಲ್ಲಿ ರೌಡಿಯ ಶೋ ಅಪ್ ಹವಾ ನೀಡಿದ್ದು,ಅ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.

No hero can get the honor of the king Rowdy Ramas occasional video viral

ಕನಕಪುರದ ಕಬ್ಬಾಳದಲ್ಲಿ ಆಟೋ ರಾಮ ಅರ್ಭಟ ಮೆರೆದಿದ್ದಾನೆ. ಈ ವಿಡಿಯೋ ನೋಡಿ ದಕ್ಷಿಣ ವಿಭಾಗದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ನಮ್ಮ ಸರ್ವೀಸ್ ನಲ್ಲಿ ನೂರಾರು ಕೊಲೆ ಕೇಸು ಪತ್ತೆ ಮಾಡಿದ್ರೂ, ನಿವೃತ್ತಿ ಬಳಿಕ ಯಾವೂರು ದಾಸಯ್ಯ ಅನ್ನಲ್ಲ. ನೋಡಿ ರೌಡಿಯೊಬ್ಬನಿಗೆ ಯಾವ ರೀತಿ ಮರ್ಯಾದೆ ಕೊಡ್ತಾರೆ ಜನ ಎಂದು ವಿಡಿಯೋ ನೋಡಿರುವ ಪೊಲೀಸ್ ಅಧಿಕಾರಿ ತನ್ನ ಮನದಾಳದ ಮಾತು ಹಂಚಿಕೊಂಡರು.

ಹೀಗೆ ಹೈವೇನಲ್ಲಿ ಬಿಲ್ಡಪ್ ಕೊಟ್ಟಿರುವ ರೌಡಿ ಆಟೋರಾಮನ ಹೆಸರು ರೌಡಿ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಕೇಳಿಬಂದಿತ್ತು. 2006 ರಲ್ಲಿ ನಡೆದಿದ್ದ ಪ್ರಭಾಕರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆಟೋರಾಮನ ವಿರುದ್ಧ ಹಲವಾರು ಪ್ರಕರಣ ದಾಖಲಾಗಿವೆ. ಹನುಮಂತನಗರ ಠಾಣೆಯಲ್ಲಿ ಈತನ ವಿರುದ್ಧ ಹಲವು ಕೇಸು ದಾಖಲಾಗಿದ್ದು, ವಿಡಿಯೋ ಸತ್ಯಾಸತ್ಯತೆ ಮಾಹಿತಿ ಕಲೆ ಹಾಕಲು ದಕ್ಷಿಣ ವಿಭಾಗದ ಪೊಲೀಸರು ಮುಂದಾಗಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಆಟೋ ರಾಮನ ಶಿಷ್ಯರಿಗಾಗಿ ಪೊಲೀಸರು ರಹಸ್ಯವಾಗಿ ಶೋಧ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+