ಮತದಾನದ ದಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಇಲ್ಲ!
ಬೆಂಗಳೂರು, ಮೇ 11: ಮತ ಚಲಾಯಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿಂದು ಮನೆಗೆ ಹೋಗುತ್ತೇವೆ ಎನ್ನುವವರಿಗೆ ನಿರಾಶೆ ಕಾದಿದೆ. ಏಕೆಂದರೆ ಶನಿವಾರ ಇಂದಿರಾ ಕ್ಯಾಂಟೀನ್ ತೆರೆಯುವುದಿಲ್ಲ.
ನಗರದ 27 ವಿಧಾನಸಭಾ ಕ್ಷೇತ್ರಳಲ್ಲಿನ ಮತಗಟ್ಟೆ ಸಿಬ್ಬಂದಿಗಳಿಗೆ ಶನಿವಾರ ಇಂದಿರಾ ಕ್ಯಾಂಟೀನ್ ಊಟವನ್ನು ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿರಲಿದೆ.
ಸಾರ್ವಜನಿಕರಿಗೆ ಶನಿವಾರ ಒಂದು ದಿನ ಇಂದಿರಾ ಕ್ಯಾಂಟೀನ್ ಊಟ ಲಭ್ಯವಾಗುವುದಿಲ್ಲ. ಮೇ 12ರಂದು ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿರುವ 28 ಮತಗಟ್ಟೆಗಳ ಪೈಕಿ 27 ಮತಗಟ್ಟೆಗಳ ಸಿಬ್ಬಂದಿಗಳಿಗೆ ಇಂದಿರಾ ಕ್ಯಾಂಟೀನ್‌ನಿಂದ ಊಟ ಸರಬರಾಜು ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಶನಿವಾರ ಸರ್ಕಾರಿ ರಜೆ ಇರುತ್ತದೆ. ಶುಕ್ರವಾರವೇ ಮತಗಟ್ಟೆಗಳಿಗೆ ಸಿಬ್ಬಂದಿಗಳು ನಿಯೋಜನೆಗೊಂಡಿರುವುದರಿಂದ ಶುಕ್ರವಾರದಿಂದಲೇ ಸಿಬ್ಬಂದಿಗಳಿಗೆ ಇಂದಿರಾ ಕ್ಯಾಂಟೀನ್ ಊಟ್ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ಬೆಲೆಗೆ ಊಟ, ತಿಂಡಿ ಲಭ್ಯವಾಗುತ್ತಿದ್ದ ಕಾರಣ ಸಾರ್ವಜನಿಕರು ತೆರಳುತ್ತಿದ್ದರು. ಆದರೆ ಇನ್ನು ಒಂದು ದಿನ ಸಾರ್ವಜನಿಕರಿಗೆ ಊಟ, ತಿಂಡಿ ಲಭ್ಯವಿರುವುದಿಲ್ಲ.












Click it and Unblock the Notifications