ಕಬ್ಬನ್ ಪಾರ್ಕ್ ನಲ್ಲಿ ಫೋಟೋ ಶೂಟ್ ನಿರ್ಬಂಧ?

ಬೆಂಗಳೂರು, ಜನವರಿ 16 : ಕಬ್ಬನ್ ಉದ್ಯಾನದಲ್ಲಿ ಪ್ರೀ ವೆಡ್ಡಿಂಗ್, ಪ್ರೆಗ್ನೆನ್ಸಿ ಶೂಟ್ ನ ಹಾವಳಿ ಅತಿಯಾಗಿದೆ ಹಾಗಾಗಿ ತೋಟಗಾರಿಕೆ ಇಲಾಖೆ ಫೋಟೋ ಶೂಟ್ ನಿರ್ಬಂಧಕ್ಕೆ ಮುಂದಾಗಿದೆ.

ವಾಣಿಜ್ಯದ ಉದ್ದೇಶದ ಛಾಯಾಗ್ರಹಣ ನಿಷೇಧಿಸುವ ಅಥವಾ ದುಬಾರಿ ಶುಲ್ಕ ವಿಧಿಸುವ ಆಲೋಚನೆ ನಡೆಸಿದೆ. ಲಾಲ್ ಬಾಗ್ ನಲ್ಲಿ ಇದಕ್ಕೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಆದರೆ, ಕಬ್ಬನ್ ಪಾರ್ಕ್ ನಲ್ಲಿ ಯಾವುದೇ ಅಡ್ಡಿಯಿಲ್ಲದೆ ಫೋಟೋಗ್ರಫಿ ಮಾಡಬಹುದಾಗಿತ್ತು. ಕೆಲ ಫೋಟೋಗ್ರಾಫರ್ ಗಳು ಕಬ್ಬನ್ ಉದ್ಯಾನದ ಶಾಂತ ಪರಿಸರಕ್ಕೆ ಧಕ್ಕೆ ಉಂಟುಮಾಡುತ್ತಿರುವ ಆರೋಪಗಳು ಕೇಳಿಬಂದಿದ್ದವು.

ಉದ್ಯಾನದಲ್ಲಿ ಲಕ್ಷಾಂತರ ಪಕ್ಷಿಗಳಿವೆ. ಫೋಟೊ ಸುಂದರವಾಗಿ ಬರಬೇಕೆಂಬ ಕಾರಣಕ್ಕೆ ಅವುಗಳನ್ನು ಏಕಕಾಲದಲ್ಲಿ ಹಾರಿಸುವುದು, ಹೊರಗಡೆಯಿಂದ ಫೋಟೊ ಸುಂದರವಾಗಿ ಕಾಣಿಸುವಂತೆ ಮಾಡಲು ವಿವಿಧ ವಸ್ತುಗಳನ್ನು ಬಳಸುವುದು, ಗಿಡ-ಮರಗಳಿಗೆ ಧಕ್ಕೆ ಮಾಡಿರುವುದನ್ನು ಇಲಾಖೆ ಗಮನಿಸಿದೆ.

No commercial Shooting in Cubbon park

ಫೋಟೋ ಶೂಟ್ ಗೆ ಅವಕಾಶ ನೀಡುವಂತೆ ಸಾರ್ವಜನಿಕರೇ ಒತ್ತಾಯಿಸಿದರೆ ಸರ್ಕಾರ ಸನುಮತಿ ಪಡೆದು ಶುಲ್ಕ ವಿಧಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಬ್ಬನ್ ಉದ್ಯಾನದಲ್ಲಿ ಪ್ರತಿ ದಿನ 20 ರಿಂದ 30 ಪೋಟೊ ಶೂಟ್ ಗಳು ನಡೆಯುತ್ತಿದೆ.

ಪ್ರವಾಸಿಗರಿಗೆ ಛಾಯಾಗ್ರಹಣ ಮಾಡುವುದಕ್ಕೆ ಅಡ್ಡಿಯಿಲ್ಲ. ಆದರೆ, ಪ್ರೀ ವೆಡ್ಡಿಂಗ್ ಮತ್ತು ಪ್ರೆಗ್ನೆನ್ಸಿ ಶೂಟಿಂಗ್ ನಿರ್ಬಂಧಿಸುವ ಸಂಬಂಧ ಚಿಂತನೆಯಿದೆ. ತಜ್ಞರೊಂದಿಗೆ ಚರ್ಚಿಸಿ ನಿಷೇಧಿಸುವುದು ಅಥವಾ ಶುಲ್ಕ ವಿಧಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಂತೇಶ್ ಮುರಗೋಡ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+