New Year 2025: ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಹೈ ಅಲರ್ಟ್‌; ಬೌನ್ಸರ್‌ಗಳ ಜೊತೆ ಪೊಲೀಸರ ಸಭೆ

New Year 2025: 2025ರ ಹೊಸ ವರ್ಷಕ್ಕೆ ಕಾಲಿಡಲು ಇನ್ನೂ ಕೆಲವೇ ವಾರಗಳು ಮಾತ್ರ ಬಾಕಿಯಿವೆ. ಇನ್ನು ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ತುಸು ವಿಶೇಷವಾಗಿರುತ್ತದೆ. ಈ ಹಿನ್ನೆಲೆ ಬೆಂಗಳೂರು ಪೊಲೀಸರು ಈ ಬಾರಿ ಬೌನ್ಸರ್‌ಗಳ ಜೊತೆ ಸಭೆ ನಡೆಸಿ ಗಮನ ಸೆಳೆದಿದ್ದಾರೆ.

ಬೆಂಗಳೂರಿನಲ್ಲಿ ಹೊಸ ವರ್ಷ ಮೊದಲ ರಾತ್ರಿ ಕುಡಿದು ತೇಲಾಡುವುದಲ್ಲದೇ ಅವಾಂತರಗಳನ್ನೇ ಸೃಷ್ಟಿಸಿರುವ ಘಟನೆಗಳನ್ನು ಈಗಾಗಲೇ ನಡೆದಿವೆ. ಆದ್ದರಿಂದ ಈ ಬಾರಿ ಪೊಲೀಸರು ಭಾರೀ ಬಿಗಿ ಭದ್ರತೆ ಕೈಗೊಳ್ಳಲು ಮುಂದಾಗಿದ್ದಾರೆ. ಈ ಹಿನಗನೆಲೆ ಪೊಲೀಸರು ಬೆಂಗಳೂರಿನ ಬೌನ್ಸರ್‌ಗಳ ಜೊತೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

New Year 2025 High Alert in Bengaluru Police Officers Meeting with Bouncers

ಬೆಂಗಳೂರಿನಲ್ಲಿ ಪ್ರತೀ ವರ್ಷವೂ ಹೊಸ ವರ್ಷದ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಮದ್ಯರಾತ್ರಿ ಆದರೂ ಸಂಭ್ರಮ ಮಾತ್ರ ಮುಗಿದಿರುವುದಿಲ್ಲ. ಅಲ್ಲದೆ, ಪಬ್‌ಗಳ ಏರಿಯಾಗಳಲ್ಲಿ ಕುಡಿದ ನಶೆಯಲ್ಲಿ ಮೈಮರೆತಿರುತ್ತಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿದೆ.

ಹೊಸ ವರ್ಷಕ್ಕೆ ಪ್ರತೀ ಭಾರಿಯೂ ಕೇಂದ್ರ ವಿಭಾಗವೇ ಯಾವುದೇ ಘಟನೆಗಳಾಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುತ್ತದೆ. ಈ ಬಾರಿಯೂ ಈಗಿನಿಂದಲೇ ಸೆಂಟ್ರಲ್ ಪೊಲೀಸರು ಹೈ ಅಲರ್ಟ್‌ ಆಗಿದ್ದಾರೆ. ಅದರಲ್ಲೂ ಎಂಜಿ ರೋಡ್‌, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ನಲ್ಲಿ ಅದ್ಧೂರಿಯಾಗಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಲಾಗುತ್ತದೆ.

ಇನ್ನು ಪೊಲೀಸರು ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದೆನ್ನುವ ಉದ್ದೇಶದಿಂದ ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲು ಕೇಂದ್ರ ವಿಭಾಗ ಡಿಸಿಪಿ ಶೇಖರ್ ತಯಾರಿ ಆರಂಭಿಸಿದ್ದಾರೆ. ಇದೇ ಮೊದಲ ಭಾರಿ ಪಬ್ ಬಾರ್ ರೆಸ್ಟೋರೆಂಟ್ ಪಾರ್ಟ್‌ಗಳ ಸ್ಥಳದಲ್ಲಿ ನಿಯೋಜನೆಗೊಳ್ಳುವ ಬೌನ್ಸರ್‌ಗಳ ಜೊತೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಮಹಿಳೆಯರು ಹಾಗೂ ಯುವತಿಯರ ಜೊತೆ ಹೇಗೆ ವರ್ತನೆ ಮಾಡಬೇಕು, ಪಾರ್ಟಿಯಲ್ಲಿ ಭಾಗಿಯಾಗುವವರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಕುಡಿದ ಮತ್ತಲ್ಲಿ ಯಾರಾದರೂ ಅಸಭ್ಯ ವರ್ತನೆ ತೋರಿದರೆ, ಅಂತವರನ್ನು ಪೊಲೀಸರಿಗೆ ಹೇಗೆ ಒಪ್ಪಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ನ್ಯೂಸ್‌ 18 ಕನ್ನಡ ವರದಿ ಮಾಡಿದೆ.

ಇನ್ನು ಪೊಲೀಸರ ಜೊತೆ ಸಂಪರ್ಕ ಹಾಗೂ ಕಾರ್ಯ ವಿಧಾನದ ಬಗ್‌ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಅಲ್ಲದೆ, ಕೇಂದ್ರ ವಿಭಾಗದ ಪಬ್, ಬಾರ್ & ರೆಸ್ಟೋರೆಂಟ್ ಮಾಲೀಕರು, ಪಾರ್ಟಿ ಹಾಲ್ ಹಾಗೂ ಖಾಸಗಿ ಹೋಟೆಲ್‌ಗಳ ಮ್ಯಾನೇಜರ್‌ಗಳ ಜೊತೆ ಸಭೆ ನಡೆಸಿದ್ದಾರೆ. ಹೊಸ ವರ್ಷಕ್ಕೆ ಮಾರ್ಗ ಸೂಚಿಗಳ ಪಾಲನೆ ಜೊತೆಗೆ ಹೇಗೆ ಪಾರ್ಟಿ ಆಯೋಜನೆ ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಡಿಸಿಪಿ ಶೇಖರ್ ಅವರು, ಮಾಲೀಕರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+