Bengaluru Property: ಬೆಂಗಳೂರಿನ 3,000 ಸಾವಿರ ಆಸ್ತಿದಾರರಿಗೆ ಹೊಸ ಶಾಕ್, ಏನದು ?
Bengaluru Property: ಬೆಂಗಳೂರಿನ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇನ್ನೊಮ್ಮೆ ಶಾಕ್ ಕೊಟ್ಟಿದೆ. ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಲವು ಸುಧಾರಣೆ ಕ್ರಮಗಳನ್ನು ಅನುಸರಿಸುತ್ತಿದೆ. ಆದರೆ, ಕೆಲವು ಆಸ್ತಿದಾರರು ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿ ಮಾಡದೆ ಮೋಸ ಮಾಡುತ್ತಿದ್ದಾರೆ. ಇಲ್ಲವೇ ಸುಳ್ಳು ನೆಪಗಳನ್ನು ಹೇಳುತ್ತಿದ್ದಾರೆ. ಈ ರೀತಿ ಮಾಡುತ್ತಿರುವವರಿಗೆ ಈಗಾಗಲೇ ಮೊದಲ ಹಂತದಲ್ಲಿ ಬಿಸಿ ಮುಟ್ಟಿಸಲಾಗಿದ್ದು. ಇದೀಗ ಎರಡನೇ ಹಂತದ ಕಾರ್ಯಾಚರಣೆಯನ್ನು ಬಿಬಿಎಂಪಿ ಶುರು ಮಾಡಿದೆ.
ಹೌದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 2023 -2024ನೇ ಸಾಲಿನಿಂದ ಆರ್ಥಿಕ ವಹಿವಾಟಿನಲ್ಲಿ ಹಲವು ಸುಧಾರಣೆ ತರುತ್ತಿದೆ. ಅದು ಮುಖ್ಯವಾಗಿ ಆದಾಯ ಸಂಗ್ರಹದ ವಿಚಾರದಲ್ಲಿ ತೆರಿಗೆ ಸಂಗ್ರಹದಲ್ಲಿ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸುತ್ತಿದೆ. ಇದೀಗ ಬಿಬಿಎಂಪಿಯು ಆಸ್ತಿ ಮುಟ್ಟುಗೋಲು ಹಾಗೂ ಆಸ್ತಿ ಹರಾಜಿನಂತಹ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಬಿಬಿಎಂಪಿಯು ಈಗಾಗಲೇ ಹೇಳಿದೆ. ಇದೀಗ ಆಸ್ತಿ ಹರಾಜಿನ ಎರಡನೇ ಹಂತವನ್ನು ಬಿಬಿಎಂಪಿ ಶುರು ಮಾಡಿದೆ.

ಮೊದಲ ಹಂತದಲ್ಲಿ 608 ಆಸ್ತಿಗಳನ್ನು ಹರಾಜು ಮಾಡುವುದಾಗಿ ಬಿಬಿಎಂಪಿಯು ಹೇಳಿತ್ತು. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ದೀರ್ಘ ಅವಧಿಯಿಂದ ಆಸ್ತಿ ಬಾಕಿ ಉಳಿಸಿಕೊಂಡಿರುವ ಆಸ್ತಿಗಳನ್ನು ಪಟ್ಟಿ ಮಾಡಲಾಗಿತ್ತು. ಈ ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದರೆ. ಆಸ್ತಿಯನ್ನೇ ಹರಾಜು ಹಾಕುವುದಾಗಿ ಹೇಳಲಾಗಿತ್ತು. ಈ ರೀತಿ ಹೇಳಿದ ಮೇಲೆ 555 ಜನ ಆಸ್ತಿ ತೆರಿಗೆ ಪಾವತಿಸಿದ್ದಾರೆ. ಇದರಿಂದ ಬರೋಬ್ಬರಿ 18 ಕೋಟಿ ರೂಪಾಯಿ ಸಂಗ್ರಹವಾಗಿದೆ. ಆದರೆ, ಬಿಬಿಎಂಪಿಯು ಇದನ್ನು ಇಲ್ಲಿಗೆ ನಿಲ್ಲಿಸದೆ ಇನ್ನಷ್ಟು ಮುಂದುವರಿಯಲು ನಿರ್ಧರಿಸಿದೆ.
3,000 ಸಾವಿರ ಆಸ್ತಿದಾರರಿಗೆ ನಡುಕ!: ಇನ್ನು ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಸ ಕ್ರಮವು ಬೆಂಗಳೂರಿನ 3,000 ಸಾವಿರ ಆಸ್ತಿದಾರರಲ್ಲಿ ನಡುಕವನ್ನುಂಟು ಮಾಡಿದೆ. ಹೌದು ಬೆಂಗಳೂರಲ್ಲಿ 3,000 ಸಾವಿರ ಆಸ್ತಿದಾರರು ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು.ಇವರಿಗೂ ಇದೀಗ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಬಿಬಿಎಂಪಿಯು ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 3,000 ಸಾವಿರ ಆಸ್ತಿಗಳನ್ನೂ ಹರಾಜು ಹಾಕುವುದಕ್ಕೆ ಮುಂದಾಗಿದೆ.! ಹೌದು ಈ ಸಂಬಂಧ ಸಿದ್ಧತೆ ಶುರು ಮಾಡಿ
ಕೊಳ್ಳುತ್ತಿರುವುದಾಗಿ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.
ಹಲವು ರೀತಿಯ ದಂಡದ ಎಚ್ಚರಿಕೆ: ಇನ್ನು ಈ ರೀತಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಕಾಲ ಮಿತಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದರೆ. ಹಲವು ಮಾದರಿಯ ದಂಡವನ್ನು ವಿಧಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಸಹ ಕೊಡಲಾಗಿದೆ.












Click it and Unblock the Notifications