ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌!

Recommended Video

      ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌! | Oneindia Kannada

      ಬೆಂಗಳೂರು, ಏಪ್ರಿಲ್ 05: ಉಪನಗರ ರೈಲು ಕುರಿತು ಎಲ್ಲಾ ಮಾಹಿತಿ ವಿವರಗಳನ್ನು ಹೊಂದಿರುವ ಅಪ್ಲಿಕೇಷನ್ ಒಂದನ್ನು ಪ್ರಯಾಣಿಕರೆಲ್ಲ ಸೇರಿ ಅಭಿವೃದ್ಧಿ ಪಡಿಸಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

      ಗುರುವಾರ (ಏ.5) ಸಂಜೆ ಫೇಸ್‌ಬುಕ್ ಲೈವ್ ಮೂಲಕ ಅಪ್ಲಿಕೇಷನ್ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಮೊಬಿಜಿನಿ ಕಂಪನಿ ತಾಂತ್ರಿಕ ನೆರವನ್ನು ಉಚಿತವಾಗಿ ಒದಗಿಸಿದೆ.

      ಈ ಅಪ್ಲಿಕೇಷನ್ ನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಹಾಗೂ ಐಫೋನ್ ಗಳಲ್ಲಿ ಇದನ್ನು ಬಳಸಬಹುದು. ರೈಲುಗಳ ಹೆಸರು, ಸಂಖ್ಯೆ, ರೈಲು ನಿಲ್ದಾಣ ಹಾಗೂ ಪ್ರದೇಶಗಳ ಆಧಾರದಲ್ಲಿ ಮಾಹಿತಿ ಒದಗಿಸಲಾಗುತ್ತದೆ.

      New mobile app for suburban train details

      ರೈಲುಗಳು ಯಾವ ಸ್ಥಳದಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿಯನ್ನೂ ಇದರಲ್ಲಿ ಪಡೆಯಬಹುದು. ಇದನ್ನು ಡೌನ್‌ಲೋಡ್‌ ಮಾಡಿ ಬಳಸುವ ಪ್ರಯಾಣಿಕರೇ ಈ ಕುರಿತ ಮಾಹಿತಿ ಹಂಚಿಕೊಳ್ಳಲು ನೆರವಾಗುತ್ತಾರೆ. ಇದರಲ್ಲಿ ವರ್ಚ್ಯುವಲ್‌ ಚಾಟ್‌ರೂಮ್‌ಸೌಕರ್ಯವನ್ನೂ ಒದಗಿಸಲಾಗಿದೆ.

      ಯಾರಾದರೂ ರೈಲು ಪ್ರಯಾಣಕ್ಕೆ ಸಂಬಂಧಿಸಿ ಹೆಚ್ಚುವರಿ ಮಾಹಿತಿ ಬಯಸಿದರೆ ಆ್ಯಪ್‌ ಮೂಲಕ ಕೋರಿಕೆ ಸಲ್ಲಿಸಬಹುದು. ಅದನ್ನು ಬಳಸುತ್ತಿರುವ ಅನ್ಯ ಪ್ರಯಾಣಿಕರು ಅವರಲ್ಲಿರುವ ಮಾಹಿತಿ ಹಂಚಿಕೊಳ್ಳಲು ಇದು ನೆರವಾಗಲಿದೆ ಎಂದು ಮೊಬಿಜಿನಿ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ರಾಕೇಶ್ ಚಿನಗುಂಡಿ ತಿಳಿಸಿದ್ದಾರೆ.

      ಅಪ್ಲಿಕೇಷನ್ ನಲ್ಲಿ ಇರುವ ಮಾಹಿತಿ:ನಗರಕ್ಕೆ ಬಂದು ಹೋಗುವ ರೈಲುಗಳ ವೇಳಾಪಟ್ಟಿ ಲಭ್ಯವಿರುತ್ತದೆ, ನಗರದಿಂದ 100 ಕಿ.ಮೀ ವ್ಯಾಪ್ತಿಯ ರೈಲು ನಿಲ್ದಾಣಗಳ ಮಾಹಿತಿ ಇದರಲ್ಲಿದೆ,ಸಮೀಪದ ರೈಲು ನಿಲ್ದಾಣ ಎಲ್ಲಿದೆ ಎಂಬುದನ್ನು ತಿಳಿಸುತ್ತದೆ. ಸಮೀಪದ ನಿಲ್ದಾಣದಲ್ಲಿ ಯಾವ ರೈಲು ಎಷ್ಟು ಹೊತ್ತಿಗೆ ಹೊರಡಲಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+