ಬೆಂಗಳೂರು-ಮೈಸೂರು ನಡುವೆ ಹೊಸ ರೈಲು, ವೇಳಾಪಟ್ಟಿ

ಬೆಂಗಳೂರು, ಡಿಸೆಂಬರ್ 15 : ನೈಋತ್ಯ ರೈಲ್ವೆ ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 16ರಿಂದ ಮೈಸೂರು ಮತ್ತು ಬೆಂಗಳೂರಿನ ಯಲಹಂಕ ನಡುವೆ ಹೊಸ ಮೆಮು ರೈಲು ಸೇವೆ ಆರಂಭವಾಗಲಿದೆ.

ಕ್ರಿಸ್ ಮಸ್, ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ನೂತನ ರೈಲನ್ನು ನೈಋತ್ಯ ರೈಲ್ವೆ ಪರಿಚಯಿಸಲಿದೆ. ಮೈಸೂರು-ಯಲಹಂಕ ರೈಲಿನಿಂದಾಗಿ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ನೂತನ ಮೆಮು ರೈಲು ಮೈಸೂರು-ಬೆಂಗಳೂರು ನಡುವೆ ಡಿಸೆಂಬರ್ 16ರಿಂದ ಸಂಚಾರ ನಡೆಸಲಿದೆ. ರಾತ್ರಿಯ ವೇಳೆ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಈ ರೈಲು ನೆರವಾಗಲಿದೆ.

New Memu Train Between Mysuru-Yelahanka

ವೇಳಾಪಟ್ಟಿ: ಪ್ರತಿದಿನ ರಾತ್ರಿ 10.20ಕ್ಕೆ ಮೈಸೂರಿನಿಂದ ಹೊರಡುವ ರೈಲು 1.30ಕ್ಕೆ ಬೆಂಗಳೂರಿನ ಯಲಹಂಕ ತಲುಪಲಿದೆ. ಮುಂಜಾನೆ 2.30ಕ್ಕೆ ಯಲಹಂಕದಿಂದ ಹೊರಡುವ ರೈಲು ಮುಂಜಾನೆ 5.35ಕ್ಕೆ ಮೈಸೂರು ತಲುಪಲಿದೆ.

ನಿಲ್ದಾಣಗಳು: ಮೈಸೂರು-ಯಲಹಂಕ ರೈಲು ಮಂಡ್ಯ, ಕೆಂಗೇರಿ, ಬೆಂಗಳೂರು, ಯಶವಂತಪುರದಲ್ಲಿ ಮಾತ್ರ ನಿಲುಗಡೆಗೊಳ್ಳಲಿದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ಜನರು ರಾತ್ರಿ 9ಕ್ಕೆ ಹೊರಡುವ ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್, 11.55ಕ್ಕೆ ಹೊರಡುವ ಪ್ಯಾಸೆಂಜರ್ ರೈಲಿನಲ್ಲಿ ಮಾತ್ರ ಪ್ರಯಾಣಿಸಬೇಕಿತ್ತು.

ಹೊಸ ರೈಲು 10.20ಕ್ಕೆ ಮೈಸೂರಿನಿಂದ ಹೊರಲಿದ್ದು, ಇದರಿಂದಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವವರಿಗೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಜನರಿಗೂ ಸಹಕಾರಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+