New Khata: ಹೊಸ ಖಾತಾ & ಇ - ಖಾತಾ ಅರ್ಜಿಗೆ 7 ದಿನ ಗಡುವು: ಜಿಬಿಎ ಆದೇಶ
New Khata: ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇ ಖಾತಾ, ಬಿ ಖಾತಾ ಹಾಗೂ ಹೊಸ ಖಾತಾಗಳಿಗೆ ಸಂಬಂಧಿಸಿದಂತೆ ಹೊಸದೊಂದು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಆಸ್ತಿದಾರರು ತಮ್ಮ ಸ್ವತ್ತುಗಳಿಗೆ ಅಂತಿಮ ಇ - ಖಾತಾ ಸಲ್ಲಿಸುವುದಕ್ಕೆ ಗಡುವು ನಿಗದಿ ಮಾಡಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರವು ಈಗಾಗಲೇ ಬಿ - ಖಾತಾ ಹಾಗೂ ಇ - ಖಾತಾಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ನೀಡಿದೆ. ಇನ್ನು ಬಿ - ಖಾತಾ ಪಡೆದುಕೊಳ್ಳುವುದಕ್ಕೆ ಇ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಇದೀಗ ಇ - ಖಾತಾಗೆ ಸಲ್ಲಿಸುವ ಅರ್ಜಿಗಳನ್ನು 7 ದಿನಗಳೊಳಗೆ ಮತ್ತು ಹೊಸ ಖಾತಾಗೆ ಸಲ್ಲಿಸುವ ಅರ್ಜಿಗಳನ್ನು 60 ದಿನಗಳಲ್ಲಿ ವಿಲೇವಾರಿ ಮಾಡಬೇಕೆಂದು ಕಂದಾಯ ವಿಭಾಗದ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಆಡಳಿತವು ಆದೇಶ ಮಾಡಿದೆ.

ಖಾತಾ ಬದಲಾವಣೆ, ತಿದ್ದುಪಡಿ ಅಥವಾ ವಿಚಾರಣೆ ಅಗತ್ಯವಿರುವ ವಿವಾದದ ಅಂತಿಮ ಇ-ಖಾತಾ ಅರ್ಜಿಗಳನ್ನು ಸಹ ಒಂದು ತಿಂಗಳ ಅವಧಿಯ ಒಳಗಾಗಿ ವಿಲೇವಾರಿ ಮಾಡಲಾಗುತ್ತದೆ. ಆಸ್ತಿ ಮಾಲೀಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅಂತಿಮ ಇ-ಖಾತಾ ಹಾಗೂ ಹೊಸ ಖಾತಾಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದಕ್ಕಾಗಿ ಯಾವುದೇ ಪ್ರಾಧಿಕಾರದ ಪಾಲಿಕೆಗಳ ಯಾವುದೇ ಅಧಿಕಾರಿಗಳನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ ಎಂದೂ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.
ಇ - ಖಾತಾ ಪಡೆದುಕೊಳ್ಳುವುದಕ್ಕೆ ಎದುರಾಗಿದ್ದ ಸಮಸ್ಯೆ ಹಾಗೂ ವಿಳಂಬವನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರವು ಈ ರೀತಿಯ ಮಹತ್ವವಾದ ಆದೇಶವನ್ನು ಮಾಡಿದೆ. ಅಲ್ಲದೇ ಆಸ್ತಿದಾರರು ಹೊಸ ಖಾತಾ ಹಾಗೂ ಇ ಖಾತಾಗಾಗಿ ಕಚೇರಿಗಳಿಗೆ ಅಲೆದಾಡುವುದು ಸಹ ಇದರಿಂದ ತಪ್ಪಲಿದೆ. ಆಸ್ತಿ ಮಾಲೀಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಫೇಸ್‌ಲೆಸ್, ಸಂಪರ್ಕ ರಹಿತ ಮತ್ತು ಆನ್‌ಲೈನ್ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಜಿಬಿ ಹೇಳಿದೆ.
ಹಳೇ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳು ಜನರಿಂದ ಹಣ ಪಡೆದು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದರು. ಇದರಿಂದ ಭ್ರಷ್ಟಾಚಾರ ಜಾಸ್ತಿಯಾಗಿತ್ತು ಎಂದು ಪ್ರಾಧಿಕಾರವೇ ಹೇಳಿದೆ.
ನಾಗರಿಕರು ಅಂತಿಮ ಇ-ಖಾತಾ ಅಥವಾ ಹೊಸ ಖಾತಾಗೆ ಅರ್ಜಿ ಸಲ್ಲಿಸಿದ ನಂತರ ಅತ್ಯಂತ ಬಳಕೆದಾರ ಸ್ನೇಹಿ ಆನ್‌ಲೈನ್ ಇ-ಖಾತಾ ಸ್ಥಿತಿ ಮತ್ತು ಹೊಸ ಖಾತಾ ಸ್ಥಿತಿಯನ್ನು ಪರಿಶೀಲಿಸುವ ಸರಳ ವಿಧಾನ
1. ಆನ್ ಲೈನ್ ಲಿಂಕ್:
➤ e-Khata ಸ್ಥಿತಿ:
https://bbmpeaasthi.karnataka.gov.in/citizen_core/Final_eKhatha_Status_based_on_ePID
➤ New Khata ಸ್ಥಿತಿ:
https://bbmpeaasthi.karnataka.gov.in/citizen_core/NewEkhataStatus
2. ನಿಮ್ಮ ePID ನಮೂದಿಸಿ ಮತ್ತು ಸ್ಥಿತಿಯನ್ನು ಪರಿಶೀಲಿಸಿ.
3. ಟೇಬಲ್‌ನಲ್ಲಿ ಸ್ವೀಕೃತಿ ಮತ್ತು ವಿಲೇವಾರಿ ವಿವರಗಳು ಪ್ರತಿ ಹಂತದಲ್ಲೂ ತೋರಿಸುತ್ತದೆ. ಅರ್ಜಿ ಬಾಕಿಯಾಗಿದ್ದರೆ, ಅದು ಯಾವ ಹಂತದಲ್ಲಿದೆ ಎಂಬುದನ್ನೂ ತೋರಿಸಲಾಗುತ್ತದೆ.
4. ಇ-ಖಾತ ಸಹಾಯವಾಣಿ ಹೊರತುಪಡಿಸಿ ಯಾರನ್ನೂ ಭೇಟಿ ಮಾಡಬೇಡಿ ಅಥವಾ ಮಾತನಾಡಬೇಡಿ
📞 e-Khata Helpline: 94806 83695












Click it and Unblock the Notifications