ಜೆಸಿ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಗೆ ಹೊಸ ಡೆಡ್‌ಲೈನ್!

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಜೆಸಿ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಭಾಗದಲ್ಲಿ ವೈಟ್‌ಟಾಪಿಂಗ್ ಕಾಮಗಾರಿಯಿಂದ ಜನ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿ ಬಂದಿತ್ತು.

ಜೆಸಿ ರಸ್ತೆಯಲ್ಲಿರುವ ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ಸ್ಥಳಕ್ಕೆ ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಜೆಸಿ ರಸ್ತೆಯ ಮಿನರ್ವ ವೃತ್ತದಿಂದ ಟೌನ್ ಹಾಲ್ ವರೆಗೆ 1 ಕಿ.ಮೀ ಉದ್ದದ ರೆಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ರಸ್ತೆಯ ಅರ್ಧ ಭಾಗದಲ್ಲಿ ಕಾಮಗಾರಿ ಪ್ರಾರಂಭಿಸಿ ಉಳಿದರ್ಧ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುವುದನ್ನು ಗಮನಿಸಿ, ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿದ್ದಾರೆ.

New Fresh Deadline Set for Bengaluru JC Road White Topping Work

15 ಮೀ. ರಸ್ತೆಯ ಅಗಲ ಹಾಗೂ ಕನಿಷ್ಟ 2.50 ಮೀ. ಅಗಲದ ಪಾದಚಾರಿ ಮಾರ್ಗ: ಕಾಮಗಾರಿ ನಡೆಸುವ ವೇಳೆ ಬಫರ್ ಜೋನ್ ಒಳಗೊಂಡಂತೆ ಎಲ್ಲಾ ಕಡೆಗಳಲ್ಲಿ 15 ಮೀ. ರಸ್ತೆಯ ಅಗಲವನ್ನು ಹಾಗೂ 2.50 ಮೀ. ಗಿಂತ ಕಡಿಮೆ ಇರದಂತೆ ಪಾದಚಾರಿ ಮಾರ್ಗದ ಅಗಲ ಇರುವಂತೆ ರಸ್ತೆ ನಿರ್ಮಿಸಲು ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದಾರೆ.

ರಸ್ತೆಯ ಎರಡೂ ಬದಿಯಲ್ಲಿ ಮಳೆ‌‌ ನೀರು ಕೊಳವೆ ನಿರ್ಮಾಣ: ರಸ್ತೆಯ ಮೇಲೆ ನೀರು ನಿಂತು ಸಮಸ್ಯೆಗಳಾಗದಂತಿರಲು ರಸ್ತೆಯ ಎರಡು ಬದಿಯಲ್ಲಿ ಮಳೆ ನೀರು ಗಾಲುವೆಗಾಗಿ 1000 ಮೀ. ವ್ಯಾಸದ ಆರ್.ಸಿ.ಸಿ ಎನ್.ಪಿ-3 ಕೊಳವೆ ಮಾರ್ಗ ಹಾಗೂ ಹೆಚ್.ಡಿ.ಪಿ.ಇ ಡಕ್ಟ್ ವಿದ್ಯುತ್ ಕೇಬಲ್‌ಗಾಗಿ 200 ಮೀ. ವ್ಯಾಸದ 3 ಸಂಖ್ಯೆ ಹಾಗೂ ಓ.ಎಫ್.ಸಿ ಕೇಬಲ್‌ಗಾಗಿ 100 ಮೀ. ವ್ಯಾಸದ 2 ಸಂಖ್ಯೆ ಅಳವಡಿಸಲಾಗಿದೆ. ಇನ್ನೂ ಜಲಮಂಡಳಿಯ ವತಿಯಿಂದ ರಸ್ತೆಯ ಎರಡೂ ಬದಿಗಳಲ್ಲಿ ಒಳಚರಂಡಿ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಕೊಳವೆ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ.

ಅಕ್ಟೋಬರ್ 31 ರೊಳಗಾಗಿ ಕಾಮಗಾರಿ ಪೂರ್ಣ: ಜೆಸಿ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಸೆಪ್ಟೆಬಂರ್ 2 ರಂದು ಬಿ-ಸ್ಮೈಲ್ ಗೆ ಹಸ್ತಾಂತರಿಸಲಾಯಿತು. ಆ ಬಳಿಕ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕಾಮಗಾರಿಗೆ ವೇಗ ನೀಡಲಾಗಿದೆ. ಒಂದು ಭಾಗದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಸೆಪ್ಟೆಂಬರ್ 30 ರೊಳಗಾಗಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಉಳಿದರ್ಧ ಭಾಗವನ್ನು ಅಕ್ಟೋಬರ್ 31 ರೊಳಗಾಗಿ ಪೂರ್ಣಗೊಳಿಸಲಾಗುವುದೆಂದು ಬಿಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಡಾ. ಬಿ.ಎಸ್. ಪ್ರಹ್ಲಾದ್ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+