ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಹೆಚ್ಚಾಯ್ತು ಹೊಸ ಕಿರಿಕಿರಿ: ಆಸ್ತಿ ಖರೀದಿ ಪ್ರಕ್ರಿಯೆ ಜೋರು!

ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಸಮಸ್ಯೆ ಹೆಚ್ಚಾಗುತ್ತಿದ್ದು. ವಿವಿಧ ಬೆಲೆ ಏರಿಕೆಗಳ ನಡುವೆ ಇದೀಗ ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಮನೆಗಳ ಬಾಡಿಗೆ ಬೆಲೆಯೂ ಹೆಚ್ಚಳವಾಗುತ್ತಿದೆ. ಇದರಿಂದ ಬಾಡಿಗೆದಾರರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಕಸ ಹಾಗೂ ಪಾರ್ಕಿಂಗ್ ಟ್ಯಾಕ್ಸ್‌ ವಿಧಿಸುತ್ತಿದೆ. ಇದರೊಂದಿಗೆ ಎಲ್ಲಾ ಸೇವೆಗಳ ಬೆಲೆಯೂ ಒಂದು ಸುತ್ತು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ. ಇದರ ನಡುವೆ ಎಲ್ಲಾ ಹೊರೆಯೂ ಬೆಂಗಳೂರಿನ ಆಸ್ತಿದಾರರು ಹಾಗೂ ಆಸ್ತಿ ಮಾಲೀಕರು ಬೆಂಗಳೂರಿನ ಬಾಡಿಗೆದಾರರ ಮೇಲೆ ಹೊರೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಹೆಚ್ಚಳ ಹಾಗೂ ಮನೆಗಳ ಪೇಂಟಿಂಗ್ ಶುಲ್ಕವನ್ನು ವಿಧಿಸಲಾಗುತ್ತಿದೆ. ಹೀಗಾಗಿ ಬೆಂಗಳೂರಿನ ಕೆಲವು ಬಾಡಿಗೆದಾರು ಬೇರೆ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ.

ಹೌದು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಬಾಡಿಗೆಗೆ ಮನೆಗಳು ಸಿಗುವುದು ಭಾರೀ ದುರಿಯಾಗಿ ಬದಲಾಗಿದೆ. ಮನೆ ಬಾಡಿಗೆ ಹಾಗೂ ನಿರ್ವಹಣೆ ಶುಲ್ಕ ಭಾರೀ ಹೆಚ್ಚಳವಾಗಿದೆ. ಕೆಲವು ಮನೆ ಮಾಲೀಕರು ಮನಸೋಇಚ್ಛೆ ಶುಲ್ಕವನ್ನು ವಿಧಿಸುವುದಕ್ಕೆ ಪ್ರಾರಂಭಿಸುತ್ತಿದ್ದಾರೆ. ಇನ್ನು ಸಹಜವಾಗಿಯೇ ಬೆಂಗಳೂರಿನಲ್ಲಿ ಕೋವಿಡ್‌ ನಂತರದಲ್ಲಿ ಆಸ್ತಿ ಬೆಲೆ ದುಬಾರಿಯಾಗಿದೆ. ರಿಯಲ್‌ ಎಸ್ಟೇಟ್‌ನ ಬೆಲೆಯೂ ಸಹ ವಿಪರೀತ ಎನ್ನುವಂತೆ ಹೆಚ್ಚಳವಾಗಿದೆ. ಒಂದು ಬಿಎಚ್‌ಕೆ ಹಾಗೂ ಎರಡು ಬಿಎಚ್‌ಕೆ ಬೆಲೆಯು ಬೆಂಗಳೂರಿನಲ್ಲಿ ಮಧ್ಯಮವರ್ಗದವರ ಮಾಸಿಕ ವೇತನದಷ್ಟಿದೆ.

New annoyance for tenants in Bengaluru Property purchase process in full swing

ಮನೆ ಬಾಡಿಗೆ ಕೊಡಬೇಕಾದರೆ ಆರು ತಿಂಗಳಿನಿಂದ ಒಂದು ವರ್ಷದ ವರೆಗೆ ಅಡ್ವಾನ್ಸ್‌ ಕೊಡಬೇಕು. ಮನೆ ಬಿಟ್ಟು ಹೋಗುವಾಗ ಪೈಂಟ್ ಮಾಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಹಾಗೂ ವಿಚಿತ್ರ ಷರತ್ತುಗಳನ್ನು ಮನೆ ಮಾಲೀಕರು ವಿಧಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿರುವ ಬಾಡಿಗೆದಾರರು ಮನೆಗಳನ್ನು ಭೋಗ್ಯಕ್ಕೆ ಹಾಗೂ ಜಾಗ ಖರೀದಿ ಮಾಡುವಂತಹ ದೀರ್ಘಕಾಲದ ಪ್ಲ್ಯಾನ್‌ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೌದು ಬೆಂಗಳೂರಿನಲ್ಲಿ ಅಡ್ವಾನ್ಸ್‌ ಹೆಚ್ಚು ಕೊಡಬೇಕು ಅಂತ ಹೇಳುವ ಆಸ್ತಿ ಮಾಲೀಕರ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ ಅಡ್ವಾನ್ಸ್‌ ಕೊಡುವಾಗ ಕೆಲವರು ಒಳಚರಂಡಿ ವ್ಯವಸ್ಥೆಯ ಶುಲ್ಕವನ್ನೂ ಕಡಿತ ಮಾಡುವುದು ನಡೆದಿದೆ. ವಿದ್ಯುತ್‌ ವಾರ್ಷಿಕ ಶುಲ್ಕವನ್ನೂ ಮನೆಯ ಬಾಡಿಗೆದಾರರಿಂದಲೇ ವಸೂಲಿ ಮಾಡಲಾಗುತ್ತಿದೆ.

ಬೆಂಗಳೂರು ಕೇಂದ್ರ ಭಾಗ ಬೇಡ: ಇನ್ನು ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮನೆ ಬಾಡಿಗೆ ಹೆಚ್ಚಳ ಹಾಗೂ ಮನೆ ಮಾಲೀಕರ ಕಿರಿಕಿರಿಯಿಂದಾಗಿ ಬೆಂಗಳೂರಿನ ಬಾಡಿಗೆದಾರರು ಬೆಂಗಳೂರಿನ ನಗರ ಕೇಂದ್ರ ಭಾಗದಿಂದ ಸ್ವಲ್ಪ ಹೊರ ವಲಯದಲ್ಲಿ ಮನೆಗಳನ್ನು ಬಾಡಿಗೆಗೆ ನೋಡುತ್ತಿದ್ದಾರೆ. ಅಲ್ಲದೇ ಮೆಟ್ರೋ ಸಮೀಪದಲ್ಲಿರುವ ಮನೆಗಳ ಬಾಡಿಗೆ ದರವೂ ಕಳೆದ ಎರಡು ಮೂರು ವರ್ಷದಲ್ಲಿ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಅಭಿವೃದ್ಧಿ ಆಗಿರುವ ಪ್ರದೇಶಗಳನ್ನು ಬಿಟ್ಟು ಈಗಷ್ಟೇ ಅಭಿವೃದ್ಧಿ ಪ್ರದೇಶಗಳಲ್ಲಿ ಮನೆ ಹುಡುಕುತ್ತಿದ್ದಾರೆ. ಮುಂದುವರಿದು ಎಲ್ಲಿ ಕಡಿಮೆ ಬೆಲೆಗೆ ಜಾಗ ಸಿಗಲಿದೆ ಅಥವಾ ಭೋಗ್ಯಕ್ಕೆ ಯೋಗ್ಯವಾದ ಮನೆಗಳನ್ನೂ ಬಾಡಿಗೆದಾರರು ನೋಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮನೆ ಮಾಲೀಕರ ಕಿರಿಕಿರಿ ಒಂದು ಕಡೆಯಾದರೆ ಮತ್ತೊಂದು ಕಡೆ ಆರ್ಥಿಕ ಪರಿಸ್ಥಿತಿಯೂ ಕಾರಣವಾಗಿದೆ.

ಮನೆ ಖರೀದಿ ಚಿಂತನೆ: ಇನ್ನು ಸ್ವಲ್ಪ ಸ್ಥಿತಿವಂತರು ಮನೆ ಮಾಲೀಕರು ಹಾಗೂ ಬಾಡಿಗೆ ಮನೆಗಳ ಸಹವಾಸವೇ ಬೇಡ ನಾವೇ ಖುದ್ದಾಗಿ ಮನೆಗಳನ್ನು ಖರೀದಿ ಮಾಡೋಣ. ಇಎಂಐನಲ್ಲಿ ಮನೆಯ ಲೋನ್ ಕಟ್ಟಿಕೊಂಡು ಹೋಗೋಣ ಅಂತಲೂ ಚಿಂತಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+