ಬೆಂಗಳೂರು ಏರ್ ಶೋ ಉದ್ಘಾಟಿಸಲು ಬರ್ತಾರೆ ಮೋದಿ

ಬೆಂಗಳೂರು, ಫೆ. 9: ನಗರದ ಅತ್ಯಂತ ಆಕರ್ಷಕ ಕಾರ್ಯಕ್ರಮಗಳಲ್ಲಿ ಒಂದಾದ 'ಬೆಂಗಳೂರು ಏರ್ ಶೋ' ಫೆ. 18ರಿಂದ 22ರ ವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದು ಇನ್ನೊಂದು ಆಕರ್ಷಣೆ.

ಏರ್ ಶೋ ಉದ್ಘಾಟನೆ ಬಳಿಕ ಜೆಟ್ ಫೈಟರ್ ವಿಮಾನದಲ್ಲಿ ಮೋದಿ ಹಾರಾಟ ನಡೆಸುವ ಸಾಧ್ಯತೆಯಿದೆ. ಹೀಗಾದಲ್ಲಿ ಜೆಟ್ ಫೈಟರ್ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. [ಮೋದಿ ಯುದ್ಧ ವಿಮಾನ ಏರಲ್ವಾ?]

airindia

ಪ್ರಧಾನಿ ಕಾರ್ಯಾಲಯ, ರಕ್ಷಣಾ ಇಲಾಖೆ ಅಧಿಕಾರಿಗಳ ನಡುವೆ ಸಮಾಲೋಚನೆ ಮುಂದುವರೆದಿದ್ದು ಇನ್ನೊಂದು ವಾರದಲ್ಲಿ ಮೋದಿ ಅವರ ಯುದ್ಧ ವಿಮಾನ ಹಾರಾಟದ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎನ್ನಲಾಗಿದೆ. [ಏರೋ ಇಂಡಿಯಾದಲ್ಲಿ ಮೇಕ್ ಇನ್ ಇಂಡಿಯಾ]

ಪ್ರಧಾನಿ ಕಚೇರಿ, ರಕ್ಷಣಾ ಇಲಾಖೆ ಅಧಿಕಾರಿಗಳು ಹಾಗೂ ಫ್ರಾನ್ಸ್‌ನ ಜೆಟ್ ಫೈಟರ್ ವಿಮಾನ ನಿರ್ಮಾಣ ಸಂಸ್ಥೆ ಡಸಾಲ್ಟ್ ರಾಫೆಲ್ ನಡುವೆ ಯುದ್ಧ ವಿಮಾನಲ್ಲಿ ಮೋದಿ ಪ್ರಯಾಣದ ಬಗ್ಗೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಡಸಾಲ್ಟ್ ರಾಫೆಲ್ ಕಂಪೆನಿಯಿಂದ ಭಾರತ ಯುದ್ಧ ವಿಮಾನ ಖರೀದಿಯ ಪ್ರಕ್ರಿಯೆ ಆರಂಭಿಸಿದೆ. 82 ಸಾವಿರ ಕೋಟಿ ರು. ಮೊತ್ತದ ಒಪ್ಪಂದವೂ ನಡೆದಿದೆ. [ಫೆ. 18ರಿಂದ ಏರೋ ಇಂಡಿಯಾ]

ಏರ್ ಶೋ ಉದ್ಘಾಟನೆ ಸಮಾರಂಭಕ್ಕೆ ಫ್ರಾನ್ಸ್ ವಿದೇಶಾಂಗ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಆಗಮಿಸುವರು. ಈ ವೇಳೆ ಬೆಂಗಳೂರಿನಲ್ಲೇ ಡೀಲ್ ಫೈನಲ್ ಆಗುವ ಸಾಧ್ಯತೆ ಇದೆ. ಪ್ರತಿಭಾ ಪಾಟೀಲ್, ಅಬ್ದುಲ್ ಕಲಾಂ, ರತನ್ ಟಾಟಾ, ಶಾಹಿದ್ ಕಪೂರ್ ಫೈಟರ್ ಜೆಟ್‍ನಲ್ಲಿ ಈಗಾಗಲೇ ಪ್ರಯಾಣಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+