ಪ್ರಧಾನಿ ಮೋದಿ ಬೆಂಗಳೂರಿನ ಕಾರ್ಯಕ್ರಮಗಳು
ಬೆಂಗಳೂರು, ಫೆ. 18 : ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಭೇಟಿಗಾಗಿ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಯಲಹಂಕ ವಾಯುನೆಲೆಯಲ್ಲಿ 'ಏರೋ ಇಂಡಿಯಾ' ಪ್ರದರ್ಶನ ಉದ್ಘಾಟಿಸಲಿರುವ ಮೋದಿ ನಂತರ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು ಸಂಜೆ ದೆಹಲಿಗೆ ಮರಳಲಿದ್ದಾರೆ.
ನರೇಂದ್ರ ಮೋದಿ ಆಗಮನದ ಹಿನ್ನಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಏರ್ ಶೋ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಅವರು ನಿಮ್ಹಾನ್ಸ್, ಜಿಕೆವಿಕೆ ಹಾಗೂ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಲಿದ್ದು ಸಂಜೆ 4.30ರ ನಂತರ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ. [ಮೋದಿ ಭೇಟಿ ಸಂಚಾರ ಬದಲಾವಣೆ]

ಮೋದಿ ಇಂದಿನ ಕಾರ್ಯಕ್ರಮಗಳು [ಯಲಹಂಕಕ್ಕೆ ಹೋಗಲು ವಿಶೇಷ ಬಿಎಂಟಿಸಿ ಬಸ್]
* ಬೆಳಗ್ಗೆ 8.45 ಯಲಹಂಕ ವಾಯುನೆಲೆಗೆ ವಿಶೇಷ ವಿಮಾನದ ಮೂಲಕ ಆಗಮನ
* ಬೆಳಗ್ಗೆ 9 ಗಂಟೆಗೆ ಏರ್ ಶೋ ಉದ್ಘಾಟನೆ
* 12 ಗಂಟೆಯ ತನಕ ಏರ್ ಶೋನಲ್ಲಿ ಭಾಗಿ
* 12.15ಕ್ಕೆ ಜಿಕೆವಿಕೆಗೆ ಭೇಟಿ, ಪ್ರಯೋಗಾಲಯಗಳ ವೀಕ್ಷಣೆ
* ಮಧ್ಯಾಹ್ನ 1.05ಕ್ಕೆ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಗೆ ಭೇಟಿ
* 3.20 ಗಂಟೆಗೆ ನಿಮ್ಹಾನ್ಸ್ ಘಟಿಕೋತ್ಸವದಲ್ಲಿ ಭಾಗಿ
* 4.30 ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್











Click it and Unblock the Notifications