Namo Bharat Rapid Rail: ಬೆಂಗಳೂರಿನಿಂದ ತುಮಕೂರು, ಮೈಸೂರಿಗೆ ವಂದೇ ಮೆಟ್ರೋ ರೈಲು
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರು, ತುಮಕೂರು, ಮೈಸೂರು ನಗರದ ಜನತೆಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಬೆಂಗಳೂರು - ಮೈಸೂರು ಮತ್ತು ಬೆಂಗಳೂರು - ತುಮಕೂರು ನಡುವೆ ನಮೋ ಭಾರತ್ ರ್‍ಯಾಪಿಡ್ ರೈಲ್ (ವಂದೇ ಮೆಟ್ರೋ) ರೈಲುಗಳನ್ನು ಪರಿಚಯಿಸಲಾಗುವುದು ಎಂದು ಅಶ್ವಿನ್ ವೈಷ್ಣ್ ಶನಿವಾರ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.
150-200 ಕಿಮೀ ಅಂತರದಲ್ಲಿರುವ ನಗರಗಳ ನಡುವೆ ಸಂಚರಿಸಲು ಈ ವಂದೇ ಭಾರತ್ ರ್‍ಯಾಪಿಡ್ ರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಎರಡು ಮುಖ್ಯ ನಗರಗಳ ನಡುವೆ ಸಂಪರ್ಕ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.

ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಬೆಂಗಳೂರು ವಿಮಾನ ನಿಲ್ದಾಣದಿಂದ ಯಲಹಂಕದವರೆಗಿನ ರೈಲು ಮಾರ್ಗವನ್ನು ಡಬಲ್ ಮಾಡುವುದಾಗಿ ಘೋಷಣೆ ಮಾಡಿದರು. ಇದರಿಂದ ರೈಲು ಸಂಚಾರ ಮತ್ತಷ್ಟು ಸುಗಮವಾಗಲಿದ್ದು, ದಟ್ಡಣೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ರೈಲು ನಿಲ್ದಾಣವು ವಿಮಾನ ನಿಲ್ದಾಣದ ಆಗಮನ ಮತ್ತು ನಿರ್ಗಮನ ಸ್ಥಳಗಳಿಗೆ ಹತ್ತಿರವಾಗಿರುವ ಕಾರಣ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಶ್ವಿನ್ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕೂಡ ಈ ಸಂದರ್ಭದಲ್ಲಿ ವೀಕ್ಷಿಸಿದರು.
ತುಮಕೂರು, ಮೈಸೂರು ಜನತೆಗೆ ಉಡುಗೊರೆ
ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತುಮಕೂರು, ಮೈಸೂರು ಜನತೆಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ತುಮಕೂರು ಮತ್ತು ಮೈಸೂರಿಗೆ ವಂದೇ ಮೆಟ್ರೋ ರೈಲು ಸೇವೆ ಆರಂಭಿಸಿದರೆ, ಎರಡೂ ನಗರಗಳಿಂದ ಬೆಂಗಳೂರಿಗೆ ಪ್ರತಿದಿನ ಪ್ರಯಾಣಿಸುವವರಿಗೆ ಭಾರಿ ಅನುಕೂಲವಾಗಲಿದೆ. ಈ ರ್‍ಯಾಪಿಡ್ ರೈಲುಗಳು ಸಮಯವನ್ನು ಉಳಿತಾಯ ಮಾಡುವುದರಿಂದ ವಿದ್ಯಾರ್ಥಿಗಳು,












Click it and Unblock the Notifications