Bengaluru Metro: ಯುವತಿ ಖಾಸಗಿ ಅಂಗ ಮುಟ್ಟಿದ ಕಿಡಿಗೇಡಿ, ಮಹಿಳೆಯರಿಗೆ ಸುರಕ್ಷತೆಯ ಅತಂಕ?

ಬೆಂಗಳೂರು, ಜನವರಿ 08: ಸಿಲಿಕಾನ್ ಸಿಟಿ ಬೆಂಗಳೂರು ಮಂದಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುತ್ತಿರುವ ನಮ್ಮ ಮೆಟ್ರೋ (Bengaluru namma metro) ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕ ಅಂಶಗಳಿಂದಲೇ ಸುದ್ದಿಯಾಗುತ್ತಿದೆ. ಮೆಟ್ರೋದಲ್ಲಿ ಇದೀಗ ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಇದೆಲ್ಲ ನೋಡಿದರೆ, ಮಹಿಳೆಯರಿಗೆ ಮೆಟ್ರೋ ರೈಲಿನ ಸಂಚಾರ ಸುರಕ್ಷಿತವೇ ಎಂಬ ಅನುಮಾನ ಸೃಷ್ಟಿಯಾಗಿದೆ.

ಕಳೆದ ಎರಡು ತಿಂಗಳಲ್ಲಿ ಇದು ಮೂರನೇ ಲೈಂಗಿಕ ಕಿರುಕುಳದ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಜನವರಿ 1ರಂದು ಹೊಸ ವರ್ಷದ ದಿನದಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವತಿಗೆ ಲೈಂಗಿಕ ಕಿರಕುಳ ನೀಡಿದ ಘಟನೆ ನಡೆದಿದೆ.

 Namma Metro: Young Girl Face Sexual Harassment by A Man in Mejestric Metro Station on Jan 1st

ಈ ನಿಲ್ದಾಣದಲ್ಲಿ ಹಿಂದಿನಿಂದ ಯುವತಿ ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆ ಯುವತಿ ಆರೋಪಿಸಿದ್ದಾರೆ. ಖಾಸಗಿ ಅಂಗ ಯಾರೋ ಸ್ಪರ್ಶಿಸಿದ್ದು ಗೊತ್ತಾಗುತ್ತಿದ್ದಂತೆ ಆ ಯುವತಿ ಈ ವಿಚಾರವನ್ನು ಕೂಡಲೇ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಎಚ್ಚೆತ್ತು ಯುವತಿ ಲೈಂಗಿಕ ಕಿರುಕುಳ ಕೊಟ್ಟ ಕಿಡಿಗೇಡಿಯನ್ನು ಹಿಡಿದಿದ್ದಾರೆ. ಆಗ ಕಿಡಿಗೇಡಿ ತಾನು ಮಾಡಿದ ತಪ್ಪನ್ನು ಯುವತಿಯ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ನ. 20ರಂದು ಲೈಂಗಿಕ ಕಿರುಕುಳ ಪ್ರಕರಣ

ಈ ಹಿಂದೆ ಇಂತದ್ದೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ನವೆಂಬರ್ 20ರಂದು ಇದೇ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ವಿಚಾರವನ್ನು ಅವರ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

 Namma Metro: Young Girl Face Sexual Harassment by A Man in Mejestric Metro Station on Jan 1st

ಡಿ.7ರಂದು ಯುವತಿಗೆ ಕಿರುಕುಳ ಕೇಸ್ ಬೆಳಕಿಗೆ

ಘಟನೆ ಸಂಬಂಧ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಬೆಂಗಳೂರು ಮೆಟ್ರೋ ದಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸಿ ಎಂದೆಲ್ಲ ನೆಟ್ಟಿಗರು ಆಗ್ರಹಿಸಿದರು. ಇದಾದ ಬಳಿಕ ಡಿಸೆಂಬರ್ 7ರಂದು ರಾಜಾಜಿನಗರ ಮೆಟ್ರೋ ಹತ್ತಿದ್ದ ಯುವತಿಯೊಬ್ಬರಿಗೆ ಲೋಕಿ ಎಂಬ ವ್ಯಕ್ತಿಯು ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ.

ಈ ವಿಚಾರವನ್ನು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದು, ಅವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ಹೀಗೆ ನಡೆದ ಕೆಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಮುಂದಿನ ದಿನಗಳಲ್ಲಾದರೂ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋದಲ್ಲಿ, ಮೆಟ್ರೋ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸಬೇಕು. ಈ ಬಗ್ಗೆ ಖಾತ್ರಿ ಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+