Namma Metro-AI: ಹಳದಿ ಮಾರ್ಗದಲ್ಲಿ 'ಎಐ' ತಂತ್ರಜ್ಞಾನ ಅಳವಡಿಕೆ, ಏಕೆ? ತಿಳಿಯಿರಿ
ಬೆಂಗಳೂರು, ಫೆಬ್ರವರಿ 27: ಬೆಂಗಳೂರಿನ ಆರ್‌ವಿ. ರಸ್ತೆ ಮತ್ತು ಬೊಮ್ಮಸಂದ್ರದವರೆಗೆ ಇರುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಪ್ರಾಯೋಗಿಕ ಸಂಚಾರ ಇನ್ನೇನು ಶುರುವಾಗಲಿದೆ. ಇದೀಗ ಮಹತ್ವದ ಅಪ್ಡೇಟ್ ನೀಡಿರುವ BMRCL ಈ ಮಾರ್ಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮುಂದಾಗಿದೆ.
ಹಳದಿ ಮಾರ್ಗದಲ್ಲಿ ಟ್ರ್ಯಾಕ್‌ಗಳನ್ನು ಮೇಲ್ವಿಚಾರಣೆ ಮಾಡಲು ಬೆಂಗಳೂರು ಮೆಟ್ರೋ ಕೃತಕ ಬುದ್ಧಿಮತ್ತೆಯನ್ನು (AI) ಅಳವಡಿಸಿಕೊಳ್ಳಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಈ ಹಳದಿ ರೇಖೆಯು ಪ್ರಮುಖ ಕಾರಿಡಾರ್ ಆಗಿದೆ. ಏಕೆಂದರೆ ಇದು ಐಟಿ ಕೇಂದ್ರಗಳಾದ ಎಲೆಕ್ಟ್ರಾನಿಕ್ಸ್ ಸಿಟಿ ಸಂಪರ್ಕಿಸುತ್ತದೆ. ಇಲ್ಲಿ ಇನ್ಫೋಸಿಸ್ ಮತ್ತು ಬಯೋಕಾನ್ ಪ್ರಮುಖ ಸಂಸ್ಥೆಗಳು ಇವೆ.

ಈ ಕುರಿತು ವರದಿ ಮಾಡಿರುವ ಮನಿ ಕಂಟ್ರೋಲ್ ವರದಿಯ ಪ್ರಕಾರ, ಆದಾಯ ಸೇವೆಯನ್ನು ಪ್ರಾರಂಭಿಸುವ ಮೊದಲು, ನಾವು ಹಳಿ ಮತ್ತು ಮೂರನೇ ರೈಲು ನಿರ್ವಹಣಾ ಸಿಬ್ಬಂದಿಯೊಂದಿಗೆ ಪ್ರಾಯೋಗಿಕ ಸಂಚಾರ ನಡೆಸಲಿದೆ. ಇದೆಲ್ಲ ಟ್ರ್ಯಾಕ್ ಮಾಡಲು AI (ಆರ್ಟಿಫಿಸಿಯಲ್) ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ಯಾಮರಾ ಆಧಾರಿತ ವ್ಯವಸ್ಥೆ
ಎಲ್ಲಾ ಅಡೆತಡೆಗಳು ಮತ್ತು ಸಂಭಾವ್ಯ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸದ್ಯ ಕಡಿಮೆ ವೇಗದಲ್ಲಿ ರೈಲುಗಳನ್ನು ಕಾರ್ಯ ನಿರ್ವಹಿಸಲಿದ್ದೇವೆ. ಮೇಲ್ವಿಚಾರಣಾ ಪ್ರಕ್ರಿಯೆಯು ಮುಖ್ಯವಾಗಿ ಕ್ಯಾಮರಾ ಆಧಾರಿತ ವ್ಯವಸ್ಥೆಯನ್ನು ಅವಲಂಬಿಸಿದೆ, ಟ್ರ್ಯಾಕ್ ಚಿತ್ರಗಳನ್ನು ಸರ್ವರ್‌ಗೆ ರವಾನಿಸುತ್ತದೆ. ಜತೆಗೆ AI ಸಹ ಎಚ್ಚರಿಕೆ ನೀಡಲಿದೆ ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಬಿ.ಎಲ್ ಯಶವಂತ್ ಚವಾಣ್ ತಿಳಿಸಿದರು.
ರೈಲು ನಿಯಂತ್ರಣ ಮತ್ತು ನಿರ್ವಹಣಾ ವ್ಯವಸ್ಥೆ (TCMS) ಮೂಲಕ ಕಾರ್ಯಾಚರಣೆ ನಿಯಂತ್ರಣ ಕೇಂದ್ರಗಳಿಗೆ (OCC) ಎಚ್ಚರಿಕೆಯನ್ನು ನೇರವಾಗಿ ಕಳುಹಿಸಲಾಗುತ್ತದೆ. ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಟ್ರ್ಯಾಕ್ ಸಮಸ್ಯೆಗಳನ್ನು ಪತ್ತೆ ಹಚ್ಚುವಲ್ಲಿ AI ಅಳವಡಿಕೆ ಮಹತ್ವದ ಪಾತ್ರ ವಹಿಸುತ್ತದೆ.

ಗುಲಾಬಿ, ನೀಲಿ ಮಾರ್ಗದಲ್ಲಿ ಅಳವಡಿಕೆಗೆ ಚಿಂತನೆ
ಇನ್ನೂ ಗುಲಾಬಿ ರೇಖೆಯಲ್ಲಿ (Metro Pink line) ಸಿಬಿಟಿಸಿ ಸಿಗ್ನಲಿಂಗ್ ವ್ಯವಸ್ಥೆಯನ್ನು ಒಳಗೊಂಡಿರುವ ಕಾಳೇನ ಅಗ್ರಹಾರ-ನಾಗವಾರ ಹಾಗೂ ನೀಲಿ ರೇಖೆಗಳು ಸೆಂಟ್ರಲ್ ಸಿಲ್ಕ್ ಬೋರ್ಡ್ ಕೆಆರ್ ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಭವಿಷ್ಯದ ಮಾರ್ಗಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುವುದು ಎಂದರು.
ಸಂವಹನ-ಆಧಾರಿತ ರೈಲು ನಿಯಂತ್ರಣ (CBTC) ಸಿಗ್ನಲಿಂಗ್ ವ್ಯವಸ್ಥೆಯನ್ನು 'ಚಾಲಕರಹಿತ ತಂತ್ರಜ್ಞಾನ' ಎನ್ನಲಾಗಿದೆ.
ಹಳದಿ ರೇಖೆಯಲ್ಲಿ ಚಾಲ ಕರಹಿತ ಕಾರ್ಯಾಚರಣೆಯು ಕಾರ್ಯ ಸಾಧ್ಯವಾಗಿದೆ. ಆದರೂ ತಾತ್ಕಾಲಿಕವಾಗಿ ಚಾಲಕರಿಂದಲೇ ಹಳದಿ ಮಾರ್ಗ ಮೆಟ್ರೋ ರೈಲುಗಳನ್ನು ಓಡಿಸಲು ತೀರ್ಮಾನಿಸಲಾಗಿದೆ.
ಚೀನಾದ ಕಂಪನಿ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂಪನಿ ಜೊತೆಗೆ ನಮ್ಮ ಮೆಟ್ರೋ 2019 ರಲ್ಲಿ 216 ಮೆಟ್ರೋ ರೈಲು ಬೋಗಿಗಳನ್ನು ಪೂರೈಕೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಆರು ಬೋಗಿಗಳ ಒಂದು ಸೆಟ್ ಬೆಂಗಳೂರಿಗೆ ಬಂದಿವೆ. ಮುಂದಿನ ದಿನಗಳಲ್ಲಿ ಅವು ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿವೆ.












Click it and Unblock the Notifications