Get Updates
Get notified of breaking news, exclusive insights, and must-see stories!

Namma Metro: ಸಿಹಿ ಸುದ್ದಿ: 'ಹಳದಿ ಮಾರ್ಗ'ದಲ್ಲಿ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿ

ಬೆಂಗಳೂರು, ಮಾರ್ಚ್ 07: ಬೆಂಗಳೂರು ಜನರು, ಅದರಲ್ಲೂ ಐಟಿ ಉದ್ಯೋಗಿಗಳ ಬಹುನಿರೀಕ್ಷೆಯ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma metro yellow line) ಗುರುವಾರ ಚೀನಾ ಮೂಲದ ಚಾಲಕ ರಹಿತ ಮೆಟ್ರೋ ರೈಲಿನ ಮೊದಲ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಈ ಕುರಿತು ವಿಡಿಯೋ, ಫೋಟೋಗಳನ್ನು BMRCL ಹಂಚಿಕೊಂಡಿದೆ.

ಯಶಸ್ವಿ ಸಂಚಾರ ನಡೆಸುವ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ನಮ್ಮ ಮೆಟ್ರೋ ರೀಚ್ -5ರ ಮಾರ್ಗವಾದ ಬೊಮ್ಮಸಂದ್ರದಿಂದ ಬೊಮ್ಮನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಹೊಸ ಮೆಟ್ರೋ ರೈಲಿನ ಮೊದಲ ಟ್ರಯಲ್ ರನ್ ಯಶಸ್ವಿಯಾಗಿ ಚಾಲನೆಗೊಂಡಿತು ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

Namma Metro Yellow Line Driverless Metro Rail Successful First Trial Run at Bommasandra track

ಬುಧವಾರವಷ್ಟೇ ಚೀನಾದಿಂದ ಚೆನ್ನೈ ಮಾರ್ಗವಾಗಿ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೋ ಡಿಪೋಗೆ ತರಲಾಗಿದ್ದ ಪ್ರೊಟೋಟೈಪ್ ಆರು ಬೋಗಿಗಳು ಒಂದು ಸೆಟ್ ರೈಲಿನ ಒಳಾಂಗಣ, ಅದರ ವಿಶೇಷತೆ, ಚಾಲನೆ, ಸಾಮರ್ಥ್ಯ ಕುರಿತು ಅಧಿಕಾರಿಗಳು ಸಂಕ್ಷಿವಾಗಿ ಮಾಧ್ಯಮಗಳಿಗೆ ತಿಳಿಸಿದ್ದರು.

ಬುಧವಾರ ಹಳಿಗೆ ಇಳಿದ ಹೊಸ ರೈಲು

ಹಳದಿ ಮಾರ್ಗದ ಹಳಿಗೆ ಇಳಿದ ಚಾಲಕ ರಹಿತ ಈ ರೈಲುಗಳು ಚಾಲಕ ಸಹಿತವಾಗಿ ಬೊಮ್ಮಸಂದ್ರದಿಂದ ತನ್ನ ಮೊದಲ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಗೊಳಿಸಿದೆ. ಆರ್‌ವಿ. ರಸ್ತೆ ಮತ್ತು ಬೊಮ್ಮಸಂದ್ರವು ಒಟ್ಟು 19 ಕಿಲೋ ಮೀಟರ್ ಉದ್ದದ ಐಟಿ ಕಾರಿಡಾರ್ ಸಮಪರ್ಕಿಸುವ ಮಹತ್ವದ ಮೆಟ್ರೋ ಮಾರ್ಗವಾಗಿದೆ.

Namma Metro Yellow Line Driverless Metro Rail Successful First Trial Run at Bommasandra track

ನಮ್ಮ ಮೆಟ್ರೋ ರೈಲಿನ ಅಧಿಕಾರಿಗಳು ಹಂಚಿಕೊಂಡ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ, ಟ್ರೈಲರ್‌ನಿಂದ ಇಳಿಸಿ ಇತ್ತೀಚೆಗೆ ರೈಲು ಬೋಗಿಗಳನ್ನು ಜೋಡಿಸಲಾಗಿತ್ತು. ಆ ರೈಲುಗಳನ್ನು ಬೊಮ್ಮ ಸಂದ್ರ ಮತ್ತು ಆರ್‌ವಿ ರಸ್ತೆ ಟ್ರಾಕ್‌ಗೆ ಬುಧವಾರ ಇಳಿಸಲಾಯಿತು.

ಚಾಲರಿಂದಲೇ ಸಾಗಿದ ಮೆಟ್ರೋ ರೈಲು: ವಿಡಿಯೋ

ಹಳದಿ ಪಟ್ಟಿ ಇರುವ ಈ ಚೀನಾ ನಿರ್ಮಿತ ಮೆಟ್ರೋ ರೈಲು ಬೊಮ್ಮಸಂದ್ರದಿಂದ ಬೊಮ್ಮಾನಹಳ್ಳಿವರೆಗೆ ಬೃಹತ್ ಲೈಟ್ ನ ಬೆಳಕಿನಲ್ಲಿ ಸಾಗಿತು. ಮಾರ್ಗದುದ್ದಕ್ಕೂ ಮೆಟ್ರೋ ಹಾರ್ನ್ ಮಾಡಿಕೊಂಡು ಸಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇದು ಚಾಲಕ ರಹಿತ ಮೆಟ್ರೊ ರೈಲು ಆದರೂ ಸಹಿತ ಸದ್ಯ ಚಾಲಕರ ಸಹಿತವಾಗಿ ಓಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (BRMCL) ನಿರ್ಧರಿಸಿದೆ.

ಸದ್ಯ ಮುಂದಿನ ನಾಲ್ಕು ತಿಂಗಳ ಕಾಲ ವಿವಿಧ ಪರೀಕ್ಷೆಗಳು ನಡೆಯಲಿವೆ. ಒಟ್ಟು ಸುಮಾರು 37 ಪರೀಕ್ಷೆಗಳು ಈ ಹಳದಿ ಮಾರ್ಗದಲ್ಲಿ ನಡೆಯಲಿವೆ. ಅದೆಲ್ಲ ಪೂರ್ಣಗೊಳ್ಳಲು ನಾಲ್ಕು ತಿಂಗಳು ಹಿಡಿಬಹುದು. ಅದಾದ ಬಳಿಕವೇ ಮತ್ತೆ ಅಂತಿಮವಾಗಿ ಪ್ರಾಯೋಗಿಕ ಸಂಚಾರ ನಡೆಸಿ, ಸಿಗ್ನಲ್ ಪರೀಕ್ಷೆ ಮಾಡಿ ಮುಂದಿನ ಜುಲೈಗೆ ವಾಣಿಜ್ಯ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳು ಇವೆ.

ಪರೀಕ್ಷೆಗಳು ವಿಳಂಬವಾದರೆ, ಆಗ ಪ್ರಾಯೋಗಿಕ ಕಾರ್ಯಾಚರಣೆ ಮತ್ತಷ್ಟು ವಿಳಂಬವಾಗಿ ಈ ವರ್ಷಾಂತ್ಯಕ್ಕೆ ಹಳದಿ ಮಾರ್ಗವು ಸಾರ್ವಜನಿಕರಿಗೆ ತೆರೆದುಕೊಳ್ಳಬಹುದು ಅಂತಲೂ ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+