Namma Metro: ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗ, ತುಮಕೂರು ರಸ್ತೆಯ ಹಸಿರು ಮಾರ್ಗ- ಮಹತ್ವದ ಮಾಹಿತಿ, ವಿವರ

ಬೆಂಗಳೂರು, ಅಕ್ಟೋಬರ್‌ 20: ಏಪ್ರಿಲ್ 2024 ರ ವೇಳೆಗೆ ನಮ್ಮ ಮೆಟ್ರೋದ ಹಳದಿ ಮಾರ್ಗ ಹಾಗೂ ಹಸಿರು ಮಾರ್ಗಗಳಿಗೆ ( ವಿಸ್ತರಣೆ ) ಚಾಲನೆ ದೊರೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು. ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ 19 ಕಿಮೀ ಮಾರ್ಗವನ್ನು ಹಳದಿ ಮಾರ್ಗವೆಂದು ಹೆಸರಿಸಲಾಗಿದೆ. ತುಮಕೂರು ರಸ್ತೆಯ ನಾಗಸಂದ್ರದಿಂದ ಮಾದಾವರ ವರೆಗಿನ 3 ಕಿಮೀ ವಿಸ್ತರಣೆಯನ್ನು ಹಸಿರು ಮಾರ್ಗವೆಂದು ಕರೆಯಲಾಗುತ್ತದೆ. ಇವುಗಳು ವಾಣಿಜ್ಯ ಕಾರ್ಯಾಚರಣೆಗಾಗಿ ತೆರೆಯಲಾಗುವುದು ಎಂದು ಸಿಎಂ ಮಾಹಿತಿ ಹಂಚಿಕೊಂಡರು.

ಹಳದಿ ಮಾರ್ಗವು ನಗರದ ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುತ್ತದೆ.

Namma Metro: Yellow Line connecting Electronic City, Green Line on Tumkur Road- Info, Details

ಶುಕ್ರವಾರ ಕೆಆರ್ ಪುರದಿಂದ ಬೈಯಪ್ಪನಹಳ್ಳಿ ಮತ್ತು ಕೆಂಗೇರಿಯಿಂದ ಚಲ್ಲಘಟ್ಟದ ಎರಡು ವಿಸ್ತರಣೆಯ ನಮ್ಮ ಮೆಟ್ರೊದ ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘೋಷಣೆ ಮಾಡಿದರು.

ಸಾರ್ವಜನಿಕ ಒತ್ತಡದ ನಂತರ ಅಕ್ಟೋಬರ್ 9 ರಂದು ನೇರಳೆ ಮಾರ್ಗದ ಎರಡೂ ವಿಸ್ತರಣೆಗಳನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ನಮ್ಮ ಮೆಟ್ರೋದ ಇತಿಹಾಸದಲ್ಲಿ ಮೊದಲ ಬಾರಿಗೆ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾದ ನಂತರ ಹೊಸ ವಿಸ್ತರಣೆಗಳನ್ನು ಅನಾವರಣಗೊಳಿಸಲಾಗಿದೆ. ಎರಡು ವಿಸ್ತರಣೆಗಳು ಒಟ್ಟು ಉದ್ದ 4 ಕಿ.ಮೀ ಆಗಿದೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಮೆಟ್ರೊ 3ನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಕೂಡಲೇ ಅನುಮೋದನೆ ನೀಡುವಂತೆ ಮನವಿ ಮಾಡಿದರು.

Namma Metro: Yellow Line connecting Electronic City, Green Line on Tumkur Road- Info, Details

ಕೆಂಪಾಪುರ-ಜೆಪಿ ನಗರ 4ನೇ ಹಂತ ಮತ್ತು ಹೊಸಹಳ್ಳಿ-ಕಡಬಗೆರೆ ಮಾರ್ಗದ 3ನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಎರಡು ಮಾರ್ಗಗಳ ಒಟ್ಟು ಉದ್ದ 45 ಕಿಮೀ ಆಗಿದೆ. ಈ ಯೋಜನೆಗಳಿಗೆ 15,611 ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಸರ್ಜಾಪುರದಿಂದ ಹೆಬ್ಬಾಳದ ವರೆಗಿನ 37 ಕಿಮೀ ಉದ್ದದ ಬೆಂಗಳೂರು ಮೆಟ್ರೊ ರೈಲು ಯೋಜನೆಯ ಹಂತ-3 ಎ ಗೆ ಡಿಪಿಆರ್ ಸಿದ್ಧವಾಗಿದೆ.

2026ರ ವೇಳೆಗೆ ಪ್ರಯಾಣಿಕರ ಸಂಖ್ಯೆ 20 ಲಕ್ಷ

ನಮ್ಮ ಮೆಟ್ರೊ ಯೋಜನೆಯ ಎರಡನೇ ಹಂತದ ಪಿಂಕ್ ಲೈನ್ (ಕಾಳೇನ ಅಗ್ರಹಾರದಿಂದ ನಾಗವಾರದ ವರೆಗೆ) ಮಾರ್ಚ್ 2025 ರೊಳಗೆ ಪೂರ್ಣಗಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರ, ನಾಗವಾರ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳುವ ನಮ್ಮ ಮೆಟ್ರೋ ಮಾರ್ಗವನ್ನು ಮುಂದಿನ ಎರಡು ವರ್ಷಗಳಲ್ಲಿ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Namma Metro: Yellow Line connecting Electronic City, Green Line on Tumkur Road- Info, Details

ಈ ಮಾರ್ಗಗಳನ್ನು ತೆರೆಯುವುದರೊಂದಿಗೆ ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆ ಪ್ರತಿದಿನ 20 ಲಕ್ಷದ ಗಡಿಯನ್ನು ಮುಟ್ಟಲಿದೆ ಎಂದು ಸಿಎಂ ತಿಳಿಸಿದರು. ಪ್ರಸ್ತುತ ನಮ್ಮ ಮೆಟ್ರೋ 74 ಕಿಮೀ ಕಾರ್ಯಾಚರಣೆಯ ಜಾಲವನ್ನು ಹೊಂದಿದೆ. ದಿನಕ್ಕೆ 7 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸೇವೆಗಳನ್ನು ಬಳಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+