Namma Metro: ನೇರಳೆ ಮಾರ್ಗದ ಪ್ರಯಾಣಿಕರ ಗಮನಕ್ಕೆ..

ಬೆಂಗಳೂರು, ಮಾರ್ಚ್ 09: ಬೆಂಗಳೂರಿನ ನಮ್ಮ ಮೆಟ್ರೋ ನೆರಳೆ ಮಾರ್ಗದಲ್ಲಿ ಕೈಗೊಂಡಿದ್ದ ನಿರ್ವಹಣಾ ಕಾಮಗಾರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪೂರ್ಣಗೊಳಿಸಿದೆ. ಭಾನುವಾರ ಬೆಳಗ್ಗೆ 07 ಗಂಟೆಯಿಂದಲೇ ಸುಮಾರು ಮೂರು ಗಂಟೆಗಳ ಕಾಲ ಕಾಮಗಾರಿ ನಡೆಯಲಿದೆ ಎಂದು ಮೊದಲು ಹೇಳಲಾಗುತ್ತಿದೆ. ಆದರೆ ಎರಡು ಗಂಟೆಯ ಒಳಗೇ (ಬೆಳಗ್ಗೆ 8.55ಕ್ಕೆ) ಕೆಲಸ ಪೂರ್ಣಗೊಳಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಮಾರ್ಚ್ 09.03.2025 ಬೆಳಗ್ಗೆ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಸಂಬಂಧ ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಸಂಚಾರ ಸೇವೆ ಕಡಿತಗೊಳಿಸಿತ್ತು. ಕಾಮಗಾರಿಯಿಂದ ನೇರಳೆ ಮಾರ್ಗದ ಮಾಗಡಿ ರಸ್ತೆಯಿಂದ ಎಂ.ಜಿ. ರಸ್ತೆ ವರೆಗೆ ಸಂಚಾರ ವ್ಯತ್ಯಯಗೊಳಿಸಲಾಗಿತ್ತು. ಕಾಮಗಾರಿ ಕೆಲ ಮುಗಿಯುತ್ತಿದ್ದಂತೆ ಬೆಳಗ್ಗೆ 8.55ರಿಂದ ಚಲಘಟ್ಟ-ವೈಟ್‌ಪಿಲ್ಡ್‌ ವರೆಗೆ ಯಾವ ಅಡೆತಡೆ ಇಲ್ಲದೇ ನೇರಳೆ ಮಾರ್ಗ ಸಂಚಾರ ಮುಕ್ತ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Namma Metro Work Completed Fully Purple Line Open For Commuters From Today 8 55 am onwards

ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ಮಧ್ಯೆ ಹಳಿ ನಿರ್ವಹಣಾ ಕೆಲಸ ನಡೆದಿತ್ತು. ಸುರಕ್ಷಿತ ಸಂಚಾರ ದೃಷ್ಟಿಯಿಂದ ನಡೆದಿದೆ. ಈ ರದ್ದತಿ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳ ಮಾರ್ಗ ಮೆಟ್ರೋ ಸಂಚಾರ ಇರಲಿಲ್ಲ. ಹೀಗಾಗಿ ನಿಲ್ದಾಣಗಳ ಬಾಗಿಲು ಮುಚ್ಚಲಾಗಿತ್ತು.

ಬೆಳಗ್ಗೆ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ನಿಗದಿತ ಸಮಯ (10 ಗಂಟೆವರೆಗೆ) ಒಂದು ಗಂಟೆ ಮೊದಲೇ ಎಲ್ಲ ಬಾಗಿಲು ತೆರೆದು ಸಂಪೂರ್ಣವಾಗಿ ಮೆಟ್ರೋ ಸೇವೆ ನೀಡಲಾಗುತ್ತಿದೆ. ಈ ವೇಳೆ ಮೆಟ್ರೋ ಕ್ಯೂಆರ್ ಟಿಕೆಟ್‌ಗಳ ಖರೀದಿಗೆ ಅವಕಾಶ ನೀಡಿರಲಿಲ್ಲ. ಈ ವ್ಯವಸ್ಥೆ ನಿಷ್ಕ್ರಿಯಗೊಳಿಸಲಾಗಿತ್ತು. ನೇರಳೆ ಮಾರ್ಗದಲ್ಲಿನ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಲ್ಲಿ ರೈಲು ಲಭ್ಯವಾಗುತ್ತಿಲ್ಲ, ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಮತ್ತು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಪ್ರಯಾಣಿಸಲು ಸಾರ್ವಜನಿಕರು ಕ್ಯೂಆರ್ ಟಿಕೆಟ್, ಟೋಕನ್ ಖರೀದಿಗೆ ಮೆಟ್ರೋ ನಿರ್ದೇಶಿಸಿತ್ತು.

Take a Poll

ಸೋಮವಾರ ಹಾಗೂ ಇತರ ದಿನಗಳಲ್ಲಿ ಈ ಕಾಮಗಾರಿ ಹಮ್ಮಿಕೊಂಡಿದ್ದಲ್ಲಿ ಲಕ್ಷಾಂತರ ಜನ ಪ್ರಯಾಣಿಕರಿಗೆ ತೊಂದರೆ ಆಗುತ್ತಿತ್ತು. ಈ ಕಾರಣದಿಂದಲೇ ಭಾನುವಾರ ಮೂರು ಗಂಟೆಯ ಕಾರ್ಯವನ್ನು ಕೇವಲ ಎರಡು ಗಂಟೆಯಲ್ಲಿ ಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರಿಂದ ಪ್ರಯಾಣಿಕರಿಗೆ ಅಷ್ಟೇನು ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.

ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳು ಎಂದಿನಂತೆ ಸಂಚಾರ ಆರಂಭಿಸಿವೆ. ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು BMRCL ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+