Namma Metro: ಪ್ರಯಾಣಿಕರ ಸಂಚಾರದಲ್ಲಿ ಆ.14ರಂದು ಸಾರ್ವಕಾಲಿಕ ದಾಖಲೆ: BMRCL ಹರ್ಷ
ಬೆಂಗಳೂರು, ಆಗಸ್ಟ್ 15: ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಅತ್ಯಧಿಕ ಪ್ರಯಾಣಿಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಹಾಗೂ ಸಾಲು ಸಾಲು ರಜಾದಿನಗಳು ಇರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದಲ್ಲಿ ಸಂಚರಿಸುವವರ ಒಂದೇ ದಿನದಲ್ಲಿ ಅತ್ಯಧಿಕ ಗರಿಷ್ಠ ಪ್ರಮಾಣ ತಲುಪಿದೆ. ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ (ಎಕ್ಸ್)ದಲ್ಲಿ ಮಾಹಿತಿ ನೀಡಿರುವ ನಮ್ಮ ಮೆಟ್ರೋ (Namma Metro), ನೆನ್ನೆ ಆಗಸ್ಟ್ 14ರಂದು ಒಂದೇ ದಿನ ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಬರೋಬ್ಬರಿ 9.17 ಲಕ್ಷ ಮಂದಿ ಸಂಚಾರ ನಡೆಸಿದ್ದಾರೆ ಎಂದು ತಿಳಿಸಿದೆ. ಇದು ಈವರೆಗಿನ ಅತೀ ಹೆಚ್ಚು ಸಂಖ್ಯೆಯಾಗಿದೆ.

ನಮ್ಮ ಮೆಟ್ರೋ ಕಳೆದ ಒಂದೆರೆಡು ತಿಂಗಳಿಂದನಿಂದ ಕ್ರಮೇಣ ಮೆಟ್ರೋ ಪ್ರಯಾಣಿಕರನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿತ್ತು. ಇದೀಗ ಸ್ವಾತಂತ್ರ್ಯ ದಿನಾಚರಣೆ ರಜಾದಿನ, ಪ್ಲಾವರ್ ಶೋ ಸೇರಿದಂತೆ ಹೆಚ್ಚು ರಜೆಗಳ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಇತ್ತೀಚೆಗೆ ಆಗಸ್ಟ್ 06ರಂದು ನಮ್ಮ ಮೆಟ್ರೋದಲ್ಲಿ ಒಂದೇ ದಿನ ಬರೋಬ್ಬರಿ 8.26ಲಕ್ಷ ಮಂದಿ ಸಂಚರಿಸಿದ್ದರು. ಇದೇ ಈವರೆಗಿನ ದಾಖಲೆಯಾಗಿತ್ತು. ಇದೀಗ ಒಂದೇ ವಾರದಲ್ಲಿ ಆ ದಾಖಲೆ ಉಡೀಸ್ ಆಗಿದೆ. ಇದು ಮೆಟ್ರೋ ಆರಂಭವಾದ ಕಳೆದ ಸುಮಾರು 12ವರ್ಷಗಳ ಸಾರ್ವಕಾಲಿಕ ದಾಖಲೆ ಆಗಿದೆ.
BMRCL heartily thanks its commuters in setting up a new record travel of 9.17 lakhs on 14th Aug 2024 . We will continue to strive towards better commuter service.
— ನಮ್ಮ ಮೆಟ್ರೋ (@OfficialBMRCL) August 15, 2024
ಯಾವ ಮಾರ್ಗದಲ್ಲಿ ಎಷ್ಟೇಷ್ಟು ಜನ ಪ್ರಯಾಣ? ಆದಾಯದ ಲೆಕ್ಕ
ಆಗಸ್ಟ್ 14ರಂದು ನಮ್ಮ ಮೆಟ್ರೋ ಮೊದಲ ಲೈನ್ ನೇರಳೆ ಮಾರ್ಗದಲ್ಲಿ 4,43,343 ಮಂದಿ ಪ್ರಯಾಣ ಮಾಡಿದ್ದಾರೆ. ಇನ್ನೂ ಹಸಿರು ಮಾರ್ಗದಲ್ಲಿ 3,01,775 ಮಂದಿ ಓಡಾಡಿದ್ದಾರೆ. ಇನ್ನೂ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಒಟ್ಟು 1,67, 758 ಮಂದಿ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದ ಒಂದೇ ದಿನದಲ್ಲಿ ಬರೋಬ್ಬರಿ 2,11,62,300 ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕೃತ ಮಾಹಿತಿ ನೀಡಿದೆ.












Click it and Unblock the Notifications