Namma metro: ಈ ಮೆಟ್ರೋ ನಿಲ್ದಾಣಗಳಲ್ಲಿ ವಾಟರ್ ಪ್ರೂಫಿಂಗ್, ಎಲ್ಲೆಲ್ಲಿ ಹಾಗೂ ಉದ್ದೇಶ ಏನು?
ಬೆಂಗಳೂರು, ಏಪ್ರಿಲ್, 02: ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನದ ಪ್ರಮಾಣ ಏರಿಕೆಯಾಗುತ್ತಿದ್ದು, ಇದರಿಂದ ಜನರು ಬೇಸತ್ತು ಬೆಂಡಾಗಿದ್ದಾರೆ. ಇನ್ನು ಮತ್ತೊಂದೆಡೆ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಏಪ್ರಿಲ್ ಅಂತ್ಯದಲ್ಲಿ ರಾಜ್ಯ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ. ಅದರಲ್ಲೂ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಮಳೆಗಾಲ ಆರಂಭವಾಗದರೆ ಸಾಕು ನೀರು ಸೋರಲಾರಂಭಿಸುತ್ತದೆ. ಇದನ್ನು ತಡೆಗಟ್ಟಲು ಮಹತ್ವದ ನಿರ್ಧಾರಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ.
ಮಳೆಗಾಲ ಆರಂಭ ಆಗುತ್ತಿದ್ದಂತೆಯೇ ಬೆಂಗಳೂರಿನ ಮೆಟ್ರೊ ನಿಲ್ದಾಣಗಳಲ್ಲಿ ನೀರು ಸೋರಲಾರಂಭಿಸುತ್ತದೆ. ಇನ್ನು ಈ ಸಮಸ್ಯೆಗೆ ನಾಂದಿ ಆಡುವ ಉದ್ದೇಶದಿಂದ ವಾಟರ್ ಪ್ರೂಫಿಂಗ್ ಕಾಮಗಾರಿಯನ್ನು ಕೈಗೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದೆ. ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಯಾವ್ಯಾವ ನಿಲ್ದಾಣಗಳಲ್ಲಿ ವಾಟರ್ ಪ್ರೂಫಿಂಗ್ ಕಾಮಗಾರಿ?
* ಕಬ್ಬನ್ ಪಾರ್ಕ್
* ವಿಧಾನಸೌಧ
* ಸರ್ ಎಂ.ವಿಶ್ವೇಶ್ವರಯ್ಯನಿಲ್ದಾಣ (ಸೆಂಟ್ರಲ್ ಕಾಲೇಜು)
* ನಾಡಪ್ರಭು ಕೆಂಪೇಗೌಡ ನಿಲ್ದಾಣ
* ಕಂಠೀರವ ಸಂಗೊಳ್ಳಿ ರಾಯಣ್ಣ(ಸಿಟಿ ರೈಲ್ವೆ ನಿಲ್ದಾಣ) ಅಂಡರ್‌ಗ್ರೌಂಡ್ ನಿಲ್ದಾಣಗಳ ಕಾಮಗಾರಿಗೆ ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ.
ಕಾಮಗಾರಿ ಆರಂಭ ಯಾವಾಗ?: ಕಾಮಗಾರಿ ಮುಗಿಸಲು ಬಿಎಂಆರ್‌ಸಿಎಲ್ ಬರೋಬ್ಬರಿ ಒಂದೂವರೆ ವರ್ಷ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮೆಟ್ರೊ ಸಂಚಾರದ ವೇಳೆ ನಿಲ್ದಾಣದಲ್ಲಿ ಕೆಲಸ ಮಾಡಲಾಗುವುದಿಲ್ಲ. ರಾತ್ರಿ ಸಂಚಾರ ಮುಗಿದ ಮೇಲೆ ಹಾಗೂ ಮುಂಜಾನೆ ಸಂಚಾರ ಆರಂಭ ಆಗುವುದರೊಳಗೆ ಮಾತ್ರ ಕಾಮಗಾರಿ ಮಾಡಬೇಕಾಗುತ್ತದೆ.
ನೀರು ಸೋರಿಕೆ ಆಗುವ ಸ್ಥಳದಲ್ಲಿ ಬಕೆಟ್‌ಗಳನ್ನು ಇಡುತ್ತಿದ್ದ ದೃಶ್ಯ ಮೆಟ್ರೊ ನಿಲ್ದಾಣದ ಕೆಡಿಸಿದ್ದವು. ಇದನ್ನೆಲ್ಲಾ ಸರಿಪಡಿಸುವ ಹಿನ್ನೆಲೆ ಬಿಎಂಆರ್‌ಸಿಎಲ್ ಮುಂದಾಗಿದೆ. ವಿಧಾನಸೌಧ, ಸರ್.ಎಂ.ವಿಶ್ವೇಶ್ವರಯ್ಯ ನಿಲ್ದಾಣ, ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್), ಕಬ್ಬನ್‌ಪಾರ್ಕ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಗಳಲ್ಲಿ ನೀರು ಸೋರುವ ಸಮಸ್ಯೆ ಕಂಡು ಬಂದಿತ್ತು.
ಈ ಭಾಗಗಳಲ್ಲಿ ಮಳೆ ಬಂದಾಗ ಭೂಮಿ ಸೇರುವ ನೀರು, ಸುರಂಗ ಮಾರ್ಗದಲ್ಲಿ ಸೋರುತ್ತಿದೆ. ಸುರಂಗ ಮಾರ್ಗದ ಹಳಿಯ ಬದಿಯ ಗೋಡೆಯಲ್ಲಿ ಸಿಮೆಂಟ್ ಹಾಕಿ ಸಣ್ಣ ರಂಧ್ರಗಳನ್ನು ಮುಚ್ಚಿದ್ದರೂ ನೀರು ಹೊರಬರುವುದು ಮಾತ್ರ ನಿಂತಿರಲಿಲ್ಲ. ಪ್ರಯಾಣಿಕರು ಸಂಚರಿಸುವ ಸ್ಥಳದಲ್ಲೂ ನೀರು ಸೋರಿದ್ದರಿಂದ ಪ್ರಯಾಣಿಕರು ಹಲವಾರು ಬಾರಿ ಜಾರಿ ಬಿದ್ದ ಉದಾಹರಣೆಗಳು ಕೂಡ ಇವೆ.
ನೀರು ಸೋರುವುದೇಕೆ?: ನೀಲಿ ಮಾರ್ಗದಲ್ಲಿ ಸುರಂಗದಲ್ಲಿರುವ ಮೆಟ್ರೊ ನಿಲ್ದಾಣಗಳ ಆಸುಪಾಸು ಅಂತರ್ಜಲ ಮಟ್ಟ ನೆಲದಿಂದ ಕೇವಲ 4-5 ಮೀಟರ್ ಆಳದಲ್ಲಿ ಇದೆ. ಆದರೆ ಮೆಟ್ರೊ ನಿಲ್ದಾಣಗಳಿರುವುದು ನೆಲದಿಂದ 15-16 ಮೀಟರ್ ಕೆಳಗಡೆ. ಆದ್ದರಿಂದ ಈ ಭಾಗದ ನಿಲ್ದಾಣಗಳಲ್ಲಿಅಂತರ್ಜಲ ಸೋರುತ್ತಿದೆ. ಗೋಡೆಗಳನ್ನು ನಿರ್ಮಿಸಿ, ಸಾಕಷ್ಟು ಭದ್ರವಾಗಿ ಸೀಲ್ ಮಾಡಿದ್ದರೂ, ಹತ್ತಾರು ಕಡೆಗಳಲ್ಲಿ ನೀರು ಸೋರುತ್ತಲಿದೆ.












Click it and Unblock the Notifications