Namma Metro: 63 ನಿಲ್ದಾಣಗಳ ಪೈಕಿ 17 ನಿಲ್ದಾಣಗಳಲ್ಲಿ ಮಾತ್ರ ಫೀಡರ್ ಬಸ್ ಸೇವೆ- ಎಲ್ಲೆಲ್ಲಿ ತಿಳಿಯಿರಿ
ಬೆಂಗಳೂರು, ಜುಲೈ 07: ನಮ್ಮ ಮೆಟ್ರೊದ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 6.1 ಲಕ್ಷವನ್ನು ದಾಟಿದೆ. ಆದರೆ, ಮೆಟ್ರೊ ನಿಲ್ದಾಣಗಳಿಗೆ ಒದಗಿಸುವ ಫೀಡರ್ ಬಸ್ ಸೇವೆಯು ವ್ಯವಸ್ಥೆಯು ಇನ್ನೂ ಅಭಿವೃದ್ಧಿ ಹೊಂದಿಲ್ಲವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮೆಟ್ರೋ ನಿಲ್ದಾಣಗಳಲ್ಲಿ ಫೀಡರ್ ಬಸ್ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಸುಮಾರು 70 ಕಿ.ಮೀ ನೆಟ್‌ವರ್ಕ್‌ನ 63 ನಿಲ್ದಾಣಗಳಲ್ಲಿ 17 ಮಾತ್ರ ಸೌಲಭ್ಯವನ್ನು ಹೊಂದಿವೆ.

ಪ್ರತಿದಿನ 1,752 ಟ್ರಿಪ್‌ಗಳನ್ನು ನಿರ್ವಹಿಸಲು 95 ಫೀಡರ್ ಬಸ್‌ಗಳನ್ನು ಬಿಎಂಟಿಸಿ ನಿಯೋಜಿಸುತ್ತಿದೆ. ಆದರೆ, ಇದಕ್ಕೆ 54,450 ಟ್ರಿಪ್‌ಗಳನ್ನು ನಿಯೋಜಿಸಲು 6,700 ಬಸ್‌ಗಳ ಅನಿವಾರ್ಯವಿದೆ. ಫೀಡರ್ ಸೇವೆಗಳಿಗಾಗಿ ಬಿಎಂಟಿಸಿಯು ಶೇ 2ರಷ್ಟು ಬಸ್‌ಗಳನ್ನು ಸಹ ಸಹ ಬಳಸುತ್ತಿಲ್ಲ ಎಂದು ಸಂಖ್ಯೆಯು ಸೂಚಿಸುತ್ತದೆ. 2020 ರಲ್ಲಿ, ಬಿಎಂಟಿಸಿ 107 ಫೀಡರ್ ಬಸ್‌ಗಳನ್ನು ಓಡಿಸುತ್ತಿತ್ತು, ಆದರೆ 2022 ರಲ್ಲಿ ಸಂಖ್ಯೆ 95 ಕ್ಕೆ ಇಳಿದಿದೆ ಎಂದು ವರದಿಯಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, 'ಎಲ್ಲಾ ಮಾರ್ಗಗಳಲ್ಲಿ ಸೇವೆಗಳನ್ನು ಒದಗಿಸುವ ಪ್ರಸ್ತಾಪವಿಲ್ಲ. ನಾವು ಇಪಿಕೆಎಂ (ಪ್ರತಿ ಕಿಮೀಗೆ ಆದಾಯ) 42 ರೂಗಳನ್ನು ಪಡೆಯುತ್ತಿದ್ದೇವೆ. ಆದರೆ ಪ್ರತಿ ಕಿಮೀಗೆ ಕಾರ್ಯಾಚರಣೆಯ ವೆಚ್ಚವು 70 ರೂ. ಆಗಿದೆ. ಇತರ ಮಾರ್ಗಗಳಿಗಿಂತ ಭಿನ್ನವಾಗಿ, ಫೀಡರ್ ಸೇವೆಗಳು ಕಡಿಮೆ ಮಾರ್ಗದ ಉದ್ದವನ್ನು ಮತ್ತು ಕಡಿಮೆ ವಾಹನ ಬಳಕೆಯನ್ನು ಹೊಂದಿವೆ. ನಷ್ಟದ ಹೊರತಾಗಿಯೂ, ನಾವು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳನ್ನು ಓಡಿಸುವುದನ್ನು ಮುಂದುವರಿಸುತ್ತೇವೆ' ಎಂದು ಹೇಳಿದ್ದಾರೆ.

ಬಿಎಂಟಿಸಿ ತಿಂಗಳಿಗೆ 2.5 ಕೋಟಿ ನಷ್ಟವನ್ನು ಅನುಭವಿಸುತ್ತಿದೆ. ನಾವು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಅನ್ನು ಸಂಪರ್ಕಿಸಿ ಸಹಾಯ ಕೇಳಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಫೀಡರ್ ಸೇವೆಗಳನ್ನು ಆರ್ಥಿಕವಾಗಿ ಸಶಕ್ತಗೊಳಿಸಲು, ನಾವು ಹಣಕಾಸಿನ ನೆರವು ಕೇಳಿದ್ದೇವೆ. ಇದಕ್ಕಾಗಿ DULT ಮತ್ತು BMRCL ಅನ್ನು ಸಂಪರ್ಕಿಸಿದ್ದೇವೆ. DULT ಭವಿಷ್ಯದಲ್ಲಿ ಸಹಾಯ ಮಾಡಲು ಭರವಸೆ ನೀಡಿದೆ' ಎಂದು ಅಧಿಕಾರಿ ಹೇಳಿದ್ದಾರೆ. ವರ್ಷದ ಅಂತ್ಯದ ವೇಳೆಗೆ, BMRCL 40 ಕಿಮೀ ಹೊಸ ಮೆಟ್ರೋ ಮಾರ್ಗಗಳನ್ನು ಆರಂಭಿಸಲು ಸಜ್ಜಾಗಿದೆ.












Click it and Unblock the Notifications