Namma Metro: ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೆಟ್ರೋ ಟಿಕೆಟ್ ಖರೀದಿಗೆ ಹೊಸ ಪ್ಲಾನ್

ಬೆಂಗಳೂರು, ಜೂನ್ 30: ಬೆಂಗಳೂರು ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ ಕಾಮಗಾರಿ ನಡೆಯುತ್ತಿವೆ. ಹಾಲಿ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ದಟ್ಟಣೆ ಕಡಿಮೆಗೆ ಹೊಸ ಸೌಲಭ್ಯಗಳನ್ನು ಒದಗಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇದೀಗ ಮಲ್ಟಿ ಅಪ್ಲಿಕೇಷನ್‌ಗಳಲ್ಲಿ ಮೆಟ್ರೋ ಟಿಕೆಟ್ ಲಭ್ಯವಾಗುವಂತೆ ಮಾಡುತ್ತಿದೆ.

ಹೌದು, ನಮ್ಮ ಮೆಟ್ರೋದಲ್ಲಿ ನೀವು ಸಂಚಾರ ಮಾಡಬೇಕಾದರೆ ಸದ್ಯ ಟಿಕೆಟ್ (ಟೋಕನ್) ಖರೀದಿ ವ್ಯವಸ್ಥೆ ಇದೆ. ಸ್ಮಾರ್ಟ್ ಕಾರ್ಡ್ ಬಳಕೆ, ವಾಟ್ಸಾಪ್ ಚಾಟ್‌ಬಾಟ್, ಕ್ಯೂಆರ್ ಕೋಡ್, ನಮ್ಮ ಮಟ್ರೋ ಆಪ್‌ ಮೂಲಕ ಟಿಕೆಟ್ ಖರೀದಿಸುತ್ತೀರಿ. ಕೆಲವೊಮ್ಮೆ ಅಂದರೆ ಗಣರಾಜ್ಯೋತ್ಸವ, ಫಲಪುಷ್ಪ ಪ್ರದರ್ಶನ, ಕ್ರಿಕೆಟ್ ಪಂದ್ಯಾವಳಿ ವೇಳೆ ನಿಲ್ದಾಣಗಳಲ್ಲಿ ಜನ ದಟ್ಟಣೆ ಕಡಿಮೆ ಮಾಡಲು ಪೇಪರ್ ಟಿಕೆಟ್ ಕೊಡಲಾಗುತ್ತದೆ. ಇದೀಗ ಬಿಎಂಆರ್‌ಸಿಎಲ್ ಅಧಿಕಾರಿಗಳು ಓಪನ್ ನೆಟ್‌ವರ್ಕ್‌ ಡಿಜಿಟಲ್ ಕಾಮರ್ಸ್ (ONDC) ಸಹಕಾರದಲ್ಲಿ ಈ ಹೊಸ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.

Namma Metro Tickets Available in 10 More Multiple Apps Soon BMRCL says

ಎಷ್ಟು ಆಪ್‌ಗಳಲ್ಲಿ ಟಿಕೆಟ್ ಖರೀದಿಸಬಹುದು?

ಸಾರ್ವಜನಿಕರಿಗೆ ಪ್ರಯಾಣ ಸುಗಮಗೊಳಿಸಲು, ವಿವಿಧ ಆಪ್‌ಗಳ ಮೂಲಕ ನೀವು ಟಿಕೆಟ್ ಖರೀದಿಸಿ ಸಂಚರಿಸಬಹುದಾಗಿದೆ. ಸ್ಮಾರ್ಟ್ ಕಾರ್ಡ್ ಖರೀದಿ, ರಿಚಾರ್ಜ್ ಮಾಡಲು ಅನುಕೂಲವಾಗುತ್ತದೆ. ONDC ಸಂಯೋಜನೆ ಬಳಿಕ ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್, ನಮ್ಮ ಯಾತ್ರಿ, ರಾಪಿಡೋ ಸೇರಿದಂತೆ 10ಕ್ಕೂ ಹೆಚ್ಚು ಆಪ್‌ಗಳಲ್ಲಿ ನೀವು ನಮ್ಮ ಮೆಟ್ರೋ ಟಿಕೆಟ್ ಖರೀದಿ ಮಾಡಬದಾಗಿದೆ.

ಯಾವಾಗ ಸೇವೆ ಲಭ್ಯ?

ಸದ್ಯ ಈ ಆಪ್‌ಗಳಲ್ಲಿ ಟಿಕೆಟ್ ಖರೀದಿ ಪ್ರಕ್ರಿಯೆ ಪ್ರಾಯೋಗಿಕ ಪರೀಕ್ಷೆಗಳು, ಪರೀಶಿಲನೆ ನಡೆಯುತ್ತಿದೆ. ಅಧಿಕಾರಿಗಳು, ತಜ್ಞರು ಸಾಧಕ ಬಾಧಕ ನೋಡಿಕೊಂಡು ಮುಂದಿನ ಕೆಲವೇ ತಿಂಗಳುಗಳಲ್ಲಿ (3-4 ತಿಂಗಳು) ಈ ಸೇವೆಯನ್ನು ಲೋಕಾರ್ಪಣೆಗೊಳಿಸುವ ನಿರೀಕ್ಷೆ ಇದೆ.

Namma Metro Tickets Available in 10 More Multiple Apps Soon BMRCL says

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಹತ್ತು ಸ್ವಯಂ ಟಿಕೆಟ್ ವಿತರಣೆ ಯಂತ್ರಗಳನ್ನು ಅಳವಡಿಸಿದೆ. ಇದರಿಂದ ಅರ್ಧ ನಿಮಿಷದಲ್ಲಿ ಟಿಕೆಟ್ ಅನ್ನು ಪ್ರಯಾಣಿಕರೇ ಸ್ವಯಂ ಆಗಿ ಪಡೆಯಬಹುದು. ಇದರಿಂದ ಟಿಕೆಟ್ ಗಾಗಿ ಸಾಲುಗಟ್ಟಿ ನಿಲ್ಲುವುದು ತಪ್ಪುತ್ತದೆ. ಸಮಯ ಉಳಿಯುತ್ತದೆ. ದಟ್ಟಣೆ ವೇಳೆ ಸಹಾಯವಾಗಲಿದೆ. ಇದೇ ಯಂತ್ರಗಳನ್ನು ಮುಂದಿನ ದಿನಗಳಲ್ಲಿ ಎಲ್ಲ ನಿಲ್ದಾಣಗಳಲ್ಲಿ ವಿಸ್ತರಣೆ ಆಗಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+